ನಮ್ಮ ಸಿಂಹಗಳು ಮತ್ತೆ ಘರ್ಜಿಸಲು ಬಂದಿವೆ ಎಂದು ಆರ್‌ಸಿಬಿಗೆ ಶುಭಕೋರಿದ ವಿಜಯ್ ಮಲ್ಯ

Picture of Savistara

Savistara

Bureau Report

ಬೆಂಗಳೂರು: ಐಪಿಎಲ್ 2026ರ ಅಂಗವಾಗಿ ಇಂದುಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ಉದ್ಘಾಟನಾ ಪಂದ್ಯಕ್ಕೆ ಸಿದ್ಧವಾಗಿದೆ.

19ನೇಯ ಆವೃತ್ತಿಯ ಮೊದಲ ಪಂದ್ಯದಲ್ಲಿ ರಜತ್ ಪಾಟೀದಾ ನಾಯಕತ್ವದಲ್ಲಿ ಆರ್‌ಸಿಬಿ ಮತ್ತು ಸನ್‌ರೈಸರ್ಸ್ ಹೈದರಾಬಾದ್ ಮುಖಾಮುಖಿಯಾಗಲಿವೆ.ಈ ಹಿನ್ನೆಲೆಯಲ್ಲಿ ಆರ್‌ಸಿಬಿಗೆ ಲಕ್ಷಾಂತರ ಅಭಿಮಾನಿಗಳು ಶುಭಕೋರುತ್ತಿದ್ದು, ಮೊದಲ ಪಂದ್ಯದಿಂದಲೇ ಗೆಲುವಿನ ನಾಗಾಲೋಟ ಮುಂದುವರೆಯಲಿ ಎಂದು ಆಶಿಸುತ್ತಿದ್ದಾರೆ.ಇನ್ನು, ಮೊದಲು ಆರ್‌ಸಿಬಿ ಮಾಲೀಕರಾಗಿದ್ದ, ಸದ್ಯ ವಂಚನೆ ಕೇಸ್‌ನಲ್ಲಿ ದೇಶಭ್ರಷ್ಟನಾಗಿ ಬ್ರಿಟನ್‌ನಲ್ಲಿರುವ ವಿಜಯ್ ಮಲ್ಯ ಅವರು ವಿಶೇಷವಾಗಿ ತಮ್ಮ ನೆಚ್ಚಿನ ತಂಡಕ್ಕೆ ಶುಭಕೋರಿದ್ದಾರೆ.

ತಮ್ಮ ಎಕ್ಸ್‌ ಖಾತೆಯಲ್ಲಿ ಟ್ವಿಟ್ ಮಾಡಿರುವ ವಿಜಯ್ ಮಲ್ಯ, ‘ಆರ್‌ಸಿಬಿ ಆಟಗಾರರನ್ನು ಬೆಂಗಳೂರು ಸಿಂಹಗಳು, ನಮ್ಮ ಸಿಂಹಗಳು’ ಎಂದು ಕೊಂಡಾಡಿದ್ದಾರೆ.’ನಮ್ಮ ಬೆಂಗಳೂರಿನ ಸಿಂಹಗಳು ಮತ್ತೆ ಘರ್ಜಿಸುವ ದಿನಗಳು ಬಂದಿವೆ, ನಮ್ಮ ಸಿಂಹಗಳು.., ಚಾಂಪಿಯನ್ಸ್‌ಗಳಿಗೆ ಶುಭವಾಗಲಿ.. ಧೈರ್ಯದಿಂದ ಆಟವಾಡಿ’ ಎಂದು ಕಂಗ್ಲಿಷ್‌ನಲ್ಲಿ (ಕನ್ನಡ-ಇಂಗ್ಲಿಷ್) ಬರೆದುಕೊಂಡು ಶುಭಕೋರಿದ್ದಾರೆ.’ನಾನು ಕೇವಲ ₹250 ಕೋಟಿಯಲ್ಲಿ ಆರ್‌ಸಿಬಿ ಫ್ರಾಂಚೈಸಿ ಆರಂಭಿಸಿದ್ದೆ. ಈಗ ನೋಡಿ ಅದು ₹16,706 ಸಾವಿರ ಕೋಟಿಗೆ ಮಾರಾಟವಾಗಿದೆ’ ಎಂದು ಈ ಮೊದಲು ತಮ್ಮ ವಿರೋಧಿಗಳಿಗೆ ಮಲ್ಯ ತಿರುಗೇಟು ನೀಡಿದ್ದರು.ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಬ್ರಿಟನ್ ಮೂಲದ ಡಿಯಾಜಿಯೊ ಅಂಗಸಂಸ್ಥೆಯಾದ ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್‌ನಿಂದ ಆದಿತ್ಯ ಬಿರ್ಲಾ ಸಮೂಹದ ಒಕ್ಕೂಟ ಇತ್ತೀಚೆಗೆ ಖರೀದಿಸಿದೆ.

[t4b-ticker]
error: Content is protected !!