ತಾಲೂಕು ಶಸ್ತ್ರ ಚಿಕೆತ್ಸೆ ಯಂತ್ರ ಉದ್ಘಾಟನಾ ಕಾರ್ಯಕ್ರಮ ಮುಂದೂಡಿಕೆ | ಜನಸಾಮಾನ್ಯರ ಅಗತ್ಯತೆ ವಿಚಾರಗಳಲ್ಲಿ ಕಾಂಗ್ರೆಸ್ ರಾಜಕೀಯ ಮಾಡುತ್ತಿರುವುದು ಸರಿಯಲ್ಲ : ವೆಂಕಟ್ ವಳಲಂಬೆ

Picture of Savistara

Savistara

Bureau Report

ಸುಳ್ಯ ತಾಲೂಕು ಆಸ್ಪತ್ರೆಯಲ್ಲಿ ಕಣ್ಣಿನ ಶಸ್ತ್ರ ಚಿಕಿತ್ಸೆ ಯಂತ್ರ ಉದ್ಘಾಟನಾ ಕಾರ್ಯಕ್ರಮವನ್ನು ಕಾಂಗ್ರೆಸ್ ಪಕ್ಷದ ನಾಯಕರ ಒತ್ತಡದಿಂದ ರದ್ದುಗೊಳಿಸಿರುವುದನ್ನು ಬಿಜೆಪಿ ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ ಖಂಡಿಸಿದ್ದಾರೆ. ಆರೋಗ್ಯ ಜನಸಾಮಾನ್ಯರ ಅಗತ್ಯತೆಯಲ್ಲೊಂದು ಈ ಹಿನ್ನೆಲೆಯಲ್ಲಿ ತಾಲೂಕು ಆಸ್ಪತ್ರೆಯಲ್ಲಿ ಕಣ್ಣಿನ ಶಸ್ತ್ರ ಚಿಕಿತ್ಸೆ ಯಂತ್ರ ಉದ್ಘಾಟನೆಯಾಗಬೇಕಿತ್ತು ಆದರೆ ಸರ್ಕಾರದಿಂದ ನಾಮ ನಿರ್ದೇಶನಗೊಂಡ ಕಾಂಗ್ರೆಸ್ ನ ಗ್ಯಾರಂಟಿ ಅನುಷ್ಠಾನ ಸಮಿತಿ ಮತ್ತು ಸೂಡ ಅಧ್ಯಕ್ಷರನ್ನು ಆಮಂತ್ರಣ ಪತ್ರದಲ್ಲಿ ಹೆಸರಿಲ್ಲವೆಂಬ ಕಾರಣಕ್ಕೆ ಡಿಹೆಚ್ ಓ ಗೆ ದೂರು ನೀಡಿ ಇದೀಗ ಕಾರ್ಯಕ್ರಮ ರದ್ದುಗೊಂಡಿದೆ ಇಂತಹ ಆರೋಗ್ಯ ಸಂಭಂಧಿತ ಉದ್ಘಾಟನಾ ವಿಚಾರಗಳಲ್ಲಿ ಚಿಲ್ಲರೆ ರಾಜಕೀಯ ತಂದಿರುವುದನ್ನು ಬಿಜೆಪಿ ಖಂಡಿಸುತ್ತದೆ,ಕ್ಷೇತ್ರದ ಜನಸಾಮಾನ್ಯರು ನಿಮ್ಮ ಈ ವರ್ತನೆಗೆ ತಕ್ಕದಾದ ಉತ್ತರ ನೀಡಲಿದ್ದಾರೆ.ನಿಮಗೆ ಈ ವಿಚಾರವಾಗಿ ಬೇರೆ ರೀತಿಯ ಅವಕಾಶಗಳಿದ್ದರು ಸರ್ಕಾರ ಮಟ್ಟದಲ್ಲಿ ಒತ್ತಡ ಹೇರಿ ಕಾರ್ಯಕ್ರಮವನ್ನು ರದ್ದುಪಡಿಸಿರುವುದು ಕಾಂಗ್ರೆಸ್ ಪಕ್ಷಕ್ಕೆ ತಕ್ಕುದಾದಲ್ಲ, ಅಭಿವೃದ್ಧಿ ವಿಚಾರವಾಗಿ ರಾಜಕೀಯ ಮಾಡಿ ಆದರೆ ಆರೋಗ್ಯ ಸಂಬಂಧಿತ ವಿಚಾರದಲ್ಲಿ ಈ ನಡವಳಿಕೆ ಸರಿಯಲ್ಲವೆಂದು ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

News Updates

ಪುತ್ತೂರು ಚಲೋ ಕಾರ್ಯಕ್ರಮ ಯಶಸ್ವಿ, ಸಾವಿರ ಸಂಖ್ಯೆಯಲ್ಲಿ ಆಗಮಿಸಿದ ಹಿಂದೂ ಬಾಂಧವರು : ಓಲೈಕೆ ರಾಜಕಾರಣದ ಪರಾಕಷ್ಟೇ ಮಿತಿ ಮೀರಿದ್ದು, ಗೃಹ ಇಲಾಖೆ ಬಳಸಿಕೊಂಡು ಹಿಂದೂಗಳನ್ನು ದಮನಿಸುವ ಯತ್ನವನ್ನು ಸಹಿಸಲು ಅಸಾಧ್ಯ – ಶ್ರೀಕಾಂತ್ ಶೆಟ್ಟಿ

News Updates

ಮಂಗಳೂರಿನಲ್ಲಿ ಸ್ಮರಣಿಕೆ ತಯಾರಿಕಾ ಸಂಸ್ಥೆಯಾದ ‘ಮೈಟ್ರೀ ಕಾರ್ವಿಂಗ್ಸ್’ ನ ನೂತನ ಘಟಕ “ದಕ್ಷಿಣಾ” ದ ಶುಭಾರಂಭ | ಅತ್ಯಾಕರ್ಷಕ ಮರದ ಕೆತ್ತನೆಗಳು, ವಿಶಿಷ್ಟ ಶೈಲಿಯ ಸ್ಮರಣಿಕೆಗಳು ಹಾಗೂ ಗ್ರಾಹಕರ ಅಭಿರುಚಿಗೆ ತಕ್ಕಂತೆ ವಿನ್ಯಾಸಗೊಳಿಸಿದ ಕಲಾಕೃತಿಗಳು ಲಭ್ಯ: ಸುಜಿತ್ ಪ್ರತಾಪ್

[t4b-ticker]
error: Content is protected !!