ಕೊಡಗು, ನ. 19 ಕೊಡಗು ಜಿಲ್ಲಾ ಆರ್.ಎಸ್.ಎಸ್. ಸಂಘಚಾಲಕ ಚೆಕ್ಕೇರ ಮನು ಕಾವೇರಪ್ಪ (63) ನಿಧನ

Picture of Savistara

Savistara

Bureau Report

ಅಮ್ಮತ್ತಿ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಕೊಡಗು ಜಿಲ್ಲಾ ಸಂಘಚಾಲಕರಾದ ಚೆಕ್ಕೇರ ಮನು ಕಾವೇರಪ್ಪ (63) ಅವರು ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ.ಇಂದು ಮಧ್ಯಾಹ್ನ ಅಮ್ಮತ್ತಿಯಲ್ಲಿ ನಡೆದ ಚಕ್ಕೇರ ಕುಟುಂಬದ ಮದುವೆ ಕಾರ್ಯಕ್ರಮಕ್ಕೆ ತೆರಳಿದ್ದ ಸಂದರ್ಭದಲ್ಲಿ ಅವರಿಗೆ ಹಠಾತ್ ಹೃದಯಾಘಾತ ಸಂಭವಿಸಿದೆ. ತಕ್ಷಣವೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದರೂ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

Advertisement

ಕೊನೆಯ ಕ್ಷಣದ ನೆನಪು:ಇಂದು ಮಧ್ಯಾಹ್ನ ಅಮ್ಮತ್ತಿಯಲ್ಲಿ ನಡೆದ ಚಕ್ಕೇರ ಕುಟುಂಬದ ಮದುವೆಗೆ ಹೋಗುತ್ತಿರುವಾಗ ಕೊಡವ ಸಮಾಜದ ಹತ್ತಿರ ತಟ್ಟಿ ಕರೆದು ಮಾತನಾಡಿಸಿ, ತಮ್ಮ ಕಾರು ಹಿಂದೆ ಪಾರ್ಕ್ ಮಾಡಿದ್ದೇನೆ ಎಂದು ಹೇಳಿ ಪ್ರೀತಿಯಿಂದ ಕೈ ಬೀಸಿದ ಈ ಜೀವ ಇದೀಗ ಇಲ್ಲ ಎನ್ನುವುದು ಅರಗಿಸಿಕೊಳ್ಳಲಾಗುತ್ತಿಲ್ಲ ಎಂದು ಆಪ್ತರು ಕಣ್ಣೀರಿನ ನುಡಿನಮನ ಸಲ್ಲಿಸಿದ್ದಾರೆ.

Advertisement

Advertisement

Advertisement

ಅವರ ಸೇವೆ:ಕೊಡಗು ಜಿಲ್ಲೆಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಸಂಘಟಿಸಿ, ಕಟ್ಟಿ ಬೆಳೆಸುವಲ್ಲಿ ಮನು ಕಾವೇರಪ್ಪ ಅವರು ಮಹತ್ವದ ಪಾತ್ರ ವಹಿಸಿದ್ದರು.ಕಳೆದ 45 ವರ್ಷಗಳಿಂದ ಸಂಘದ ಎಲ್ಲಾ ಶಿಕ್ಷಣಗಳನ್ನು ಪಡೆದು ಸಕ್ರಿಯ ಕಾರ್ಯಕರ್ತನಾಗಿ ದುಡಿದ ಅವರು, ಕಳೆದ 10 ವರ್ಷಗಳಿಂದ ಕೊಡಗು ಜಿಲ್ಲಾ ಸಂಘಚಾಲಕರಾಗಿ ಜವಾಬ್ದಾರಿ ನಿಭಾಯಿಸುತ್ತಿದ್ದರು. ವನವಾಸಿ ಕಲ್ಯಾಣದ ರಾಜ್ಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದರು.

Advertisement

Advertisement

ಅಂತ್ಯಕ್ರಿಯೆ:

Advertisement

ಮೃತರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ. ಅವರ ಅಂತ್ಯಕ್ರಿಯೆ ನ.20ರಂದು ದೇವರಪುರದಲ್ಲಿರುವ ಸ್ವಗೃಹದಲ್ಲಿ ನಡೆಯಲಿದೆ.ಸಂಘದ ಬೆಳವಣಿಗೆಗೆ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಅವರ ನಿಧನದಿಂದ ಕೊಡಗಿನ ಸಾಮಾಜಿಕ ಹಾಗೂ ಹಿಂದೂ ಸಂಘಟನಾ ಕ್ಷೇತ್ರಕ್ಕೆ ತುಂಬಲಾರದ ನಷ್ಟ ಉಂಟಾಗಿದೆ.

[t4b-ticker]
error: Content is protected !!