ಭರತ್‌ ಕುಮ್ಮೇಲು ಟಾರ್ಗೆಟ್ : ಜಾಲತಾಣದಲ್ಲಿ ಪ್ರತೀಕಾರದ ಪೋಸ್ಟ್ ವೈರಲ್, 16 ಪೋಸ್ಟ್ ವಿರುದ್ಧ ಕಂಕನಾಡಿ ಠಾಣೆಯಲ್ಲಿ ಎಫ್‌ಐಆ‌ರ್, ಪ್ರಚೋದನಕಾರಿ ಪೋಸ್ಟ್ ಬಗ್ಗೆ ಪೊಲೀಸರ ಹದ್ದಿನ ಕಣ್ಣು

Picture of Savistara

Savistara

Bureau Report

ಸಾಮಾಜಿಕ ಜಾಲತಾಣದ ಮೇಲೆ ಪೊಲೀಸರ ಹದ್ದಿನ ಕಣ್ಣಿನ ನಡುವೆಯೂ ಕಿಡಿಗೇಡಿಗಳು ಮತ್ತೆ ಪ್ರತೀಕಾರದ ಹತ್ಯೆ ಬಗ್ಗೆ ಪೋಸ್ಟ್ ಹಾಕಿದ್ದು ನಗರದ ಕಂಕನಾಡಿ ನಗರ ಠಾಣೆ ಪೊಲೀಸರು 16 ಇನ್ಸ್ ಟಾ ಗ್ರಾಮ್ ಖಾತೆಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಮಂಗಳೂರು, ಡಿ.10: ಸಾಮಾಜಿಕ ಜಾಲತಾಣದ ಮೇಲೆಪೊಲೀಸರ ಹದ್ದಿನ ಕಣ್ಣಿನ ನಡುವೆಯೂ ಕಿಡಿಗೇಡಿಗಳು ಮತ್ತೆ ಪ್ರತೀಕಾರದ ಹತ್ಯೆ ಬಗ್ಗೆ ಪೋಸ್ಟ್ ಹಾಕಿದ್ದು ನಗರದ ಕಂಕನಾಡಿ ನಗರ ಠಾಣೆ ಪೊಲೀಸರು 16 ಇನ್ಸ್ ಟಾ ಗ್ರಾಮ್ ಖಾತೆಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.ನಾಲ್ಕು ತಿಂಗಳ ಬಿಡುವಿನ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಮತ್ತೆ ದ್ವೇಷದ ಪೋಸ್ಟ್ ಕಾಣಿಸಿಕೊಂಡಿದೆ. 2017ರಲ್ಲಿ ಕೊಲೆಯಾದ ಎಸ್ಟಿಪಿಐ ಕಾರ್ಯಕರ್ತ ಅಶ್ರಫ್ ಕಲಾಯಿ ಹತ್ಯೆಗೆ ಪ್ರತೀಕಾರದ ಸಂದೇಶಗಳನ್ನು ಹಾಕಲಾಗಿದ್ದು, Target 900, Team Target Boys, Immu Bai ಇನ್ಸ್ಟಾಗ್ರಾಮ್ ಪೋಸ್ಟ್ ಗಳಲ್ಲಿ ನಾನಾ ರೀತಿಯ ಪೋಸ್ಟ್ ಮಾಡಲಾಗಿದೆ. ಕಲಾಯಿ ಅಶ್ರಫ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ, ಹಿಂದೂ ಸಂಘಟನೆಯ ಮುಖಂಡ ಭರತ್ ಕುಮೇಲ್ ಹತ್ಯೆ ಮಾಡಿಯೇ ತೀರುತ್ತೇವೆಂದು ಎಚ್ಚರಿಕೆ ನೀಡಲಾಗಿದೆ.

Revange Is Loading, Target Set One By One ໖໐໙ ಸಂದೇಶ ಇರುವ ಮತ್ತೊಂದು ಪೋಸ್ಟ್ ಮಾಡಿದ್ದು, ಕೈಯಲ್ಲಿ ತಲವಾರು ಮತ್ತು ಪಿಸ್ತೂಲ್ ಹಿಡಿದು ಮುಖ ಮರೆ ಮಾಚಿರುವ ರೀಲ್ಸ್ ಕೂಡ ಕಾಣಿಸಿಕೊಂಡಿದೆ. ಇತ್ತೀಚೆಗೆ ಕೇರಳದಲ್ಲಿ ಹತ್ಯೆಯಾದ ರೌಡಿಶೀಟರ್ ನೌಫಾಲ್ ಸಾವಿಗೂ ಪ್ರತೀಕಾರ ತೀರಿಸಿಕೊಳ್ಳುವ ಎಚ್ಚರಿಕೆ ನೀಡಲಾಗಿದೆ. ಹಲವು ಪ್ರಕರಣಗಳ ಆರೋಪಿ, ಕೋಕಾ ಏಕ್ಸ್ ನಡಿ ಬಂಧಿಸಲ್ಪಟ್ಟ ಬಜರಂಗದಳ ಕಾರ್ಯಕರ್ತ ಭರತ್ ಕುಮೇಲ್ ಸದ್ಯ ಮಂಗಳೂರು ಜೈಲಿನಲ್ಲಿದ್ದಾನೆ.ಜಾಲತಾಣದಲ್ಲಿ ಪ್ರಚೋದನಕಾರಿ ಪೋಸ್ಟ್ ಹಾಕುವವರ ಮೇಲೆ ನಿಗಾ ಇಡುವ ಸಲುವಾಗಿಯೇ ಎಸ್‌ಎಸ್ಎಫ್ ಮಾಡಲಾಗಿದ್ದು ಹಲವಾರು ಪೋಸ್ಟ್ ಕಾಣಿಸಿಕೊಂಡ ಬೆನ್ನಲ್ಲೇ ಆಯುಕ್ತ ಸುಧೀರ್ ರೆಡ್ಡಿ ಸೂಚನೆಯಂತೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಕಂಕನಾಡಿ ನಗರ ಠಾಣೆಯಲ್ಲಿ 16 ಇನ್ಸಾಗ್ರಾಮ್ ಖಾತೆಗಳನ್ನು ಗುರುತಿಸಿ ಎಫ್‌ಐಆ‌ರ್ ಮಾಡಲಾಗಿದೆ. ಇದಲ್ಲದೆ, ಆಯಕಟ್ಟಿನ ಜಾಗಗಳ ಮೇಲೆ ಹದ್ದಿನ ಕಣ್ಣಿಡಲಾಗಿದ್ದು, ನಟೋರಿಯಸ್ ಗ್ಯಾಂಗ್‌ಗಳ ಚಲನವಲನಗಳನ್ನೂ ಗಮನಿಸಲಾಗುತ್ತಿದೆ. ಈ ಹಿಂದೆಯೂ ಭರತ್ ಕುಮ್ಮೇಲ್‌ಗೆ ಸಾಮಾಜಿಕ ತಾಣಗಳ ಮೂಲಕ ಕೊಲೆ ಬೆದರಿಕೆ ಹಾಕಲಾಗಿತ್ತು. BEARY_ROYAL_NAWAB, ಬ್ಯಾರಿ ಟ್ರೋಲ‌ರ್, ಮಂಗಳೂರು ಕಿಂಗ್ ಎಂಬ ಹೆಸರಿನ ಪೇಜ್‌ಗಳ ಮೂಲಕ ಎಚ್ಚರಿಕೆ ಸಂದೇಶಗಳು ಬಂದಿದ್ದವು. ಭರತ್ ಕುಮೇಲ್ ರಕ್ತ ಈ ಭೂಮಿಗೆ ಹರಿಸದೆ ನಮಗೆ ಸಮಾಧಾನವಿಲ್ಲ. ನಮ್ಮ ಸಹೋದರ ಅಶ್ರಫ್ ಕಲಾಯಿಯನ್ನು ಮರೆತಿಲ್ಲ, ಪ್ರತಿರೋಧ ಅಪರಾಧವಲ್ಲ ಎಂದು ಪೋಸ್ಟ್ ಮಾಡಲಾಗಿತ್ತು.

ಟಾರ್ಗೆಟ್ ಗ್ರೂಪಿನ ಇಲ್ಯಾಸ್ ಕೊಲೆಯ ಬಳಿಕ ಈ ತಂಡ ಸೈಲೆಂಟ್ ಆಗಿತ್ತು. ಆಬಳಿಕ ದಾವೂದ್ ಈ ತಂಡದ ನೇತೃತ್ವ ವಹಿಸಿದ್ದರೂ ಗ್ರೂಪ್ ಸಕ್ರಿಯ ಆಗಿರಲಿಲ್ಲ. ಇದೀಗ ಟಾರ್ಗೆಟ್ ಗ್ರೂಪ್ ಹೆಸರಲ್ಲಿ ಪೋಸ್ಟ್ ಮಾಡಿದ್ದು ಎಲ್ಲದಕ್ಕೂ ಪ್ರತೀಕಾರ ತೀರಿಸುವ ಸೂಚನೆ ನೀಡಲಾಗಿದೆ. ಕಳೆದ ಮೇ ತಿಂಗಳಲ್ಲಿ ಬಜ್ಜೆಯಲ್ಲಿ ಬಜರಂಗದಳ ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆಯೂ ಇದೇ ರೀತಿ ಆಗಿತ್ತು.

[t4b-ticker]
error: Content is protected !!