ಕರಾವಳಿ ಬಂದರಿಗೆ ಬಂತೊಂದು ವಿಲಾಸಿ ಹಡಗು: ಸಾಂಪ್ರದಾಯಿಕ ಸ್ವಾಗತಕ್ಕೆ ಮನಸೋತ ವಿದೇಶಿಗರು!

Picture of Savistara

Savistara

Bureau Report

ಮಂಗಳೂರಿನ ನವಮಂಗಳೂರು ಬಂದರಿಗೆ ಗುರುವಾರ ವಿಲಾಸಿ ಹಡಗೊಂದು ಆಗಮಿಸಿದ್ದು ಎಲ್ಲರ ಆಕರ್ಷಣೆಯ ಕೇಂದ್ರಬಿಂದುವಾಗಿತ್ತು.ದೂರದ ಮೊರ್ಮುಗಾವೊದಿಂದ ಬಂದ ಈ ಪ್ರವಾಸಿಗರನ್ನು ನವಮಂಗಳೂರು ಬಂದರಿನಲ್ಲಿ ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು. ಆರತಿ ಬೆಳಗಿ ಹಣೆಗೆ ತಿಲಕವಿಟ್ಟು ಬರಮಾಡಿಕೊಂಡ ಬಗೆಗೆ ವಿದೇಶಿಗರು ಮನಸೋತರು. ಭಾರತೀಯ ಸಾಂಪ್ರದಾಯಿಕ ಶೈಲಿಯ ಮತ್ತು ಆತ್ಮೀಯವಾದ ಸ್ವಾಗತಕ್ಕೆ ಅವರು ಮೆಚ್ಚುಗೆಯ ಮಾತುಗಳನ್ನಾಡಿದರು.

ಎಷ್ಟು ಮಂದಿ ಬಂದಿದ್ದರು?.

ನವಮಂಗಳೂರಿಗೆ ಬಂದ ಪ್ರಸಕ್ತ ಋತುಮಾನದ ಎರಡನೇ ವಿಲಾಸಿ ಹಡಗು ಇದಾಗಿದೆ. ‘ಎಂ.ಎಸ್. ಐಲ್ಯಾಂಡ್ ಸೈ’ ಹೆಸರಿನ ಈ ಹಡಗಿನಲ್ಲಿ 95 ಪ್ರಯಾಣಿಕರು ಮತ್ತು 70 ಸಿಬ್ಬಂದಿ ಇದ್ದರು. ಪ್ರವಾಸಿಗರಿಗೆ ಅನುಕೂಲವಾಗುವ ಎಲ್ಲ ವ್ಯವಸ್ಥೆಗಳನ್ನು ಬಂದರು ಪ್ರದೇಶದಲ್ಲಿ ಮಾಡಲಾಗಿತ್ತು.ಸೆಲಿ ಕ್ಲಿಕ್ಕಿಸಿ ಖುಷಿ ಪಟ್ಟರು:ಬಂದ ವಿದೇಶಿ ಪ್ರವಾಸಿಗರಿಗೆಂದ ವಿಶೇಷ ರೀತಿಯಲ್ಲಿ ಸೆಲಿ ಸ್ಟ್ಯಾಂಡ್ ಮಾಡಲಾಗಿದ್ದು, ಇಲ್ಲಿ ಸೆಲಿ ಕ್ಲಿಕ್ಕಿಸಿಕೊಳ್ಳುವ ಮೂಲಕ ಖುಷಿಪಟ್ಟರು. ಆಯುಷ್ ಸಚಿವಾಲಯ ಸ್ಥಾಪಿಸಿದ ಧ್ಯಾನ ಕೇಂದ್ರ ಪ್ರವಾಸೋದ್ಯಮ ಸಚಿವಾಲಯ ಸ್ಥಾಪಿಸಿದ ಯಕ್ಷಗಾನ ಕಲಾ ಪ್ರಕಾರದ ಸೆಲಿ ವಿದೇಶಿಗರ ಗಮನಸೆಳೆಯಿತು.

ನಗರ ಸುತ್ತಾಟ:

ನವಮಂಗಳೂರಿಗೆ ಬಂದ ಬಳಿಕ ನಗರದ ಹಲವೆಡೆ ಅವರು ಸುತ್ತಾಟ ನಡೆಸಿದರು. ಕುದ್ರೋಳಿ ಗೋಕರ್ಣನಾಥ ದೇವಸ್ಥಾನ, ಸೈಂಟ್ ಅಲೋಶಿಯಸ್ ಚಾಪೆಲ್, ಸ್ಥಳೀಯ ಮಾರುಕಟ್ಟೆಗಳು ಮತ್ತು ಕಲ್ಬಾವಿ ಗೋಡಂಬಿ ಕಾರ್ಖಾನೆ ಸೇರಿದಂತೆ ಮಂಗಳೂರು ಮತ್ತು ಸುತ್ತಮುತ್ತಲಿನ ಪ್ರಮುಖ ತಾಣಗಳಿಗೆ ಪ್ರವಾಸಿಗರು ಭೇಟಿ ನೀಡಿದರು.

News Updates

BREAKING NEWS ಸುಳ್ಯ :ಪಂಜ ಕಾಂಗ್ರೆಸ್ ಪಕ್ಷದ ಹುದ್ದೆಗೆ ರಾಜಿನಾಮೆ ನೀಡಿದ ದಿನೇಶ್ ಪುಂಡಿಮನೆ, ಕುಸುಮಾಧರ ಕೆರೆಯಡ್ಕ,ಲೋಕನಾಥ್ ಕುದ್ವ |ನಮ್ಮ ಮಾತನ್ನು ಪಕ್ಷದ ನಾಯಕರು ಉಳಿಸಿಕೊಂಡಿಲ್ಲ, ದೇವಸ್ಥಾನ ವ್ಯವಸ್ಥೆ ಸರಿದಾರಿಗೆ ತರುವ ಕೆಲಸವಾಗಲಿ: ದಿನೇಶ್ ಪುಂಡಿಮನೆ

News Updates

ಬೆಳ್ತಂಗಡಿ : ಮೊಗ್ರು ಜೈ ಶ್ರೀರಾಮ ಸೇವಾ ಟ್ರಸ್ಟ್ ಅಲೆಕ್ಕಿ -ಮುಗೇರಡ್ಕ ಮೊಗ್ರು, ಶ್ರೀ ರಾಮ ಶಿಶುಮಂದಿರದ 5 ನೇ ವರ್ಷದ ಶ್ರೀ ಕೃಷ್ಣೋತ್ಸವ. |ಕಾಶಿ ಶೆಟ್ಟಿ ನವಶಕ್ತಿ ಗುರುವಾಯನಕೆರೆ ಇವರ ಸ್ಮರಣಾರ್ಥ ಕಾಶಿ ಶೆಟ್ಟಿ ವಿದ್ಯಾ ಮಂದಿರ, ಹಾಗೂ ಶಾಸಕ ಹರೀಶ್ ಪೂಂಜಾರವರ ನೆರವಿನ ಅಡುಗೆ ಕೋಣೆ ಉದ್ಘಾಟನಾ ಕಾರ್ಯಕ್ರಮ |ಮಕ್ಕಳ ಶ್ರೀಕೃಷ್ಣ ಮತ್ತು ರಾಧೆಯರ ಸ್ಪರ್ಧೆ, ಮೊಸರು ಕುಡಿಕೆ, ಆಟೋಟ ಸ್ಪರ್ಧೆ

[t4b-ticker]
error: Content is protected !!