ಸುಳ್ಯ: ಆಪರೇಷನ್ ಸಿಂಧೂರ ಭಾರತದ ಇತಿಹಾಸದಲ್ಲಿ ಹೊಸ ಮೈಲುಗಲ್ಲು ಈ ಮೂಲಕ ಭಾರತದ ಸೇನಾ ಸಾಮರ್ಥ್ಯದ ಪರಿಚಯವಾಗಿದೆಯೆಂದು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಹೇಳಿದ್ದಾರೆ. ಮಂಥನ ವೇದಿಕೆ ಸುಳ್ಯ ವತಿಯಿಂದ ಸುಳ್ಯ ಸಿ.ಎ ಬ್ಯಾಂಕ್ ಸಭಾಂಗಣದಲ್ಲಿ ನಡೆದ ‘ಸಿಂಧೂರ ವಿಜಯ ಭಾರತದತ್ತ ವಿಶ್ವದ ಚಿತ್ತ’ ರಾಷ್ಟ್ರೀಯ ವಿಚಾರಗಳ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡುತ್ತ ಪಹಲ್ಲಾಮ್‌ನಲ್ಲಿಯ ಭಯೋತ್ಪಾದನೆ ದಾಳಿ ನಂತರ ಭಾರತ ಭಯೋತ್ಪಾದನ ಚಟುವಟಿಕೆ ವಿಚಾರದಲ್ಲಿ ಒಂದು ದಿಟ್ಟವಾದ ಕ್ರಮವನ್ನು ಕೈಗೊಂಡಿದೆ,

ಅನೇಕ ಉಗ್ರರ ಅಡಗು ತಾಣ ಗಳ ಮೇಲೆ ರಾಕೆಟ್ ದಾಳಿ ನಡೆಸಿ ಧ್ವಂಸ ಮಾಡಿದೆ ಸ್ವಾತಂತ್ರ್ಯ ನಂತರ ಭಾರತ ಇತಿಹಾಸದಲ್ಲಿ ಶತ್ರು ರಾಷ್ಟ್ರದ ನೆಲದಲ್ಲಿನ ಉಗ್ರರ ತಾಣ ವನ್ನು ನಾಶ ಮಾಡಿ ನಮ್ಮ ಸೈನಿಕರ ಸಾಮರ್ಥ್ಯವನ್ನು ಜಗತ್ತಿಗೆ ತೋರಿಸಿಕೊಟ್ಟಿದ.

ಅಂತಾರಾಷ್ಟ್ರೀಯ ಮಟ್ಟದಲ್ಲೂ 193 ರಾಷ್ಟ್ರಗಳ ಪೈಕಿ 3 ರಾಷ್ಟ್ರ ವಿರೋಧ ಮಾಡಿದ್ದು ಬಿಟ್ಟರೆ ಉಳಿದ ಎಲ್ಲಾ ದೇಶ ಭಾರತ ದ ಪರ ನಿಲುವನ್ನು ಹೊಂದಿದ್ದವು. ನಮ್ಮ ದೇಶದಲ್ಲಿ ನಡೆಯುವ ಯಾವುದೇ ಭಯೋತ್ಪಾದಕ ದಾಳಿ ಯನ್ನು ಇನ್ನು ಮುಂದೆ ಯುದ್ಧವೆಂದು ಗಣನೆಗೆ ತೆಗೆದುಕೊಂಡು ಸೂಕ್ತವಾದ ಉತ್ತರವನ್ನು ನೀಡಲಿದ್ದೇವೆಂದು ಪ್ರಧಾನ ಮಂತ್ರಿ ಮೋದಿ ಯವರು ಸ್ಪಷ್ಟಪಡಿಸಿದ್ದಾರೆ.

ಪ್ರಸ್ತುತ ಭಯೋತ್ಪಾದಕ ಚಟುವಟಿಕೆಗಳು ಕಡಿಮೆಯಾಗುತ್ತಿದ್ದು ಹೊಸ ಬೆಳವಣಿಗೆಯಾಗಿದೆ,ತಾನು ಆಪರೇಷನ್ ಸಿಂಧೂರ ನಂತರ ವಿದೇಶಕ್ಕೆ ಈ ವಿಚಾರವಾಗಿ ನಿಯೋಗ ಹೋಗಿದ್ದ ಸಂದರ್ಭವನ್ನು ಉಲ್ಲೇಖಿಸಿ ಭಾರತದ ಬಗ್ಗೆ ಜಗತ್ತಿನಲ್ಲಿ ವಿಶೇಷವಾದ ಗೌರವ ಭಾವವಿದೆ ಆಪರೇಷನ್ ಸಿಂಧೂರ ಪರವಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದರೆಂದು ತಿಳಿಸಿದರು.

ವೇದಿಕೆಯಲ್ಲಿ ಮಂಥನ ವೇದಿಕೆಯ ಪ್ರದ್ಯುಮ್ನ ಉಬರಡ್ಕ ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ಶಾಸಕಿ ಭಾಗೀರಥಿ ಮುರುಳ್ಯ, ಮಾಜಿ ಸಚಿವ ಎಸ್.ಅಂಗಾರ, ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ನೀರಬಿದಿರೆ, ಎಒಎಲ್‌ಇ ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ.ಸಿ,ಅರೆಸೆಸ್ಸ್ ಪ್ರಮುಖರಾದ ಚಂದ್ರಶೇಖರ ತಳೂರು, ನ. ಸೀತಾರಾಮ,ಸಂಘಟನೆ ಪ್ರಮುಖರು, ಎನ್ ಸಿಸಿ ವಿದ್ಯಾರ್ಥಿಗಳು, ಉಪನ್ಯಾಸಕರು,ವಿವಿಧ ಕ್ಷೇತ್ರದ ಗಣ್ಯರು ಭಾಗವಹಿಸಿದ್ದರು,

ಈ ವೇಳೆ ತಾಲೂಕಿನಲ್ಲಿ ಸೈನಿಕರಾಗಿ ನಿಧನರಾದ ಯೋಧರನ್ನು ನೆನಪಿಸಲಾಯಿತು.ಆಪರೇಷನ್ ಸಿಂಧೂರ ದ ಹತ್ತು ನಿಮಿಷ ವಿಡಿಯೋ ಪ್ರದರ್ಶಿಸಲಾಯಿತು. ಕಿಶನ್ ಜಬಳೆ ವಂದನಾರ್ಪಣೆಗೈದರು, ಕುಸುಮಾಧಾರ ಎ.ಟಿ. ಹಾಗೂ ಮಧುರಾ ಎಂ ಆರ್ ನಿರೂಪಿಸಿದರು, ಸುದರ್ಶನ್ ಸೂರ್ತಿಲ ವಂದೇ ಮಾತರಂ ಹಾಡಿದರು.














































