ಪಹಲ್ಗಾಮ್ ದಾಳಿಯಲ್ಲಿ ಸಂತ್ರಸ್ತ ಎನ್ ರಾಮಚಂದ್ರನ್ ಅವರ ಪುತ್ರಿ ಆರತಿ ಮೆನನ್, ಭಯೋತ್ಪಾದಕರ ವಿರುದ್ಧ ಭಾರತದ ದಾಳಿಗೆ ಪ್ರಧಾನಿ ಮೋದಿ ಅವರಿಗೆ ಕೃತಜ್ಞತೆ ಸಲ್ಲಿಸಿದರು. ಅವರ ಭಾವುಕ ಮಾತುಗಳು ಹೀಗಿವೆ.
ಪಹಲ್ಗಾಮ್ (Pahalgam Attack) ಸಂತ್ರಸ್ತ ಎನ್ ರಾಮಚಂದ್ರನ್ ಅವರ ಪುತ್ರಿ ಆರತಿ ಮೆನನ್ (Arti Menon), ಭಾರತವು ಭಯೋತ್ಪಾದಕರ ವಿರುದ್ಧ ನಡೆಸಿದ ದಾಳಿಯ (Attack) ಸುದ್ದಿಗೆ ಪ್ರತಿಕ್ರಿಯಿಸಿ “ದುಃಖದ ಈ ಕ್ಷಣದಲ್ಲಿ ಇದು ನಮಗೆ ತುಂಬಾ ಸಾಂತ್ವನ ನೀಡುವದ್ದಾಗಿದೆ” ಎಂದು ಹೇಳಿದ್ದಾರೆ. ಸಿಎನ್ಎನ್-ನ್ಯೂಸ್ 18 ಜೊತೆ ಮಾತನಾಡಿದ ಮೆನನ್, ಭಯೋತ್ಪಾದಕರ ವಿರುದ್ಧ ಭಾರತ ಕೈಗೊಂಡ ಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರಿಗೆ ಕೃತಜ್ಞತೆ ಸಲ್ಲಿಸಿದರು.
“ನಮಗೆ ತುಂಬಲಾಗದ ನಷ್ಟವಾಗಿದೆ. ಪಾಕಿಸ್ತಾನದ ವಿರುದ್ಧ ಭಾರತದ ಕ್ರಮದಿಂದ ನಮಗೆ ತುಂಬಾ ಹೆಮ್ಮೆಯಾಗ್ತಿದೆ. ನಾವು ಭಾವುಕರಾಗ್ತಿದ್ದೇವೆ. ನಾವು ಇನ್ನಷ್ಟು ಸ್ಟ್ರಾಂಗ್ ಆಗಿ ಬರುತ್ತೇವೆ ಎಂದಿದ್ದಾರೆ.
ನಾನು ನನ್ನ ಎರಡೂ ಕೈಗಳನ್ನು ಮಡಚಿ ನಮ್ಮ ಪ್ರಧಾನಿ ಮೋದಿಗೆ ಧನ್ಯವಾದ ಹೇಳುತ್ತೇನೆ” ಎಂದು ಅವರು ಹೇಳಿದರು. ಎರಡು ವಾರಗಳ ಹಿಂದೆ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ, ಭಾರತೀಯ ಸಶಸ್ತ್ರ ಪಡೆಗಳು ಬುಧವಾರ ಮುಂಜಾನೆ ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಒಂಬತ್ತು ಭಯೋತ್ಪಾದಕ ಗುರಿಗಳ ಮೇಲೆ ಕ್ಷಿಪಣಿ ದಾಳಿ ನಡೆಸಿವೆ.
ಇದರಲ್ಲಿ ನಿಷೇಧಿತ ಜೈಶ್-ಎ-ಮೊಹಮ್ಮದ್‌ನ ಭದ್ರಕೋಟೆಯಾದ ಬಹವಾಲ್ಪುರವೂ ಸೇರಿದೆ. ಆಪರೇಷನ್ ಸಿಂಧೂರ್ ಅಡಿಯಲ್ಲಿ ಮಿಲಿಟರಿ ದಾಳಿಗಳನ್ನು ನಡೆಸಲಾಗಿದೆ ಎಂದು ರಕ್ಷಣಾ ಸಚಿವಾಲಯ ಬೆಳಿಗ್ಗೆ 1.44 ಕ್ಕೆ ಹೇಳಿಕೆಯಲ್ಲಿ ತಿಳಿಸಿದೆ.ಭಾರತವು ಅಣಕು ಪ್ರದರ್ಶನಕ್ಕೂ ಮುನ್ನ ಮಧ್ಯರಾತ್ರಿ ಪಹಲ್ಗಾಮ್ ದಾಳಿಗೆ ಪ್ರತೀಕಾರ ತೀರಿಸಿಕೊಂಡಿತು. ಮತ್ತು ಭಯೋತ್ಪಾದಕರ ಬೆನ್ನುಮೂಳೆಯನ್ನು ಮುರಿದಿತು. ಭಾರತವು 6 ಸ್ಥಳಗಳಲ್ಲಿ 24 ದಾಳಿಗಳನ್ನು ನಡೆಸುವ ಮೂಲಕ ನರಮೇಧಕ್ಕೆ ಕಾರಣವಾಯಿತು. ಭಾರತದ ಈ ಪ್ರತಿದಾಳಿಯಲ್ಲಿ 70 ಕ್ಕೂ ಹೆಚ್ಚು ಭಯೋತ್ಪಾದಕರು ಸಾವನ್ನಪ್ಪಿದ್ದಾರೆ.
ಕೇವಲ 16 ದಿನಗಳಲ್ಲಿ ಮೋದಿ ಸರ್ಕಾರ ಹಿಮಾಂಶಿ ನರ್ವಾಲ್ ಅವರ ಬದುಕಲ್ಲಿ ಮರೆಯಲಾಗದ ನೋವು ಕೊಟ್ಟಉಗ್ರರಿಗೆ ನಡುಕ ಹುಟ್ಟಿಸಿದೆ. ಹಿಮಾಂಶಿ ನರ್ವಾಲ್ ಅವರ ವೈವಾಹಿಕ ಜೀವನವನ್ನು ಹಾಳು ಮಾಡಿದ ವ್ಯಕ್ತಿಗೆ ಭಾರತದ ಮೇಲೆ ಕಣ್ಣಿಟ್ಟರೆ ಏನಾಗುತ್ತದೆ ಎಂದು ಮೋದಿ ಸರ್ಕಾರ ಹೇಳಿದೆ.
ಪಾಕಿಸ್ತಾನದ ಯಾವುದೇ ಮಿಲಿಟರಿ ನೆಲೆಗಳನ್ನು ಗುರಿಯಾಗಿರಿಸಿಕೊಳ್ಳಲಾಗಿಲ್ಲ. ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 25 ಭಾರತೀಯರು ಮತ್ತು ಒಬ್ಬ ನೇಪಾಳಿ ಪ್ರವಾಸಿಗರು ಸಾವನ್ನಪ್ಪಿದ್ದಕ್ಕೆ ಪ್ರತಿಕ್ರಿಯೆಯಾಗಿ ಈ ಕಾರ್ಯಾಚರಣೆ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.













































