ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತಕಾಶ್ಮೀರ (ಪಿಒಕೆ)ದಲ್ಲಿನ ಭಯೋತ್ಪಾದಕ ಶಿಬಿರಗಳ ಮೇಲೆ ಭಾರತೀಯ ವಾಯುಪಡೆಯ ಆಪರೇಷನ್ ಸಿಂಧೂರ ಅಡಿಯಲ್ಲಿ ನಡೆಸಿದ ದಾಳಿಯನ್ನು, ಏ.22ರಂದು ಜಮ್ಮುವಿನ ಪೆಹಲ್ಲಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಹತ್ಮಾತ್ಮರಾದ ಲೆಫ್ಟಿನೆಂಟ್ ವಿನಯ್ ನರ್ವಾಲ್ ಅವರ ಪತ್ನಿ ಹಿಮಾಂಶಿ ನರ್ವಾಲ್ ಸ್ವಾಗತಿಸಿದ್ದಾರೆ. 26 ಜೀವಗಳನ್ನು ಬಲಿ ಪಡೆದವರಿಗೆ ಇದು ಸೂಕ್ತ ಪ್ರತ್ಯುತ್ತರ ಎಂದು ಬಣ್ಣಿಸಿದ್ದಾರೆ.
ಕಾರ್ಯಚರಣೆ ಬಗ್ಗೆ ಪಿಟಿಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಹಿಮಾಂಶು,” ನಮ್ಮ ಸೇನಾ ಪಡೆಗಳು ಮತ್ತು ಮೋದಿ ಸರ್ಕಾರ, ಭಯೋತ್ಪಾದಕರಿಗೆ ಮತ್ತು ಪೋಷಿಸಿ ಬೆಳಸುವವರಿಗೆ ತಕ್ಕ ಪಾಠ ಕಲಿಸಿದ್ದು, ಉಗ್ರರಿಗೆ ಬಲವಾದ ಸಂದೇಶ ರವಾನಿಸಲಾಗಿದೆ ಎಂದರು.
ಪೆಹಲ್ಲಾಮ್ ದಾಳಿ ದಿನ ಭಯಾನಕತೆಯನ್ನು ನೆನಪಿಸಿಕೊಂಡ ಹಿಮಾಂಶು, ” ಅಂದು ನಾನು ಅವರ ಹತ್ತಿರ(ಉಗ್ರರು) ನನ್ನ ಪತಿಯನ್ನು ಉಳಿಸಿ ಎಂದು ಅಂಗಲಾಚಿ ಬೇಡಿಕೊಂಡೆ. ಆದರೆ, ಅವರು ಮೋದಿಯನ್ನೇ ಕೇಳಿ ಎಂದು ಕೊಂದು ಹೋದರು. ಆದರೆ, ಇಂದು ಮೋದಿ ಸರ್ಕಾರ ಹಾಗೂ ನಮ್ಮ ಸೇನಾಪಡೆ ತಕ್ಕ ಉತ್ತರ ನೀಡಿದೆ ಎಂದರು.ಏ.22ರಂದು ಜಮ್ಮುವಿನ ಪೆಹಲ್ಲಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಒಬ್ಬ ವಿದೇಶಿ ಪ್ರಜೆ ಸೇರಿದಂತೆ 26 ಜನ ಭಾರತಿಯರು ಮೃತಪಟ್ಟಿದ್ದರು.













































