ಸುಬ್ರಹ್ಮಣ್ಯ: ಕಸ್ತೂರಿ ರಂಗನ್ ವರದಿಯ ಅನ್ವಯ ಪಶ್ಚಿಮ ಘಟ್ಟ ಭಾಗದ ಕಡಬ,ಪುತ್ತೂರು, ಸುಳ್ಯ, ಹಾಗೂ ಬೆಳ್ತಂಗಡಿ ತಾಲೂಕುಗಳ ಭಾಗದ ರೈತರು ಕಳೆದ 15 ವರ್ಷಗಳಿಂದ ನಿರಂತರವಾಗಿ ನ್ಯಾಯಕ್ಕಾಗಿ ಹೋರಾಡುತ್ತಲೇ ಬಂದಿದ್ದಾರೆ. ಕಳೆದ ನವೆಂಬರ್ ತಿಂಗಳಲ್ಲಿ ಎಲ್ಲಾ ರಾಜಕೀಯ ಪಕ್ಷಗಳು, ಧಾರ್ಮಿಕ ಮುಖಂಡರು, ರೈತಾಪಿ ವರ್ಗ ಸೇರಿ ಬೃಹತ್ ಪ್ರಮಾಣದ ಜನಂದೋಲನ ಸಭೆಯು ಗುಂಡ್ಯದಲ್ಲಿ ಜರಗಿತ್ತು. ಅದರ ಫಲವಾಗಿ ಶಿವಮೊಗ್ಗ ಅರಣ್ಯ ಇಲಾಖೆಯ ಕಾರ್ಯ ಯೋಜನೆ ಮತ್ತು ನೋಂದಣಿ ಘಟಕದ ವತಿಯಿಂದ ಜಂಟಿ ಸರ್ವೆಗೆ ಆದೇಶ ಬಂದಿದೆ. ಅದರ ಪ್ರಕಾರ ತಕ್ಷಣ ದಕ್ಷಿಣ ಕನ್ನಡ ಜಿಲ್ಲೆಯ ಬಾಧಿತ ಪ್ರದೇಶಗಳ ಹಾಗೂ ಗ್ರಾಮಗಳ ಗಡಿ ಗುರುತು ಹಾಗೂ ಜಂಟಿ ಸರ್ವೆಯನ್ನು ಕಂದಾಯ ಹಾಗೂ ಅರಣ್ಯ ಇಲಾಖೆಗಳು ಒಟ್ಟಾಗಿ ರೈತರ ಗೊಂದಲಗಳನ್ನು ಪರಿಹರಿಸಿ ಗಡಿ ಗುರುತು ಮಾಡಿ ಕೊಡಬೇಕಾಗಿ ಜನಹಿತ ಮಲೆನಾಡು ಜನ ಹಿತ ರಕ್ಷಣಾ ವೇದಿಕೆಯ ಸಂಚಾಲಕ ಕಿಶೋರ್ ಶಿರಾಡಿ ಒತ್ತಾಯಿಸಿದ್ದಾರೆ.ಅವರು ಬುಧವಾರ ಸುಬ್ರಹ್ಮಣ್ಯದಲ್ಲಿ ಬಾಧಿತ ಗ್ರಾಮಗಳ ರೈತರನ್ನು ಉದ್ದೇಶಿಸಿ ಮಾತನಾಡಿ, ಮುಂದಿನ ದಿನಗಳಲ್ಲಿ ಪುತ್ತೂರು ಕಂದಾಯ ಉಪ ವಿಭಾಗ ಕಚೇರಿಯ ಮುಂಭಾಗದಲ್ಲಿ ಎಲ್ಲಾ ರೈತಾಪಿ ವರ್ಗದವರು ಸೇರಿ ಉಪವಿಭಾಗ ಅಧಿಕಾರಿ ಅವರಿಂದ ಜಂಟಿ ಸರ್ವೆ ಹಾಗೂ ಗಡಿ ಗುರುತು ಬಗ್ಗೆ ವಿವರಣೆ ಹಾಗೂ ಮಾಹಿತಿಯನ್ನು ಪಡೆದುಕೊಳ್ಳಲಿದ್ದಾರೆ ಎಂದು ತಿಳಿಸಿದರು.ಆದುದರಿಂದ ಶೀಘ್ರವಾಗಿ ಅರಣ್ಯ ಹಾಗೂ ಕಂದಾಯ ಇಲಾಖೆಯವರು ಚಂಟಿ ಸರ್ವೆ ಮಾಡಿ ನೊಂದ ರೈತರಿಗೆ ಆರ್‌ಟಿಸಿ ಹಕ್ಕು ಪತ್ರ ಹಾಗೂ ಆರ್‌ಟಿಸಿ ದೊರಕುವಂತೆ ಮಾಡಿ ಕೊಡಬೇಕೆಂದು ಅವರು ಒತ್ತಾಯಿಸಿದರು.ಈ ಸಂದರ್ಭ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಸೈಯದ್ ಮೀರಾ ಸಾಹೇಬ್ ಕಡಬ, ಅಶೋಕ್ ಕುಮಾರ್ ಮೂಲೆ ಮಜಲು ಮತ್ತಿತರರು ಉಪಸ್ಥಿತರಿದ್ದರು.
ಶೀಘ್ರ ಗಡಿ ಗುರುತು, ಜಂಟಿ ಸರ್ವೆಗೆ ಕಿಶೋರ್ ಒತ್ತಾಯ
Savistara
Bureau Report
[t4b-ticker]













































