ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ಹೆಸರಿನಲ್ಲಿ ‘ಕುಕ್ಕೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ ಸುಬ್ರಹ್ಮಣ್ಯ ದ ಕ’ ಎಂಬ ಯಕ್ಷಗಾನ ಮಂಡಳಿಯನ್ನು ತೆರೆಯಲು ಪ್ರಮುಖರು ಪ್ರಯತ್ನ ಪಟ್ಟಿರುವ ವಿಷಯ ತಿಳಿದು ಬಂದಿದ್ದು ದೇವಾಲಯಕ್ಕೆ ಸಲ್ಲಿಸಿದ ಅರ್ಜಿಯನ್ನು ದೇವಾಲಯದ ಮುಖ್ಯ ಕಾರ್ಯನಿರ್ವಾಹಣ ಅಧಿಕಾರಿಗಳು ತಿರಸ್ಕರಿಸಿದ್ದಾರೆ. ದೇವಾಲಯದ ಹೆಸರಿನಲ್ಲಿ ಯಾವುದೇ ಸಂಘ ಸಂಸ್ಥೆಗಳಾಗಲಿ ಅಥವ ಯಾವುದೇ ಖಾಸಗಿ ವ್ಯಕ್ತಿಗಳಾಗಲಿ ದೇಣಿಗೆ ಸ್ವೀಕರಿಸುವುದಕ್ಕೆ ಮಾನ್ಯತೆ ಇರುವುದಿಲ್ಲವಾದುದರಿಂದ ದೇವಾಲಯದ ಹೆಸರಿನಲ್ಲಿ ಯಕ್ಷಗಾನ ಮೇಳ ನಡೆಸಲು ಅವಕಾಶ ಇರುವುದಿಲ್ಲವೆಂದು ಹಿಂಬರಹ ನೀಡಿದ್ದಾರೆ. ಸ್ಥಳೀಯ ಕಾಂಗ್ರೆಸ್ ನಾಯಕರು ಇದರಲ್ಲಿ ಮುತುವರ್ಜಿವಹಿಸಿರುವುದಾಗಿ ತಿಳಿದು ಬಂದಿದೆ.
ಕುಕ್ಕೆ ಶ್ರೀಸುಬ್ರಹ್ಮಣ್ಯ ಸ್ವಾಮಿ ದೇವರ ಹೆಸರಲ್ಲಿ ಯಕ್ಷಗಾನ ಮಂಡಳಿ |ದೇಣಿಗೆ ಸಂಗ್ರಹಿಸಲು ಅವಕಾಶವಿಲ್ಲವೆಂದು ಅನುಮತಿ ನಿರಾಕರಿಸಿದ ಅಧಿಕಾರಿಗಳು
Savistara
Bureau Report
[t4b-ticker]











































