ಪಾಕ್: ರಾವಲ್ಪಿಂಡಿ ಕ್ರಿಕೇಟ್‌ ಸ್ಟೇಡಿಯಂ ಬಳಿ ಸೇರಿದಂತೆ ಹಲವು ಕಡೆ ಡ್ರೋನ್ ದಾಳಿ – ಐಎಸ್‌ಐ ಕಚೇರಿ ಧ್ವಂಸ – 8 ಉಗ್ರರ ಅಂತ್ಯ..? ಸಂಪೂರ್ಣ ವೈಫಲ್ಯಗೊಂಡ ಪಾಕ್ ವಾಯು ಭದ್ರತೆ

Picture of Savistara

Savistara

Bureau Report

ಭಯೋತ್ಪಾದಕ ರಾಷ್ಟ್ರ ಪಾಕಿಸ್ತಾನದ ಭಯೋತ್ಪಾದಕ ಕೇಂದ್ರಗಳ ಮೇಲೆ ಭಾರತ ದಾಳಿ ನಡೆಸಿದ ನಂತರ ಪಾಕಿಸ್ತಾನದಿಂದ ನಿರಂತರ ಗುಂಡಿನ ದಾಳಿ ಭಾರತೀಯ ನಾಗರೀಕರ ಮೇಲೆ ನಡೆಯುತ್ತಿದೆ.

ನವದೆಹಲಿ : ಭಯೋತ್ಪಾದಕ ರಾಷ್ಟ್ರ ಪಾಕಿಸ್ತಾನದ ಭಯೋತ್ಪಾದಕ ಕೇಂದ್ರಗಳ ಮೇಲೆ ಭಾರತ ದಾಳಿ ನಡೆಸಿದ ನಂತರ ಪಾಕಿಸ್ತಾನದಿಂದ ನಿರಂತರ ಗುಂಡಿನ ದಾಳಿ ಭಾರತೀಯ ನಾಗರೀಕರ ಮೇಲೆ ನಡೆಯುತ್ತಿದೆ.

ಇದರಿಂದ 13 ಕ್ಕೂ ಹೆಚ್ಚು ಜನ ಭಾರತೀಯ ನಾಗರಿಕರು ಬಲಿಯಾಗಲಿದ್ದಾರೆ.

ಮಧ್ಯರಾತ್ರಿ ಲಾಹೋರ್ ಬಳಿ ಸ್ಫೋಟಗೊಂಡ ಬಗ್ಗೆ ವರದಿಯಾಗಿತ್ತು. ಇದೀಗ ಪಾಕಿಸ್ತಾನದ ರಾವಲ್ಪಿಂಡಿ ಅಂತರರಾಷ್ಟ್ರೀಯ ಕ್ರಿಕೇಟ್ ಸ್ಟೇಡಿಯಂ ಬಳಿ ಡೋನ್ ದಾಳಿಯಾಗಿ 8 ಉಗ್ರರು ಹತರಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಪಾಕಿಸ್ತಾನದ ವಾಯು ಭದ್ರತಾ ವ್ಯವಸ್ಥೆ ಸಂಪೂರ್ಣ ವಿಫಲಗೊಂಡಿದೆ ಎಂದು ವರದಿಯಾಗಿದೆ.

X ಖಾತೆಗಳಲ್ಲಿ ದಾಳಿಯ ವಿಡಿಯೋ ಹರಿದಾಡುತ್ತಿವೆ. ರಾವಲ್ಪಿಂಡಿ . ಐಎಸ್‌ಐ ಉಗ್ರರ ಕೇಂದ್ರದ ಮೇಲೆ ದಾಳಿ ನಡೆದಿದೆ ಎನ್ನಲಾಗಿದೆ.

ಇಂದು ರಾತ್ರಿ ರಾವಲ್ಪಿಂಡಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಪಿಎಸ್‌ಎಲ್‌ ಕ್ರಿಕೇಟ್ ಟೂರ್ನಮೆಂಟ್ ನಡೆಯಲಿತ್ತು.ಇದರೊಟ್ಟಿಗೆ ಲಾಹೋರ್, ರಾವಲ್ಪಿಂಡಿ, ಅಟ್ಟೋಕ್, ಗುಜ್ರನ್ ವಾಲಾ, ಚಕ್ವಲ್ ಹಾಗೂ ಕರಾಚಿ ಮೇಲೂ ಡೋನ್ ದಾಳಿ ನಡೆದಿದೆ ಎನ್ನಲಾಗಿದೆ.

[t4b-ticker]
error: Content is protected !!