ಕರ್ನಾಟಕದಲ್ಲಿ 41 ಕೋಟಿ ರೂ. ನರೇಗಾ ಅನುದಾನ ದುರ್ಬಳಕೆ

Picture of Savistara

Savistara

Bureau Report

3.38 ಕೋಟಿ ರೂ. ಮರಳಿ ಪಡೆಯಲಾಗಿದೆ: ಕೇಂದ್ರ ಸರಕಾರ

ಹೊಸದಿಲ್ಲಿ: ಕೇಂದ್ರ ಸರ್ಕಾರದ ಮನರೇಗಾ ಯೋಜನೆಯಡಿ ರಾಜ್ಯಗಳಿಗೆ ನೀಡುವ ಅನುದಾನವನ್ನು ಬಹುತೇಕ ರಾಜ್ಯ ಸರ್ಕಾರಗಳು ದುರುಪಯೋಗಪಡಿಸಿಕೊಳ್ಳುತ್ತಿವೆ ಎಂಬ ಮಾಹಿತಿ ಬಹಿರಂಗವಾಗಿದೆ.ಮನರೇಗಾ ಯೋಜನೆಯಡಿ ಕರ್ನಾಟಕಕ್ಕೆ 5,557.32 ಕೋಟಿ ರೂ. ಅನುದಾನ ನೀಡಲಾಗಿದ್ದು, ಅದರಲ್ಲಿ 41.58 ಕೋಟಿ ರೂ. ದುರ್ಬಳಕೆ ಮಾಡಲಾಗಿದೆ. ಆ ಪೈಕಿ 3.38 ಕೋಟಿ ರೂ. ಮರಳಿ ಪಡೆಯಲಾಗಿದೆ ಎಂದು ಸಚಿವಾಲಯ ತಿಳಿಸಿದೆ. 2024-25ರ ಅವಧಿಯಲ್ಲಿ ದೇಶದಲ್ಲಿ ಒಟ್ಟು 193.67 ಕೋಟಿ ರೂ.ದುರ್ಬಳಕೆಯಾಗಿದ್ದು, ಅದರಲ್ಲಿ ಕೇವಲ 10.29 ಕೋಟಿ ರೂ. ಮರಳಿ ಪಡೆಯಲಾಗಿದೆ.ಹಣದ ದುರ್ಬಳಕೆ, ಕಾಮಗಾರಿಯಲ್ಲಿ ಅಸಮರ್ಪಕತೆ ವಿಚಾರವಾಗಿ 1,49,000 ಪ್ರಕರಣಗಳು ದಾಖಲಾಗಿದ್ದು, ಅವುಗಳಲ್ಲಿ 15,854 ಪ್ರಕರಣಗಳನ್ನು ಬಗೆಹರಿಸಲಾಗಿದೆ. ಪಶ್ಚಿಮ ಬಂಗಾಳ, ಆಂಧ್ರಪ್ರದೇಶ, ಬಿಹಾರ ಸೇರಿ ದೇಶದ ಬಹುತೇಕ ರಾಜ್ಯಗಳಲ್ಲಿ ಕೇಂದ್ರ ಸರ್ಕಾರದ ಅನುದಾನದ ದುರ್ಬಳಕೆ ಕಂಡುಬಂದಿದ್ದು, 2022ರಿಂದ ಪಶ್ಚಿಮ ಬಂಗಾಳಕ್ಕೆ ಸಚಿವಾಲಯದ ಅನುದಾನ ನೀಡುವುದನ್ನು ಸ್ಥಗಿತಗೊಳಿಸಿದೆ.

[t4b-ticker]
error: Content is protected !!