ಸೌಜನ್ಯ ಪ್ರಕರಣ ರಾಜಕೀಯ ತಿರುವು ಪಡೆದುಕೊಳ್ಳುತ್ತಿದೆ. ದುಷ್ಕರ್ಮಿಗಳ ಅಟ್ಟಹಾಸಕ್ಕೆ ಬಲಿಯಾದ ಹೆಣ್ಣು ಮಗಳ ವಿಚಾರದ ಬಗ್ಗೆ ಸಿಎಂ ಸಿದ್ದರಾಮಯ್ಯ ನೀಡಿರುವ ಹೇಳಿಕೆ ಸಾಕಷ್ಟು ಕುತೂಹಲವನ್ನು ಕೆರಳಿಸಿದೆ.ಮಾಧ್ಯಮದೊಂದಿಗೆ ಮಾತನಾಡಿದ ಅವರು, ‘ ಸೌಜನ್ಯ ವಿಷಯದ ಸತ್ಯ ಹೊರ ಬರಬೇಕೆಂದು ವೀರೇಂದ್ರ ಹೆಗ್ಗಡೆಯವರೇ ಎಸ್ ಐಟಿ ತನಿಖೆಯನ್ನು ಸ್ವಾಗತಿಸಿದ್ದಾರೆ. ಜನರಿಗೆ ಸತ್ಯ ವಿಷಯಗಳು ಗೊತ್ತಾಗಲಿ ಅನುಮಾನ ತೊಲಗಲಿ ಎಂದು ಹೇಳಿದ್ದಾರೆ. ಎಸ್ ಐಟಿ ತನಿಖೆ ನಡೆಸುತ್ತಿದ್ದೇವೆ. ನಾವು ಯಾರೂ ಇದರಲ್ಲಿ ಮೂಗು ತೂರಿಸುತ್ತಿಲ್ಲ. ಸತ್ಯ ಹೊರಗಡೆ ಬರಲಿ ಎಲ್ಲರಿಗೂ ಗೊತ್ತಾಗಲಿ ಎಂದು ತಿಳಿಸಿದ್ದಾರೆ. ಬಿಜೆಪಿಯವರಿಗೆ ಇಷ್ಟೆಲ್ಲ ದುಡ್ಡು ಎಲ್ಲಿಂದ ಬಂತು, ಇವರಿಗೆ ಬಂದಿರಬೇಕು, ರಾಜಕೀಯವಾಗಿ ಎಲ್ಲವನ್ನೂ ಬೆರಸಲು ಹೋಗಬಾರದು, ವಿರೋಧ ಪಕ್ಷ ಸರ್ಕಾರದ ಬಗ್ಗೆ ಟೀಕೆ ಮಾಡಲಿ ಎಲ್ಲವನ್ನೂ ಮಾಡುವುದಕ್ಕೆ ಹೋಗಬಾರದು. ಅಸತ್ಯವನ್ನು ಸತ್ಯ ಮಾಡೋಕೆ ಹೊರಟಿದೆ, ಬಿಜೆಪಿಯವರೇ ಸಿಬಿಐ ತನಿಖೆ ಮಾಡಿಸಿ ಈಗ ಸುಪ್ರೀಂ ಕೋರ್ಟ್ ಗೆ ಹೋಗಬೇಕು ಎಂದು ಹೇಳುತ್ತಿದ್ದಾರೆ. ಇವರು ವೀರೇಂದ್ರ ಹೆಗ್ಗಡೆ ಪರ ಅನ್ನುತ್ತಿದ್ದಾರೆ, ಮತ್ತೊಂದು ಕಡೆ ಸೌಜನ್ಯ ಪರ ಅಂತ ಹೇಳಿಕೊಂಡು ಓಡಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದರು. ಬುರುಡೆ ಮ್ಯಾನ್ ಚೆನ್ನಯ್ಯನ ಕರೆದುಕೊಂಡು ಬಂದದ್ದು ಕಾಂಗ್ರೆಸ್ ನವರು ಎಂಬ ಬಿಜೆಪಿ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿಎಂ, ‘ಯಾವಾಗಲೂ ಅಸತ್ಯದ ಬಗ್ಗೆ ಚರ್ಚೆ ಮಾಡಿದರೆ ಅದಕ್ಕೆ ಏನು ಹೇಳುವುದಕ್ಕೂ ಸಾಧ್ಯವಿಲ್ಲ. ಆರ್. ಅಶೋಕ್ , ಸುನಿಲ್ ಈ ಬಗ್ಗೆ ಅಸೆಂಬ್ಲಿಯಲ್ಲಿ ಏನು ಮಾತನಾಡಿದ್ದಾರೆ ಅನ್ನುವುದು ನಮಗೆ ಗೊತ್ತಿದೆ’ ಎಂದು ತಿಳಿಸಿದರು. ಒಟ್ಟಾರೆ ತನಿಖೆಯ ಬಗ್ಗೆ ಮಾತನಾಡಿದ ಅವರು ಸೌಜನ್ಯ ತಾಯಿ ಮುಂದಿನ ತನಿಖೆಯ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಅದು ಅವರಿಗೆ ಬಿಟ್ಟ ವಿಚಾರ ಎಂದು ತಿಳಿಸಿದರು.
‘ಬಿಜೆಪಿಯವರು ಒಮ್ಮೆ ವೀರೇಂದ್ರ ಹೆಗ್ಡೆ ಪರ ಅಂತಾರೆ ಮತ್ತೊಂದು ಕಡೆ ಸೌಜನ್ಯ ಪರ ಅಂತಾರೆ’, ಸಿಎಂ ಸಿದ್ದರಾಮಯ್ಯ ಹೇಳಿಕೆ
Savistara
Bureau Report
[t4b-ticker]











































