ಮೊದಲ ಬಾರಿಗೆ ಉದ್ಯೋಗಕ್ಕೆ ಸೇರಿದವರಿಗೆ ₹15,000 ಪ್ರೋತ್ಸಾಹ ಧನ: ಕೇಂದ್ರ ಸರ್ಕಾರ ಘೋಷಣೆ

Picture of Savistara

Savistara

Bureau Report

ನವದೆಹಲಿ: ಮೊದಲ ಬಾರಿಗೆ ಉದ್ಯೋಗ ಪ್ರಾರಂಭಿಸುವವರಿಗೆ ಕೇಂದ್ರ ಸರ್ಕಾರದಿಂದ ಸಿಹಿ ಸುದ್ದಿ ಬಂದಿದೆ. ಪ್ರಧಾನಮಂತ್ರಿ ವಿಕಸಿತ ಭಾರತ್ ರೋಜ್ಗಾರ್ ಯೋಜನೆ (PMVRY) ಅಡಿಯಲ್ಲಿ, ಮೊದಲ ಬಾರಿಗೆ ಇಪಿಎಫ್‌ಒ (EPFO) ನಲ್ಲಿ ನೋಂದಾಯಿಸಿಕೊಳ್ಳುವ ಉದ್ಯೋಗಿಗಳಿಗೆ ₹15,000 ಪ್ರೋತ್ಸಾಹಧನ ನೀಡಲಾಗುತ್ತದೆ ಎಂದು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ತಿಳಿಸಿದೆ.

ಈ ಕುರಿತು ಸಚಿವಾಲಯ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ. ಮೊದಲ ಬಾರಿಗೆ ಉದ್ಯೋಗಕ್ಕೆ ಸೇರುತ್ತಿರುವವರು ಮತ್ತು EPFOನಲ್ಲಿ ಹೊಸದಾಗಿ ನೋಂದಾಯಿಸಿಕೊಳ್ಳುವವರಿಗೆ ಮಾತ್ರ ಈ ಯೋಜನೆಯ ಲಾಭ ಲಭ್ಯವಾಗಲಿದೆ ಎಂದು ಸ್ಪಷ್ಟಪಡಿಸಲಾಗಿದೆ.

ಯಾರು ಈ ಯೋಜನೆಯ ಲಾಭ ಪಡೆಯಬಹುದು?

  • ಮೊದಲ ಬಾರಿಗೆ ಉದ್ಯೋಗ ಪ್ರವೇಶಿಸುವವರು
  • ಮೊದಲ ಬಾರಿಗೆ EPFOನಲ್ಲಿ ನೋಂದಾಯಿಸಿಕೊಳ್ಳುವವರು
  • ಈಗಾಗಲೇ EPFO ಸದಸ್ಯರಾಗಿರುವವರಿಗೆ ಈ ಯೋಜನೆ ಅನ್ವಯವಾಗುವುದಿಲ್ಲ

ಯೋಜನೆಗೆ ಹೇಗೆ ಅರ್ಜಿ ಸಲ್ಲಿಸಬೇಕು?

ಉದ್ಯೋಗಕ್ಕೆ ಸೇರಿದ ನಂತರ ನಿಮ್ಮ EPFO ಖಾತೆ ತೆರೆಯಲಾಗುತ್ತದೆ. EPFOನಲ್ಲಿ ನೋಂದಾಯಿಸಿದ ಬಳಿಕ, pmvry.labour.gov.in ವೆಬ್‌ಸೈಟ್‌ಗೆ ಭೇಟಿ ನೀಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಮನೆಲ್ಲೇ ಕುಳಿತು ಈ ಪ್ರಕ್ರಿಯೆ ಪೂರ್ಣಗೊಳಿಸಬಹುದಾಗಿದೆ.

ಪಿಎಫ್ ಹಣ ಹಿಂಪಡೆಯುವ ಹೊಸ ನಿಯಮಗಳು

ಹೊಸ ನಿಯಮಗಳ ಪ್ರಕಾರ, ಪಿಎಫ್ ಹಣ ಹಿಂಪಡೆಯುವಿಕೆ ಇದೀಗ ಇನ್ನಷ್ಟು ಸುಲಭವಾಗಿದೆ. ಶೀಘ್ರದಲ್ಲೇ EPFO ATM ಕಾರ್ಡ್ ಮೂಲಕವೂ ಹಣ ಹಿಂಪಡೆಯುವ ವ್ಯವಸ್ಥೆ ಜಾರಿಗೆ ಬರಲಿದೆ.

ಯಾವ ಸಂದರ್ಭಗಳಲ್ಲಿ ಪಿಎಫ್ ಹಣ ಹಿಂಪಡೆಯಬಹುದು?

  • ಉದ್ಯೋಗ ಕಳೆದುಕೊಂಡರೆ
  • ಮದುವೆ
  • ಮನೆ ಖರೀದಿ ಅಥವಾ ದುರಸ್ತಿ
  • ಮಕ್ಕಳ ಶಿಕ್ಷಣ
  • ವೈದ್ಯಕೀಯ ಚಿಕಿತ್ಸೆ
  • ನಿವೃತ್ತಿ

ಎಷ್ಟು ಹಣ ಹಿಂಪಡೆಯಬಹುದು?

  • ಉದ್ಯೋಗ ಕಳೆದುಕೊಂಡ ತಕ್ಷಣ: 75% ಪಿಎಫ್ ಹಣ ಹಿಂಪಡೆದುಕೊಳ್ಳಬಹುದು
  • 12 ತಿಂಗಳ ನಿರುದ್ಯೋಗದ ನಂತರ: ಉಳಿದ 25% ಸಹಿತ 100% ಹಣ ಹಿಂಪಡೆಯಬಹುದುಮದುವೆ: 7 ವರ್ಷ ಸೇವೆಯ ನಂತರ 50% ವರೆಗೆ
  • ವೈದ್ಯಕೀಯ ಚಿಕಿತ್ಸೆ: ಸೇವಾ ಅವಧಿ ಲೆಕ್ಕಿಸದೆ ಪೂರ್ಣ ಮೊತ್ತ ಅಥವಾ 6 ತಿಂಗಳ ಸಂಬಳದಷ್ಟು

ಈ ಯೋಜನೆಯ ಮೂಲಕ ಯುವಜನತೆಗೆ ಉದ್ಯೋಗ ಪ್ರಾರಂಭದ ಹಂತದಲ್ಲೇ ಆರ್ಥಿಕ ಬೆಂಬಲ ನೀಡುವುದು ಸರ್ಕಾರದ ಉದ್ದೇಶವಾಗಿದೆ.

News Updates

ಮೋದಿ ಸರ್ಕಾರದ ‘ರಾಷ್ಟ್ರೀಯ ಹಾಲಿನ ಅಭಿವೃದ್ಧಿ ಯೋಜನೆ’ಯಿಂದ ಶಿಮುಲ್ ವ್ಯಾಪ್ತಿಯ 37,750ಕ್ಕೂ ಹೆಚ್ಚು ರೈತ ಕುಟುಂಬಗಳಿಗೆ ನೇರ ಲಾಭ! ರಾಜ್ಯದ ಹೈನುಗಾರರ ಪರವಾಗಿ ಸಂಸತ್ತಿನಲ್ಲಿ ಸಂಸದ ಬಿ.ವೈ. ರಾಘವೇಂದ್ರ ಪ್ರಸ್ತಾಪ: ರಾಜ್ಯದ ಹಾಲು ಉತ್ಪಾದನಾ ವಲಯ ಉತ್ತೇಜನಕ್ಕೆ ಕೇಂದ್ರದಿಂದ 455 ಕೋಟಿ ರೂ. ಯೋಜನೆ

[t4b-ticker]
error: Content is protected !!