T20 ವಿಶ್ವಕಪ್‌ನಿಂದ ಆಸೀಸ್ ಔಟ್: ಒಂದೂ ಬಾಲ್ ಆಡದೆ ಸೂಪರ್-8 ತಲುಪಿದ ಜಿಂಬಾಂಬೈ

Picture of Savistara

Savistara

Bureau Report

ಪಲ್ಲಕೆಲೆ: ಇಲ್ಲಿ ನಡೆಯಬೇಕಿದ್ದ ಟಿ20 ವಿಶ್ವಕಪ್‌ನ ಸಿ ಗುಂಪಿನ ಐರ್ಲೆಂಡ್ ಹಾಗೂ ಜಿಂಬಾಂಬೈ ತಂಡಗಳ ನಡುವಿನ ಪಂದ್ಯವು ಮಳೆಯಿಂದಾಗಿ ರದ್ದಾಗಿದೆ. ಪಂದ್ಯವು ಒಂದೂ ಎಸೆತವನ್ನೂ ಕಾಣದೆ ರದ್ದಾಗಿದ್ದು, ಉಭಯ ತಂಡಗಳಿಗೆ ತಲಾ ಒಂದೊಂದು ಅಂಕವನ್ನು ಹಂಚಿಕೊಂಡವು.

ಬಲಿಷ್ಠ ಆಸ್ಟ್ರೇಲಿಯಾ ಹಾಗೂ ಓಮಾನ್ ತಂಡಗಳ ವಿರುದ್ಧ ಗೆಲುವು ಸಾಧಿಸಿದ್ದ ಜಿಂಬಾಂಬೈ ತಂಡ ಸಿ ಗುಂಪಿನಲ್ಲಿ 4 ಅಂಕ ಪಡೆದು ಎರಡನೇ ಸ್ಥಾನದಲ್ಲಿತ್ತು. ಉಳಿದ 2 ಪಂದ್ಯಗಳಿಂದ ಒಂದನ್ನು ಗೆದ್ದರೂ ಅಥವಾ ಒಂದು ಪಂದ್ಯ ರದ್ದಾಗಿ ಒಂದು ಅಂಕ ಸಿಕ್ಕರೂ ಜಿಂಬಾಂಬೈ ತಂಡ ಸೂಪರ್-8 ಹಂತವನ್ನು ತಲುಪಲಿತ್ತು. ಅದೃಷ್ಟವಶಾತ್ ಐರ್ಲೆಂಡ್ ಎದುರಿನ ಪಂದ್ಯ ಮಳೆಯಿಂದಾಗಿ ರದ್ದಾಗಿದ್ದು, 5 ಅಂಕಗಳೊಂದಿಗೆ ಸೂಪರ್-8ರ ಹಂತವನ್ನು ಪ್ರವೇಶಿಸಿದೆ.

ಆಸ್ಟ್ರೇಲಿಯಾಗೆ ಆಘಾತವಿಶ್ವ ಕ್ರಿಕೆಟ್‌ನ ಬಲಿಷ್ಠ ತಂಡಗಳಲ್ಲಿ ಒಂದಾಗಿರುವ ಆಸ್ಟ್ರೇಲಿಯಾ ಕ್ರಿಕೆಟ್ ತಂಡವು ಈ ಬಾರಿಯ ಟೂರ್ನಿ ಆರಂಭಕ್ಕೂ ಮೊದಲು ಗಾಯದ ಸಮಸ್ಯೆ ಕಾಂಗರೂಗಳ ತಂಡವನ್ನು ಕಾಡಿತ್ತು. ಟೂರ್ನಿ ಆರಂಭಕ್ಕೂ ಮೊದಲು ಪ್ರಮುಖ ವೇಗಿ ಜೋಶ್ ಹ್ಯಾಜಲ್‌ವುಡ್ ಹೊರಬಿದ್ದಿದ್ದರು. ಟೂರ್ನಿಯ ಮೊದಲ ಪಂದ್ಯಕ್ಕೂ ಮುನ್ನ ನಾಯಕ ಪ್ಯಾಟ್ ಕಮಿನ್ಸ್ ಕೂಡ ತಂಡದಿಂದ ಹೊರಬಿದ್ದಿದ್ದರು.

ಅದಾಗ್ಯೂ, ಸಿ ಗುಂಪಿನಲ್ಲಿ ಬಲಿಷ್ಠ ತಂಡವಾಗಿದ್ದ ಆಸ್ಟ್ರೇಲಿಯಾ ಸೂಪ‌ರ್-8ರ ಹಂತವನ್ನು ಪ್ರವೇಶಿಸಲಿದೆ ಎಂಬುದು ಕ್ರಿಕೆಟ್ ಪಂಡಿತರ ಲೆಕ್ಕಾಚಾರವಾಗಿತ್ತು.

ಆದರೆ, ಆಸ್ಟ್ರೇಲಿಯಾ ತಂಡವು ಲೀಗ್ ಮಾದರಿಯಲ್ಲಿ ನೀರಸ ಪ್ರದರ್ಶನ ತೋರಿತು. ಜಿಂಬಾಂಬೈ ಹಾಗೂ ಶ್ರೀಲಂಕಾ ತಂಡಗಳ ಎದುರು ಸೋತು ಟೂರ್ನಿಯಿಂದಲೇ ಹೊರಬಿದ್ದಿದೆ. ಆಸ್ಟ್ರೇಲಿಯಾ ತಂಡಕ್ಕೆ ಲೀಗ್ ಹಂತದಲ್ಲಿ ಓಮಾನ್ ವಿರುದ್ಧದ ಪಂದ್ಯ ಬಾಕಿ ಉಳಿದಿದ್ದು, ಪಂದ್ಯದ ಫಲಿತಾಂಶ ಏನೇ ಬಂದರು ಅಂಕಪಟ್ಟಿಯ ಮೇಲೆ ಯಾವುದೇ ಪರಿಣಾಮ ಉಂಟು ಮಾಡುವುದಿಲ್ಲ.

News Updates

BREAKING NEWS ಸುಳ್ಯ :ಪಂಜ ಕಾಂಗ್ರೆಸ್ ಪಕ್ಷದ ಹುದ್ದೆಗೆ ರಾಜಿನಾಮೆ ನೀಡಿದ ದಿನೇಶ್ ಪುಂಡಿಮನೆ, ಕುಸುಮಾಧರ ಕೆರೆಯಡ್ಕ,ಲೋಕನಾಥ್ ಕುದ್ವ |ನಮ್ಮ ಮಾತನ್ನು ಪಕ್ಷದ ನಾಯಕರು ಉಳಿಸಿಕೊಂಡಿಲ್ಲ, ದೇವಸ್ಥಾನ ವ್ಯವಸ್ಥೆ ಸರಿದಾರಿಗೆ ತರುವ ಕೆಲಸವಾಗಲಿ: ದಿನೇಶ್ ಪುಂಡಿಮನೆ

News Updates

ಬೆಳ್ತಂಗಡಿ : ಮೊಗ್ರು ಜೈ ಶ್ರೀರಾಮ ಸೇವಾ ಟ್ರಸ್ಟ್ ಅಲೆಕ್ಕಿ -ಮುಗೇರಡ್ಕ ಮೊಗ್ರು, ಶ್ರೀ ರಾಮ ಶಿಶುಮಂದಿರದ 5 ನೇ ವರ್ಷದ ಶ್ರೀ ಕೃಷ್ಣೋತ್ಸವ. |ಕಾಶಿ ಶೆಟ್ಟಿ ನವಶಕ್ತಿ ಗುರುವಾಯನಕೆರೆ ಇವರ ಸ್ಮರಣಾರ್ಥ ಕಾಶಿ ಶೆಟ್ಟಿ ವಿದ್ಯಾ ಮಂದಿರ, ಹಾಗೂ ಶಾಸಕ ಹರೀಶ್ ಪೂಂಜಾರವರ ನೆರವಿನ ಅಡುಗೆ ಕೋಣೆ ಉದ್ಘಾಟನಾ ಕಾರ್ಯಕ್ರಮ |ಮಕ್ಕಳ ಶ್ರೀಕೃಷ್ಣ ಮತ್ತು ರಾಧೆಯರ ಸ್ಪರ್ಧೆ, ಮೊಸರು ಕುಡಿಕೆ, ಆಟೋಟ ಸ್ಪರ್ಧೆ

[t4b-ticker]
error: Content is protected !!