WTC ಫೈನಲ್‌ಗೆ ಅರ್ಹತೆ ಪಡೆಯದೇ ಇದ್ದರೂ ಭಾರತ ಪಡೆಯಲಿದೆ ಬೃಹತ್ ಬಹುಮಾನ ಮೊತ್ತ

Picture of Savistara

Savistara

Bureau Report

ಟೆಸ್ಟ್ ಚಾಂಪಿಯನ್ ಶಿಪ್ ಬಹುಮಾನ ಮೊತ್ತ ಪ್ರಕಟಿಸಿದ ಐಸಿಸಿ

ಲಂಡನ್‌: ಇನ್ನು ಕೆಲವೇ ವಾರಗಳಲ್ಲಿ ಐಸಿಸಿ ವಿಶ್ವ ಟೆಸ್ಟ್ಚಾಂಪಿಯನ್‌ಶಿಪ್‌ ಫೈನಲ್ (WTC Final) ನಡೆಯಲಿದೆ. ಮೂರನೇ ಆವೃತ್ತಿ ಡಬ್ಲ್ಯೂಟಿಸಿ ಫೈನಲ್ ಪಂದ್ಯವು ಜೂನ್ 11ರಿಂದ ಲಂಡನ್ ನ ಲಾರ್ಡ್ಸ್ ನಲ್ಲಿ ನಡೆಯಲಿದೆ. ಫೈನಲ್ ಗೆ ಅರ್ಹತೆ ಪಡೆದಿರುವ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಮುಖಾಮುಖಿಯಾಗಲಿದೆ.ಗುರುವಾರ (ಮೇ 15) ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ICC) ಡಬ್ಲ್ಯೂಟಿಸಿಯ ಬಹುಮಾನ ಮೊತ್ತವನ್ನು ಘೋಷಿಸಿದೆ. ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ಗಾಗಿ ಐಸಿಸಿ ದಾಖಲೆಯ 5.76 ಮಿಲಿಯನ್ ಅಮೆರಿಕನ್ ಡಾಲರ್ ಬಹುಮಾನವನ್ನು ಘೋಷಿಸಿದೆ.ಡಬ್ಲ್ಯೂಟಿಸಿ 2025ರ ವಿಜೇತರು 3.6 ಮಿಲಿಯನ್ ಅಮೆರಿಕನ್ ಡಾಲರ್ ಗಳಿಸಿದರೆ, ರನ್ನರ್ ಅಪ್ ತಂಡ 2.16 ಮಿಲಿಯನ್ ಅಮೆರಿಕನ್ ಡಾಲರ್ ಗಳಿಸಲಿದೆ. ಇದು ಹಿಂದಿನ ಆವೃತ್ತಿಗಳ ಬಹುಮಾನದ ಮೊತ್ತಕ್ಕಿಂತ ಎರಡು ಪಟ್ಟು ಹೆಚ್ಚು!

ಮೊದಲ ಬಾರಿಗೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ತಲುಪಿರುವ ತೆಂಬಾ ಬವುಮಾ ನಾಯಕತ್ವದ ದಕ್ಷಿಣ ಆಫ್ರಿಕಾ ಕಪ್ ಗೆಲ್ಲುವ ಯೋಜನೆಯಲ್ಲಿದೆ. ಅಲ್ಲದೆ ಸತತ ಎರಡನೇ ಫೈನಲ್ ತಲುಪಿದ ಪ್ಯಾಟ್ ಕಮಿನ್ಸ್ ನೇತೃತ್ವದ ಆಸ್ಟ್ರೇಲಿಯಾ ತಂಡವು ಸತತ ಎರಡನೇ ಕಪ್ ಗೆಲ್ಲುವ ಹುಮ್ಮಸ್ಸಿನಲ್ಲಿದೆ.2025ರ ಆವೃತ್ತಿಯ ಡಬ್ಲ್ಯೂಸಿಯಲ್ಲಿ ಮೂರನೇ ಸ್ಥಾನ ಪಡೆದ ಭಾರತವು 1.44 ಅಮೆರಿಕನ್ ಮಿಲಿಯನ್ ಡಾಲರ್ ಬಹುಮಾನ ಹಣ ಪಡೆಯಲಿದೆ. ನಾಲ್ಕನೇ ಸ್ಥಾನ ಪಡೆದ 1.2 ಮಿಲಿಯನ್ ಅಮೆರಿಕನ್ ಡಾಲರ್ ಪಡೆಯಲಿದೆ. ಕೊನೆಯ ಅಂದರೆ ಒಂಬತ್ತನೇ ಸ್ಥಾನದಲ್ಲಿರುವ ಪಾಕಿಸ್ತಾನವು 480,000 ಅಮೆರಿಕನ್ ಡಾಲ‌ರ್ ಹಣ ಪಡೆಯಲಿದೆ.

News Updates

ಕೇಂದ್ರ ಸರ್ಕಾರದಿಂದ ಶಿವಮೊಗ್ಗ ನಗರ ಬೈಪಾಸ್ ಹಾಗೂ ನಗರ ವ್ಯಾಪ್ತಿಯ ಹೆದ್ದಾರಿ ಅಭಿವೃದ್ಧಿಗೆ 466.74 ಕೋಟಿ ರೂ. ಮಂಜೂರು; ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಕೃತಜ್ಞತೆ ಸಲ್ಲಿಸಿದ ಸಂಸದ ಬಿ.ವೈ. ರಾಘವೇಂದ್ರ

[t4b-ticker]
error: Content is protected !!