T20 World Cup: 12 ತಂಡಗಳು, 33 ಪಂದ್ಯಗಳು; ಮಹಿಳಾ ಟಿ20 ವಿಶ್ವಕಪ್ ವೇಳಾಪಟ್ಟಿ ಪ್ರಕಟ

Picture of Savistara

Savistara

Bureau Report

ಭಾರತ ಹಾಗೂ ಶ್ರೀಲಂಕಾದಲ್ಲಿ ನಡೆಯುತ್ತಿರುವ 2026 ರ ಪುರುಷರ ಟಿ20 ವಿಶ್ವಕಪ್​ನ ಸೂಪರ್ 8 ಸುತ್ತು ರೋಚಕಘಟ್ಟ ತಲುಪಿದೆ. ಸೆಮಿಫೈನಲ್‌ಗೇರಲು 8 ತಂಡಗಳ ನಡುವೆ ಪೈಪೋಟಿ ಏರ್ಪಟ್ಟಿದೆ. ಈ ನಡುವೆ ಮುಂಬರುವ ಮಹಿಳಾ ಟಿ20 ವಿಶ್ವಕಪ್​ನ (Women’s T20 World Cup 2026) ಅಧಿಕೃತ ವೇಳಾಪಟ್ಟಿಯನ್ನು ಐಸಿಸಿ ಇಂದು ಬಿಡುಗಡೆ ಮಾಡಿದೆ.

ಅದರಂತೆ ಈ ಪಂದ್ಯಾವಳಿಯು ಜೂನ್ 12 ರಿಂದ ಆರಂಭವಾಗಿ ಜುಲೈ 5, 2026 ರವರೆಗೆ ಇಂಗ್ಲೆಂಡ್ ಮತ್ತು ವೇಲ್ಸ್‌ನಲ್ಲಿ ನಡೆಯಲಿದೆ. ಒಟ್ಟು 12 ತಂಡಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದು, ಸೆಮಿಫೈನಲ್‌ ಹಾಗೂ ಫೈನಲ್ ಸೇರಿದ್ದಂತೆ ಒಟ್ಟು 33 ಪಂದ್ಯಗಳು ನಡೆಯಲಿವೆ.

ಟಿ20 ವಿಶ್ವಕಪ್ ವೇಳಾಪಟ್ಟಿ ಪ್ರಕಟ

ಈ ಪಂದ್ಯಾವಳಿಯು ಎರಡು ಗುಂಪುಗಳನ್ನು ಒಳಗೊಂಡಿದ್ದು, ಪ್ರತಿಯೊಂದು ಗುಂಪು ಆರು ತಂಡಗಳನ್ನು ಒಳಗೊಂಡಿದೆ. ಗುಂಪು 1 ರಲ್ಲಿ ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಭಾರತ, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ನೆದರ್ಲ್ಯಾಂಡ್ಸ್ ಸೇರಿದ್ದರೆ, ಗುಂಪು 2 ರಲ್ಲಿ ವೆಸ್ಟ್ ಇಂಡೀಸ್, ಇಂಗ್ಲೆಂಡ್ (ಆತಿಥೇಯರು), ನ್ಯೂಜಿಲೆಂಡ್, ಶ್ರೀಲಂಕಾ, ಐರ್ಲೆಂಡ್ ಮತ್ತು ಸ್ಕಾಟ್ಲೆಂಡ್ ಸೇರಿವೆ. ಗುಂಪು ಹಂತದಿಂದ ಅಗ್ರ ಎರಡು ತಂಡಗಳು ಜೂನ್ 30 ಮತ್ತು ಜುಲೈ 2 ರಂದು ದಿ ಓವಲ್‌ನಲ್ಲಿ ನಡೆಯಲಿರುವ ಸೆಮಿಫೈನಲ್‌ಗೆ ಮುನ್ನಡೆಯುತ್ತವೆ. ಫೈನಲ್ ಜುಲೈ 5 ರಂದು ಲಾರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ.

ಟೀಂ ಇಂಡಿಯಾ ವೇಳಾಪಟ್ಟಿ

ಈ ಟೂರ್ನಿಯ ಮೊದಲ ಪಂದ್ಯ ಜೂನ್ 12 ರಂದು ಎಡ್ಜ್‌ಬಾಸ್ಟನ್‌ನಲ್ಲಿ ಇಂಗ್ಲೆಂಡ್ ಮತ್ತು ಶ್ರೀಲಂಕಾ ನಡುವೆ ನಡೆಯಲಿದೆ. ಭಾರತ ತನ್ನ ಮೊದಲ ಪಂದ್ಯವನ್ನು ಜೂನ್ 14 ರಂದು ಪಾಕಿಸ್ತಾನದ ವಿರುದ್ಧ ಎಡ್ಜ್‌ಬಾಸ್ಟನ್‌ನಲ್ಲಿ ಆಡಲಿದೆ. ಈ ಪಂದ್ಯವು ಭಾರತೀಯ ಕಾಲಮಾನ ರಾತ್ರಿ 8:00 ಗಂಟೆಗೆ ಆರಂಭವಾಗಲಿದೆ. ಉಳಿದ ಗುಂಪು ಹಂತದ ಪಂದ್ಯಗಳಲ್ಲಿ ಭಾರತ ತಂಡವು ನೆದರ್ಲ್ಯಾಂಡ್ಸ್ (ಜೂನ್ 17, ಹೆಡಿಂಗ್ಲೆ), ಬಾಂಗ್ಲಾದೇಶ (ಜೂನ್ 25, ಓಲ್ಡ್ ಟ್ರಾಫರ್ಡ್) ಮತ್ತು ಆಸ್ಟ್ರೇಲಿಯಾ (ಜೂನ್ 28, ಲಾರ್ಡ್ಸ್) ತಂಡವನ್ನು ಎದುರಿಸಲಿದೆ. ಈ ಎಲ್ಲಾ ಪಂದ್ಯಗಳು ಟೀಂ ಇಂಡಿಯಾಕ್ಕೆ ನಿರ್ಣಾಯಕವಾಗುತ್ತವೆ, ವಿಶೇಷವಾಗಿ ಪ್ರಶಸ್ತಿಗಾಗಿ ಪ್ರಬಲ ಸ್ಪರ್ಧಿಯಾಗಿರುವ ಲಾರ್ಡ್ಸ್‌ನಲ್ಲಿ ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ಧ ಆಡುವುದು.

ಮಹಿಳಾ ಟಿ20 ವಿಶ್ವಕಪ್‌ನ ಸಂಪೂರ್ಣ ವೇಳಾಪಟ್ಟಿ

News Updates

ನಿಮ್ಮಪ್ಪನಿಂದಲೇ ಆರ್‌ಎಸ್‌ಎಸ್‌ಗೆ ಏನು ಮಾಡೋಕೆ ಆಗಿಲ್ಲ, ನಿಮ್ಮಿಂದ ಆಗುತ್ತಾ? ಅಧಿಕಾರದಲ್ಲಿ ಮೆರೆದವರಿಗೆ ಬಂಗಾಳದ ಜನ್ನು ಅಟ್ಟಾಡಿಸಿ ಹೊಡೆಯುತ್ತಿದ್ದಾರೆ, ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಸಿಟಿ ರವಿ ವಾಗ್ದಾಳಿ

[t4b-ticker]
error: Content is protected !!