ಮಹಾನಾಯಕನನ್ನು ಪೊಲೀಸರೇ ತನಿಖೆ ಮಾಡಿ ಹುಡುಕಬೇಕು : ಸಚಿವ ಸತೀಶ್ ಜಾರಕಿಹೊಳಿ

Picture of Savistara

Savistara

Bureau Report

ಸಚಿವ ಸತೀಶ್ ಜಾರಕಿಹೊಳಿ ಅವರು ಮಹಾನಾಯಕನನ್ನ ಪೊಲೀಸರೇ ತನಿಖೆ ಮಾಡಿ ಹುಡುಕಬೇಕು ಎಂದು ಹೇಳಿದ್ದಾರೆ.

ಬೆಂಗಳೂರು : ಮಹಾನಾಯಕನನ್ನು ನಾವೆಲ್ಲಿ ಹುಡುಕೋದು. ಪೊಲೀಸರೇ ಹುಡುಕಬೇಕು ಎಂದು ಸಚಿವ ಸತೀಶ್ ಜಾರಕಿಹೊಳಿ ಸೂಚ್ಯವಾಗಿ ತಿಳಿಸಿದ್ದಾರೆ.ಆಗಾಗ ಮಹಾನಾಯಕನ ಹೆಸರು ಕೇಳಿಬರುತ್ತಿದ್ದು, ಆ ಮಹಾನಾಯಕ ಯಾರು ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸುತ್ತಾ, ಮಹಾನಾಯಕರು ದೇಶದಲ್ಲಿ ಸುಮಾರು ಇದ್ದಾರೆ. ಹುಡುಕುವುದಕ್ಕೆ ಸಮಯ ಬೇಕಾಗುತ್ತದೆ. ಪೊಲೀಸರು ಹುಡುಕಲಿ.‌ ಬೇರೆ ರಾಜ್ಯಗಳಲ್ಲಿ ಅಂತ ಘಟನೆಗಳು ಆಗಿದೆ. ನಮ್ಮ ರಾಜ್ಯದಲ್ಲಿ ಆದ ಉದಾಹರಣೆ ಇದೆ. ಇವರೇ, ಅವರೇ ಅಂತ ಹೇಳೋಕೆ ಆಗಲ್ಲ. ಪೊಲೀಸರು ಏನು ತನಿಖೆ ಮಡ್ತಾರೆ ಮಾಡಲಿ ಕಾದು ನೋಡೋಣ ಎಂದರು.ಎಂಎಲ್​ಸಿ ರಾಜೇಂದ್ರ ಕ್ಯಾತ್ಸಂದ್ರದಲ್ಲಿ ಪೊಲೀಸರಿಗೆ ದೂರು ಕೊಟ್ಟಿದ್ದಾರೆ. ಪೊಲೀಸರೇ ತನಿಖೆ ಮಾಡಿ ಹೇಳಬೇಕು. ಆ ನಾಯಕ ಯಾರು ಅಂತ ತ‌ನಿಖೆ ಮಾಡಿ ಹೇಳಬೇಕು. ಯಾರ ಮೇಲೆ ಆರೋಪ ಮಾಡೋಕೆ ನಮಗೆ ಅಧಿಕಾರ ಇಲ್ಲ. ಪ್ರಭಾವಿ ನಾಯಕರು ಯಾರು ಅಂತ ಪೊಲೀಸರೇ ಕಂಡು ಹಿಡಿಯಬೇಕು. ನಾವೇನು ತನಿಖಾ ಏಜೆನ್ಸಿ ಅಲ್ಲ, ಕಾದು ನೋಡೋಣ ಎಂದು ಹೇಳಿದರು.

ಸುದ್ದಿ ಆಗುವಂತದ್ದು ಏ‌ನೂ ಇಲ್ಲ : ಸಚಿವ ಹೆಚ್. ಸಿ ಮಹದೇವಪ್ಪ ಭೇಟಿ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ನಮ್ಮದು ಮಹದೇವಪ್ಪ ಅವರದು 30 ವರ್ಷಗಳ ಸ್ನೇಹ. ಈ ಭೇಟಿಗೆ ವಿಶೇಷ ಕಾರಣ ಏನಿಲ್ಲ. ಹೊಸದೇನು ಇಲ್ಲ. ಮಾಮೂಲಿನಂತೆ ಸಚಿವರ ಭೇಟಿ ಮಾಡಿದ್ದೇವೆ. ನಮ್ಮ ಭೇಟಿಯಲ್ಲಿ ಅಂತದ್ದೇನು ಇಲ್ಲ. ಸುದ್ದಿ ಆಗುವಂತದ್ದು ಏ‌ನೂ ಇಲ್ಲ ಎಂದು ಸ್ಪಷ್ಟಪಡಿಸಿದರು.

News Updates

ಪುತ್ತೂರು ಚಲೋ ಕಾರ್ಯಕ್ರಮ ಯಶಸ್ವಿ, ಸಾವಿರ ಸಂಖ್ಯೆಯಲ್ಲಿ ಆಗಮಿಸಿದ ಹಿಂದೂ ಬಾಂಧವರು : ಓಲೈಕೆ ರಾಜಕಾರಣದ ಪರಾಕಷ್ಟೇ ಮಿತಿ ಮೀರಿದ್ದು, ಗೃಹ ಇಲಾಖೆ ಬಳಸಿಕೊಂಡು ಹಿಂದೂಗಳನ್ನು ದಮನಿಸುವ ಯತ್ನವನ್ನು ಸಹಿಸಲು ಅಸಾಧ್ಯ – ಶ್ರೀಕಾಂತ್ ಶೆಟ್ಟಿ

News Updates

ಮಂಗಳೂರಿನಲ್ಲಿ ಸ್ಮರಣಿಕೆ ತಯಾರಿಕಾ ಸಂಸ್ಥೆಯಾದ ‘ಮೈಟ್ರೀ ಕಾರ್ವಿಂಗ್ಸ್’ ನ ನೂತನ ಘಟಕ “ದಕ್ಷಿಣಾ” ದ ಶುಭಾರಂಭ | ಅತ್ಯಾಕರ್ಷಕ ಮರದ ಕೆತ್ತನೆಗಳು, ವಿಶಿಷ್ಟ ಶೈಲಿಯ ಸ್ಮರಣಿಕೆಗಳು ಹಾಗೂ ಗ್ರಾಹಕರ ಅಭಿರುಚಿಗೆ ತಕ್ಕಂತೆ ವಿನ್ಯಾಸಗೊಳಿಸಿದ ಕಲಾಕೃತಿಗಳು ಲಭ್ಯ: ಸುಜಿತ್ ಪ್ರತಾಪ್

[t4b-ticker]
error: Content is protected !!