ಸುಳ್ಯ ಅಮರ ಹೆರಿಟೇಜ್ ಪೌಂಡೇಶನ್ (ರಿ.)ಗ್ರಾಮ ಪಂಚಾಯತ್ ಬೆಳ್ಳಾರೆ, ಸ್ನೇಹಿತರ ಕಲಾ ಸಂಘ-ಬೆಳ್ಳಾರೆ, ಅಕ್ಷಯ ಯುವಕ ಮಂಡಲ – ನೆಟ್ಟಾರು ಇವರ ಆಶ್ರಯದಲ್ಲಿ ಅಮರ ಸುಳ್ಯ ವಿಜಯ ಸ್ಮರಣೆ ದಿವಸ್

Picture of Savistara

Savistara

Bureau Report

ಅಮರ ಸುಳ್ಯ ಹೆರಿಟೇಜ್ ಪೌಂಡೇಶನ್ (ರಿ.)ಗ್ರಾಮ ಪಂಚಾಯತ್ ಬೆಳ್ಳಾರೆ, ಸ್ನೇಹಿತರ ಕಲಾ ಸಂಘ-ಬೆಳ್ಳಾರೆ, ಅಕ್ಷಯ ಯುವಕ ಮಂಡಲ – ನೆಟ್ಟಾರು ಇವರ ಆಶ್ರಯದಲ್ಲಿ 1837ರ ಅಮರ ಸುಳ್ಯ ಸ್ವಾತಂತ್ರ್ಯ ಹೋರಾಟದ 188ನೇ ವರ್ಷದ ಸ್ಮರಣಾರ್ಥವಾಗಿ ಅಮರ ಸುಳ್ಯ ವಿಜಯ ಸ್ಮರಣೆ ದಿನ ಕಾರ್ಯಕ್ರಮವನ್ನು ಮಾರ್ಚ್ 30ರಂದು ಪೂರ್ವಾಹ್ನ 9 ಗಂಟೆಗೆ ಬೆಳ್ಳಾರೆ ಕರ್ನಾಟಕ ಪಬ್ಲಿಕ್ ಸ್ಕೂಲ್ ಸಭಾಂಗಣದಲ್ಲಿ ನಡೆಯಲಿದೆ.

ಈ ಸಂದರ್ಭದಲ್ಲಿ ಧ್ವಜಾರೋಹಣ ಕಾರ್ಯಕ್ರಮವನ್ನು ಐತಿಹಾಸಿಕ ಬಂಗ್ಲೆಗುಡ್ಡೆ-ಬೆಳ್ಳಾರೆ ಇಲ್ಲಿ ನಡೆಯಲಿದ್ದು ಬೆಳ್ಳಾರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ನಮಿತಾ ಎಲ್. ರೈ ನೆರವೇರಿಸಲಿದ್ದಾರೆ.

ಪೂರ್ವಾಹ್ನ 10ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಭಾಗೀರಥಿ ಮುರುಳ್ಯ ಇವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.

ಈ ಸಂದರ್ಭದಲ್ಲಿ ಕರ್ನಾಟಕ ಭಾಷಾ ಅಲ್ಪಸಂಖ್ಯಾತರ ಒಕ್ಕೂಟ ರಾಜ್ಯಾಧ್ಯಕ್ಷರಾದ ಪ್ರತೀಕ್ ಪೊನ್ನಣ್ಣ, ಬೆಳ್ಳಾರೆ ಪ್ರಾ.ಕೃ.ಪ.ಸ. ಸಂಘದ ಅಧ್ಯಕ್ಷ ಶ್ರೀ ರಾಮಕೃಷ್ಣ ಭಟ್ ಕುರುಂಬುಡೇಲು, ,ಕೆ.ಪಿ.ಎಸ್. ಶಾಲಾಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷ ಶ್ರೀ ಶ್ರೀನಾಥ್ ರೈ ಬಾಳಿಲ ಕಾರ್ಯಕ್ರಮದ ಅಭ್ಯಾಗತರಾಗಿ ಭಾಗವಹಿಸಲಿದ್ದಾರೆ.

ಪ್ರಧಾನ ವಕ್ತಾರಾಗಿ ಸವಣೂರು ವಿದ್ಯಾರಶ್ಮಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸೀತಾರಾಮ ಕೇವಳ, ಪ್ರಸ್ತಾವನೆ : ಅಮರ ಸುಳ್ಯ ಹೆರಿಟೇಜ್ ಫೌಂಡೇಶನ್ ಅಧ್ಯಕ್ಷ ಅನಿಂದಿತ್ ಕೆ. ಎಸ್. ನಡೆಸಿಕೊಡದಿದ್ದಾರೆ.

News Updates

ಪುತ್ತೂರು ಚಲೋ ಕಾರ್ಯಕ್ರಮ ಯಶಸ್ವಿ, ಸಾವಿರ ಸಂಖ್ಯೆಯಲ್ಲಿ ಆಗಮಿಸಿದ ಹಿಂದೂ ಬಾಂಧವರು : ಓಲೈಕೆ ರಾಜಕಾರಣದ ಪರಾಕಷ್ಟೇ ಮಿತಿ ಮೀರಿದ್ದು, ಗೃಹ ಇಲಾಖೆ ಬಳಸಿಕೊಂಡು ಹಿಂದೂಗಳನ್ನು ದಮನಿಸುವ ಯತ್ನವನ್ನು ಸಹಿಸಲು ಅಸಾಧ್ಯ – ಶ್ರೀಕಾಂತ್ ಶೆಟ್ಟಿ

News Updates

ಮಂಗಳೂರಿನಲ್ಲಿ ಸ್ಮರಣಿಕೆ ತಯಾರಿಕಾ ಸಂಸ್ಥೆಯಾದ ‘ಮೈಟ್ರೀ ಕಾರ್ವಿಂಗ್ಸ್’ ನ ನೂತನ ಘಟಕ “ದಕ್ಷಿಣಾ” ದ ಶುಭಾರಂಭ | ಅತ್ಯಾಕರ್ಷಕ ಮರದ ಕೆತ್ತನೆಗಳು, ವಿಶಿಷ್ಟ ಶೈಲಿಯ ಸ್ಮರಣಿಕೆಗಳು ಹಾಗೂ ಗ್ರಾಹಕರ ಅಭಿರುಚಿಗೆ ತಕ್ಕಂತೆ ವಿನ್ಯಾಸಗೊಳಿಸಿದ ಕಲಾಕೃತಿಗಳು ಲಭ್ಯ: ಸುಜಿತ್ ಪ್ರತಾಪ್

[t4b-ticker]
error: Content is protected !!