ಪಾಕ್‌ ವಶದಲ್ಲಿದ್ದ ಬಿಎಸ್‌ಎಫ್‌ ಯೋಧ ಭಾರತಕ್ಕೆ ಹಸ್ತಾಂತರ

Picture of Savistara

Savistara

Bureau Report

ಅಮೃತಸರ: ಏ.23 ರಂದು ಆಕಸ್ಮಿಕವಾಗಿ ಅಂತರರಾಷ್ಟ್ರೀಯ ಗಡಿರೇಖೆ ದಾಟಿದ ಕಾರಣಕ್ಕೆ ಪಾಕ್ ಸೇನೆಯಿಂದ ಬಂಧಿತರಾಗಿದ್ದ ಬಿಎಸ್‌ಎಫ್‌ ಯೋಧ ಪೂರ್ಣಂ ಸಾಹು ಅವರನ್ನು ಪಾಕಿಸ್ತಾನ ಪಂಜಾಬ್‌ನ ಅಟ್ಟಾರಿ-ವಾಘಾ ಗಡಿ ಮೂಲಕ ಭಾರತಕ್ಕೆ ಹಸ್ತಾಂತರಿಸಿದೆ ಎಂದು ಸೇನಾಪಡೆ ತಿಳಿಸಿದೆ.

ಬುಧವಾರ ಬೆಳಿಗ್ಗೆ 10.30ಕ್ಕೆ ಪಾಕಿಸ್ತಾನದ ರೇಂಜರ್‌ಗಳು ಸಾಹು ಅವರನ್ನು ಬಿಎಸ್‌ಎಫ್‌ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ. ಹಸ್ತಾಂತರವನ್ನು ಶಾಂತಿಯುತವಾಗಿ, ಶಿಷ್ಟಾಚಾರಗಳಿಗೆ ಅನುಸಾರವಾಗಿ ನಡೆಸಲಾಯಿತು ಎಂದು ಬಿಎಸ್‌ಎಫ್ ವಕ್ತಾರರು ತಿಳಿಸಿದ್ದಾರೆ.ಸಾಹು ಅವರನ್ನು ಮೊದಲು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗುವುದು. ಬಳಿಕ ಸಮಾಲೋಚನೆ ಮತ್ತು ಚರ್ಚೆ ಮೂಲಕ 21 ದಿನಗಳ ಕಾಲ ಪಾಕಿಸ್ತಾನದ ವಶದಲ್ಲಿದ್ದ ಬಗ್ಗೆ ಪ್ರಶ್ನಿಸಲಾಗುವುದು ಎಂದು ಪಿಟಿಐಗೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.ಸಾಹು ಅವರು 24ನೇ ಬಿಎಸ್ಎಫ್ ಬೆಟಾಲಿಯನ್‌ಗೆ ಸೇರಿದವರಾಗಿದ್ದರು. ಅವರನ್ನು ಸಕ್ರಿಯ ಕರ್ತವ್ಯಕ್ಕೆ ಸೇರಿಸಿಕೊಳ್ಳಲಾಗುವುದಿಲ್ಲ. ಪಾಕ್ ರೇಂಜರ್‌ಗಳು ಅವರನ್ನು ಬಂಧಿಸಿದ ಕುರಿತು ಪರಿಶೀಲಿಸಲು ಮತ್ತು ಲೋಪಗಳನ್ನು ಕಂಡುಹಿಡಿಯಲು ಸಾಹು ಅವರು ಬಿಎಸ್‌ಎಫ್‌ನ ಪಂಜಾಬ್ ಗಡಿನಾಡು ಸ್ಥಾಪಿಸಿದ ಅಧಿಕೃತ ವಿಚಾರಣೆಯ ಭಾಗವಾಗಿರುತ್ತಾರೆ. ಎಂದೂ ಅಧಿಕಾರಿಗಳು ತಿಳಿಸಿದ್ದಾರೆ.

ಪಹಲ್ಲಾಮ್‌ನಲ್ಲಿ ಉಗ್ರರು ದಾಳಿ ನಡೆಸಿದ ಒಂದು ದಿನದ ನಂತರ, ಏಪ್ರಿಲ್ 23 ರಂದು ಫಿರೋಜ್‌ಪುರ ಜಿಲ್ಲೆಯ ಭಾರತ-ಪಾಕಿಸ್ತಾನ ಅಂತರರಾಷ್ಟ್ರೀಯ ಗಡಿಯಲ್ಲಿ ಸಾಹು ಅವರನ್ನು ರೇಂಜರ್‌ಗಳು ಬಂಧಿಸಿದ್ದರು.

[t4b-ticker]
error: Content is protected !!