ಆರ್‌ಎಸ್‌ಎಸ್ ‘ಆಲದ ಮರ’: ಮೋದಿ

Picture of Savistara

Savistara

Bureau Report

ನಾಗುರ: ‘ರಾಷ್ಟ್ರೀಯ ಸ್ವಯಂ ಸೇವಕ ಸಂಘವು (ಆರ್‌ಎಸ್‌ಎಸ್‌) ಭಾರತದ ಅಮರ ಸಂಸ್ಕೃತಿಯ ‘ಆಲದ ಮರ’ವಾಗಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ.

ಪ್ರಧಾನಿಯಾಗಿ 11 ವರ್ಷದ ತರುವಾಯ ಇಲ್ಲಿರುವ ಆರ್‌ಎಸ್‌ಎಸ್‌ನ ಕೇಂದ್ರ ಕಚೇರಿಗೆ ಭಾನುವಾರ ಭೇಟಿ ನೀಡಿದ್ದ ಸಂದರ್ಭದಲ್ಲಿ ಅವರು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.ಅಧಿಕಾರದಲ್ಲಿ ಇದ್ದಾಗಲೇ ಸಂಘದ ಕೇಂದ್ರ ಕಚೇರಿಗೆ ಭೇಟಿ ನೀಡಿದ್ದ ಎರಡನೇ ಪ್ರಧಾನಿ ಎಂದೂ ಮೋದಿ ಗುರುತಿಸಿಕೊಂಡರು. ಈ ಹಿಂದೆ ಎ.ಬಿ.ವಾಜಪೇಯಿ ಅವರು 2000ರಲ್ಲಿ ಭೇಟಿ ನೀಡಿದ್ದರು. ಕಾಕತಾಳೀಯವೆಂದರೆ ಇಬ್ಬರೂ ಮೂರನೇ ಅವಧಿಗೆ ಪ್ರಧಾನಿ ಸ್ಥಾನಕ್ಕೆ ಏರಿದಾಗ ಭೇಟಿ ನೀಡಿದ್ದರು.ಕೇಂದ್ರ ಕಚೇರಿಯಲ್ಲಿ ಮೋದಿ ಅವರು ಡಾ.ಹೆಡಗೇವಾ‌ರ್ ಸ್ಮೃತಿ ಮಂದಿರಕ್ಕೆ ಭೇಟಿ ನೀಡಿ, ಆರ್‌ಎಸ್‌ಎಸ್‌ನ ಸ್ಥಾಪಕರಿಗೆ ನಮನ ಸಲ್ಲಿಸಿದರು. ಬಳಿಕ ಡಾ.ಬಿ.ಆರ್.ಅಂಬೇಡ್ಕರ್ ಅವರು 1956ರಲ್ಲಿ ಬೌದ್ಧಧರ್ಮ ಸ್ವೀಕರಿಸಿದ್ದ ನೆನಪಿನ ದೀಕ್ಷಾಭೂಮಿಗೂ ಭೇಟಿ ನೀಡಿ ಗೌರವ ಸಲ್ಲಿಸಿದರು.

ಆರ್‌ಎಸ್‌ಎಸ್‌ ಮಖ್ಯಸ್ಥರಾಗಿದ್ದ ಮಾಧವರಾವ್ ಗೋಲ್ವಾಲ್ಕ‌ರ್ ಅವರ ಹೆಸರಿನ ನೇತ್ರಾಲಯ ಕಣ್ಣಿನ ಸಂಸ್ಥೆ ಮತ್ತು ಸಂಶೋಧನಾ ಕೇಂದ್ರದ ವಿಸ್ಕೃತ ಕಟ್ಟಡ ನಿರ್ಮಾಣಕ್ಕೆ ಅಡಿಗಲ್ಲು ನೆರವೇರಿಸಿದರು.ಈ ಸಮಾರಂಭದಲ್ಲಿ ಅವರು, ‘ಸಂಘದ ಕಾರ್ಯಕರ್ತರದು ಸ್ವಾರ್ಥರಹಿತ ಸೇವೆ. ರಾಷ್ಟ್ರೀಯ ಪ್ರಜ್ಞೆ ರಕ್ಷಿಸಲು, ಬೆಳೆಸಲು 100 ವರ್ಷದ ಹಿಂದೆ ಬಿತ್ತಿದ್ದ ಬೀಜ ಇಂದು ಹೆಮ್ಮರವಾಗಿದೆ’ ಎಂದರು.’ಆ ಮರದ ಕೊಂಬೆಗಳಾಗಿ ಲಕ್ಷಾಂತರ ಕಾರ್ಯಕರ್ತರಿದ್ದಾರೆ. ಆರ್‌ಎಸ್‌ಎಸ್‌ ಎಂಬುದು ಭಾರತೀಯ ಸಂಸ್ಕೃತಿಯ ಆಧುನಿಕ ಆಲದಮರ. ಇದು, ದೇಶದ ಸಂಸ್ಕೃತಿ, ಪರಂಪರೆಯನ್ನು ಬೆಳಗುತ್ತಿದೆ’ ಎಂದರು.100 ವರ್ಷಗಳಲ್ಲಿ ಸಂಘದ ಸೇವೆಯನ್ನು ಉಲ್ಲೇಖಿಸಿದ ಅವರು, ‘ನಾನಲ್ಲ, ನೀವು’, ‘ನನಗಲ್ಲ, ದೇಶಕ್ಕಾಗಿ’ ಎಂಬುದು ಸ್ವಾರ್ಥರಹಿತ ಸೇವೆಯ ಮಂತ್ರ. ‘ನಾನು’ ಎಂಬುದರ ಬದಲಿಗೆ ‘ನಾವು’ ಎಂಬುದೇ ಆದ್ಯತೆಯಾಗಬೇಕು ಎಂದು ಅವರು ಕಿವಿಮಾತು ಹೇಳಿದರು.

[t4b-ticker]
error: Content is protected !!