ಡಿ.ಕೆ.ಶಿವಕುಮಾ‌ರ್ ಬಿಜೆಪಿಗೆ ಬಂದ್ರೆ ತಡೆಯೋಕೆ ನಾವ್ಯಾರು? : ಅಶ್ವತ್ಥನಾರಾಯಣ

Picture of Savistara

Savistara

Bureau Report

ಮಂಡ್ಯ: ‘ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾ‌ರ್ ಬಿಜೆಪಿಗೆ ಬರುವುದು ಅನುಮಾನ. ಬಂದ್ರೆ ತಡೆಯೋಕೆ ನಾವ್ಯಾರು? ಯಾರು ಯಾವ ಪಕ್ಷಕ್ಕೆ ಬೇಕಾದರೂ ಹೋಗಬಹುದು’ ಎಂದು ಮಾಜಿ ಉಪ ಮುಖ್ಯಮಂತ್ರಿ ಸಿ.ಎನ್. ಅಶ್ವತ್ಥನಾರಾಯಣ ಹೇಳಿದರು.

‘ಡಿ.ಕೆ.ಶಿವಕುಮಾರ್ ಪಕ್ಷಕ್ಕೆ ಬರುವುದು ಬೇಡ’ ಎಂದು ವಿರೋಧ ಪಕ್ಷದ ನಾಯಕ ಆ‌ರ್.ಅಶೋಕ್ ಎರಡು ದಿನಗಳ ಹಿಂದೆ ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ ಅಶ್ವತ್ಥನಾರಾಯಣ ಅವರು ವ್ಯತಿರಿಕ್ತವಾಗಿ ಪ್ರತಿಕ್ರಿಯಿಸಿರುವುದು ಚರ್ಚೆಗೆ ಗ್ರಾಸವಾಗಿದೆ.’ಈಗ ಶಿವಕುಮಾ‌ರ್ ಅವರು ಕಾಂಗ್ರೆಸ್ ಪಕ್ಷಕ್ಕೆ ನಿಷ್ಠರಾಗಿದ್ದಾರೆ. ಅವರಿಗೇಕೆ ನಾವು ಅಗೌರವ ಸೂಚಿಸಬೇಕು. ಅವರಿಗೆ ಮಸಿ ಬಳಿಯುವಂಥ ಕೆಲಸ ನಾವೇಕೆ ಮಾಡಬೇಕು. ಅವರಲ್ಲಿ ಗುದ್ದಾಟ ನಡೀತಿದೆ. ಸರ್ಕಾರ ಯಾವ ಮಟ್ಟಕ್ಕೆ ಹೋಗುತ್ತದೆಂದು ಕಾದು ನೋಡುತ್ತೇವೆ. ಅವರವರೇ ಆ ಸರ್ಕಾರಕ್ಕೆ ದಾರಿ ತೋರಿಸುತ್ತಾರೆ’ ಎಂದು ವ್ಯಂಗ್ಯ ನುಡಿದರು.

ವ್ಯವಸ್ಥಿತ ಅನಿಸುತ್ತಿದೆ:

ಧರ್ಮಸ್ಥಳದಲ್ಲಿ ಮೂಳೆ ಸಿಕ್ಕ ವಿಚಾರವಾಗಿ ಪ್ರತಿಕ್ರಿಯಿಸಿ, “ಪವಿತ್ರ ಸ್ಥಳದ ಮೇಲೆ ಇರುವ ಅಪನಂಬಿಕೆ ದೂರವಾಗಬೇಕು. ಪಿಎಫ್‌ಐ, ಎಸ್‌ಎಫ್‌ಐನಂತಹ ಸಂಘಟನೆಗಳು ನಮ್ಮ ಶ್ರದ್ಧಾಕೇಂದ್ರಗಳ ಬಗ್ಗೆ ಮಾತನಾಡುವಂತಾಗಿದೆ. ಇದಕ್ಕೆ ಪೂರಕವಾಗಿ ಕುಮ್ಮಕ್ಕು ಕೊಡುವವರು ಇದ್ದಾರೆ. ಅಗ್ನಿ ಪರೀಕ್ಷೆ ಎದುರಿಸಲು ಅವರು ಸಿದ್ದರಿದ್ದಾರೆ. ಬೇಗ ತನಿಖೆ ನಡೆದು ಸತ್ಯ ಹೊರಬರಲಿ’ ಎಂದರು.

ಯೂಟ್ಯೂಬರ್‌ಗಳು ಮಾಡುತ್ತಿರುವ ವಿಡಿಯೊ ನೋಡಿದರೆ ಎಲ್ಲವೂ ವ್ಯವಸ್ಥಿತ ಅನ್ನಿಸುತ್ತದೆ. ಆರೋಪ ಮಾಡುತ್ತಿರುವವರನ್ನು ಕೂಡ ಸರ್ಕಾರ ತನಿಖೆಗೆ ಒಳಪಡಿಸಬೇಕು. ಅವರಿಗೆ ಹಣ ಎಲ್ಲಿಂದ ಬರುತ್ತದೆ? ಹಿಂದೆ ಯಾರಿದ್ದಾರೆ ಅನ್ನುವ ಬಗ್ಗೆಯೂ ತನಿಖೆಯಾಗಲಿ ಎಂದು ಹೇಳಿದರು.

News Updates

BREAKING NEWS ಸುಳ್ಯ :ಪಂಜ ಕಾಂಗ್ರೆಸ್ ಪಕ್ಷದ ಹುದ್ದೆಗೆ ರಾಜಿನಾಮೆ ನೀಡಿದ ದಿನೇಶ್ ಪುಂಡಿಮನೆ, ಕುಸುಮಾಧರ ಕೆರೆಯಡ್ಕ,ಲೋಕನಾಥ್ ಕುದ್ವ |ನಮ್ಮ ಮಾತನ್ನು ಪಕ್ಷದ ನಾಯಕರು ಉಳಿಸಿಕೊಂಡಿಲ್ಲ, ದೇವಸ್ಥಾನ ವ್ಯವಸ್ಥೆ ಸರಿದಾರಿಗೆ ತರುವ ಕೆಲಸವಾಗಲಿ: ದಿನೇಶ್ ಪುಂಡಿಮನೆ

News Updates

ಬೆಳ್ತಂಗಡಿ : ಮೊಗ್ರು ಜೈ ಶ್ರೀರಾಮ ಸೇವಾ ಟ್ರಸ್ಟ್ ಅಲೆಕ್ಕಿ -ಮುಗೇರಡ್ಕ ಮೊಗ್ರು, ಶ್ರೀ ರಾಮ ಶಿಶುಮಂದಿರದ 5 ನೇ ವರ್ಷದ ಶ್ರೀ ಕೃಷ್ಣೋತ್ಸವ. |ಕಾಶಿ ಶೆಟ್ಟಿ ನವಶಕ್ತಿ ಗುರುವಾಯನಕೆರೆ ಇವರ ಸ್ಮರಣಾರ್ಥ ಕಾಶಿ ಶೆಟ್ಟಿ ವಿದ್ಯಾ ಮಂದಿರ, ಹಾಗೂ ಶಾಸಕ ಹರೀಶ್ ಪೂಂಜಾರವರ ನೆರವಿನ ಅಡುಗೆ ಕೋಣೆ ಉದ್ಘಾಟನಾ ಕಾರ್ಯಕ್ರಮ |ಮಕ್ಕಳ ಶ್ರೀಕೃಷ್ಣ ಮತ್ತು ರಾಧೆಯರ ಸ್ಪರ್ಧೆ, ಮೊಸರು ಕುಡಿಕೆ, ಆಟೋಟ ಸ್ಪರ್ಧೆ

[t4b-ticker]
error: Content is protected !!