ಅಡಿಕೆ, ಕಾಳುಮೆಣಸು ಬೆಳೆಗಾರರಿಗೆ ಗುಡ್ ನ್ಯೂಸ್, ಇಂದಿನ ದರ ಹೀಗಿದೆ

Picture of Savistara

Savistara

Bureau Report

ಮಣ್ಣಲ್ಲಿ ಬೆವರು ಸುರಿಸಿ ದುಡಿಯುವ ರೈತನ ಬಾಳಲ್ಲಿ ಆಶಾಕಿರಣ ಮೂಡಿದೆ. ಪುತ್ತೂರಿನ ಕೃಷಿ ಮಾರುಕಟ್ಟೆಯಲ್ಲಿ ಅಡಿಕೆ ಮತ್ತು ಕಾಳುಮೆಣಸಿನ ಧಾರಣೆ ಗಣನೀಯವಾಗಿ ಏರಿಕೆಯಾಗಿದ್ದು, ಬೆಳೆಗಾರರ ಮುಖದಲ್ಲಿ ಸಂತಸದ ಹೊಳೆ ಹರಿಸಿದೆ. ಅದರಲ್ಲೂ. ಕಾಳುಮೆಣಸಿನ ಬೆಲೆ ಕೆ.ಜಿ.ಗೆ 700 ರೂಪಾಯಿಯ ಗಡಿ ದಾಟಿ ಮುನ್ನುಗ್ಗುತ್ತಿರುವುದು ರೈತರ ಉತ್ಸಾಹವನ್ನು ಇಮ್ಮಡಿಗೊಳಿಸಿದೆ.

ಪುತ್ತೂರು: ಮಣ್ಣಲ್ಲಿ ಬೆವರು ಸುರಿಸಿ ದುಡಿಯುವ ರೈತನ ಬಾಳಲ್ಲಿ ಆಶಾಕಿರಣ ಮೂಡಿದೆ. ಪುತ್ತೂರಿನ ಕೃಷಿ ಮಾರುಕಟ್ಟೆಯಲ್ಲಿ ಅಡಿಕೆ ಮತ್ತು ಕಾಳುಮೆಣಸಿನ ಧಾರಣೆ ಗಣನೀಯವಾಗಿ ಏರಿಕೆಯಾಗಿದ್ದು. ಬೆಳೆಗಾರರ ಮುಖದಲ್ಲಿ ಸಂತಸದ ಹೊಳೆ ಹರಿಸಿದೆ. ಅದರಲ್ಲೂ. ಕಾಳುಮೆಣಸಿನ ಬೆಲೆ ಕೆ.ಜಿ.ಗೆ 700 ರೂಪಾಯಿಯ ಗಡಿ ದಾಟಿ ಮುನ್ನುಗ್ಗುತ್ತಿರುವುದು ರೈತರ ಉತ್ಸಾಹವನ್ನು ಇಮ್ಮಡಿಗೊಳಿಸಿದೆ.

ಕಳೆದ ಒಂದು ವಾರದಲ್ಲಿ ಕಾಳುಮೆಣಸಿನ ದರ ಕೆ.ಜಿ.ಗೆ 20 ರೂಪಾಯಿಯಷ್ಟು ಹೆಚ್ಚಳ ಕಂಡಿದೆ. ಏಪ್ರಿಲ್ 2 ರಂದು ಹೊರ ಮಾರುಕಟ್ಟೆಯಲ್ಲಿ ಬರೋಬ್ಬರಿ 710 ರೂ. ತಲುಪಿದ್ದರೆ, ಕ್ಯಾಂಪ್ರೋದಲ್ಲಿ 695 ರೂ. ಇತ್ತು. ಇದು ವರ್ಷದ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವ ಭರವಸೆಯನ್ನು ಮೂಡಿಸಿದೆ.

ಇತ್ತ ಮಂಗಳೂರು ಚಾಲಿ ಅಡಿಕೆಯೂ ತನ್ನ ಹಿರಿಮೆಯನ್ನು ಮಾರುಕಟ್ಟೆಯಲ್ಲಿ ಮೆರೆಯುತ್ತಿದೆ. ಹೊಸ ಅಡಿಕೆ ಕೆ.ಜಿ.ಗೆ 450 ರೂ. ಸಮೀಪಕ್ಕೆ ಜಿಗಿದಿದ್ದರೆ, ಸಿಂಗಲ್ ಚೋಲ್ 500 ರೂ. ಗಡಿಯನ್ನು ಸಮೀಪಿಸುತ್ತಿದೆ. ಕ್ಯಾಂಪೋದಲ್ಲಿಯೂ ಧಾರಣೆ ಚೇತರಿಕೆ ಕಂಡಿದೆ. ಡಬ್ಬಲ್ ಚೋಲ್ ಧಾರಣೆ ಈ ಹಿಂದೆ 500 ರೂ. ದಾಟಿದ್ದು ಸದ್ಯ ಯಥಾಸ್ಥಿತಿಯಲ್ಲಿದೆ.

ಕೇವಲ ಅಡಿಕೆ, ಮೆಣಸು ಮಾತ್ರವಲ್ಲದೆ, ರಬ್ಬ‌ರ್ ಮತ್ತು ತೆಂಗಿನಕಾಯಿಯ ಬೆಲೆಯೂ ಏರಿಕೆಯ ಹಾದಿಯಲ್ಲಿರುವುದು ಸಮಾಧಾನ ತಂದಿದೆ. ರಬ್ಬರ್ ಗ್ರೇಡ್ 203 ರೂ. ಹಾಗೂ ತೆಂಗಿನಕಾಯಿ 63 ರೂ. ತಲುಪಿದೆ. ಈ ಎಲ್ಲಾ ಬೆಳವಣಿಗೆಗಳು ಕೃಷಿಕರಲ್ಲಿ ಹೊಸ ಚೈತನ್ಯ ತುಂಬಿದ್ದು, ಮಾರುಕಟ್ಟೆ ಇನ್ನಷ್ಟು ಸುಧಾರಿಸುವ ನಿರೀಕ್ಷೆಗಳನ್ನು ಹುಟ್ಟುಹಾಕಿದೆ.

News Updates

ಮಂಗಳೂರಿನಲ್ಲಿ ಸ್ಮರಣಿಕೆ ತಯಾರಿಕಾ ಸಂಸ್ಥೆಯಾದ ‘ಮೈಟ್ರೀ ಕಾರ್ವಿಂಗ್ಸ್’ ನ ನೂತನ ಘಟಕ “ದಕ್ಷಿಣಾ” ದ ಶುಭಾರಂಭ | ಅತ್ಯಾಕರ್ಷಕ ಮರದ ಕೆತ್ತನೆಗಳು, ವಿಶಿಷ್ಟ ಶೈಲಿಯ ಸ್ಮರಣಿಕೆಗಳು ಹಾಗೂ ಗ್ರಾಹಕರ ಅಭಿರುಚಿಗೆ ತಕ್ಕಂತೆ ವಿನ್ಯಾಸಗೊಳಿಸಿದ ಕಲಾಕೃತಿಗಳು ಲಭ್ಯ: ಸುಜಿತ್ ಪ್ರತಾಪ್

[t4b-ticker]
error: Content is protected !!