ಬಾನು ಮುಷ್ಕಾಕ್‌ರ ದಸರಾ ಉದ್ಘಾಟನೆ ವಿರೋಧದ ಪಾದಯಾತ್ರೆಗೆ ಮೈಸೂರಿಗೆ ತೆರಳಿದ ಪುತ್ತೂರಿನ ಸಹಿತ ಹಲವು ಕಡೆಯ ಹಿಂಜಾವೇ ಕಾರ್ಯಕರ್ತರು ಪೊಲೀಸ್ ವಶಕ್ಕೆ: ಠಾಣೆಯ ಮುಂಭಾಗ ಭಜನೆ

Picture of Savistara

Savistara

Bureau Report

ವಿಶ್ವವಿಖ್ಯಾತ ಬೂಕರ್ ಪ್ರಶಸ್ತಿ ವಿಜೇತೆಯಾದ ಕನ್ನಡ ಸಾಹಿತಿ ಬಾನು ಮುಸ್ತಾಕ್ ಅವರನ್ನು ಮೈಸೂರು ದಸರಾ ಮಹೋತ್ಸವದ ಉದ್ಘಾಟಕರಾಗಿ ಆಯ್ಕೆ ಮಾಡಿರುವುದನ್ನು ವಿರೋಧಿಸಿ, ಹಿಂದು ಜಾಗರಣ ವೇದಿಕೆಯಂತಹ ಸಂಘಟನೆಗಳು ಹಮ್ಮಿಕೊಂಡಿದ್ದ ಪಾದಯಾತ್ರೆಗೆ ಪೊಲೀಸ್ ಇಲಾಖೆ ತಡೆಯೊಡ್ಡಿದೆ.

ಪುತ್ತೂರು, ಸೆಪ್ಟೆಂಬರ್ 9: ವಿಶ್ವವಿಖ್ಯಾತ ಬೂಕ‌ರ್ ಪ್ರಶಸ್ತಿ ವಿಜೇತೆಯಾದ ಕನ್ನಡ ಸಾಹಿತಿ ಬಾನು ಮುಷ್ಕಾಕ್ ಅವರನ್ನು ಮೈಸೂರು ದಸರಾ ಮಹೋತ್ಸವದ ಉದ್ಘಾಟಕರಾಗಿ ಆಯ್ಕೆ ಮಾಡಿರುವುದನ್ನು ವಿರೋಧಿಸಿ, ಹಿಂದು ಜಾಗರಣ ವೇದಿಕೆಯಂತಹ ಸಂಘಟನೆಗಳು ಹಮ್ಮಿಕೊಂಡಿದ್ದ ಪಾದಯಾತ್ರೆಗೆ ಪೊಲೀಸ್ ಇಲಾಖೆ ತಡೆಯೊಡ್ಡಿದೆ.

ಇಂದು ಬೆಳಗ್ಗೆ ಪುತ್ತೂರಿನಿಂದ ಮೈಸೂರಿಗೆ ತೆರಳಿದ ನೂರಾರು ಕಾರ್ಯಕರ್ತರನ್ನು ಮಾರ್ಗ ಮಧ್ಯದಲ್ಲಿ ನಿಲ್ಲಿಸಿ ವಶಕ್ಕೆ ಪಡೆದು, ವಿವಿಧ ಪೊಲೀಸ್ ಠಾಣೆಗಳಿಗೆ ಕರೆತರಲಾಗಿದೆ. ಠಾಣೆಯ ಮುಂದೆ ಜಾಗರಣ ವೇದಿಕೆಯ ಕಾರ್ಯಕರ್ತರು ಭಜನೆ ನಡೆಸಿದರು.

ಈ ಪ್ರತಿಭಟನೆಯಲ್ಲಿ ಪುತ್ತೂರು ಹಿಂದು ಜಾಗರಣ ವೇದಿಕೆಯ ಪ್ರಮುಖರಾದ ಮೋಹನ್ ದಾಸ್ ರೈ, ದಿನೇಶ್ ಪಂಜಿಗ, ಶಿವಪ್ರಸಾದ್ ಶಾಂತಿಗೋಡು, ಕೀರ್ತನ ಸವಣೂರು, ಧನುಷ್, ಭವಿತ್, ತೇಜಸ್, ಹೇಮಂತ್, ಸುಹಾಸ್‌, ಲೋಕನಾಥ್ ಭಂಡಾರಿ ಸೇರಿದಂತೆ ಹಲವು ಮಂದಿ ಕಾರ್ಯಕರ್ತರು ಭಾಗವಹಿಸಿದ್ದರು.

ಅವರನ್ನು ಮೈಸೂರಿನ ಅಲೆನಹಳ್ಳಿ ಪೊಲೀಸ್‌ ಠಾಣೆಗೆ ಕರೆತರಲಾಗಿದೆ. ಈ ಕ್ರಮಕ್ಕೆ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.

[t4b-ticker]
error: Content is protected !!