ಕೇರಳಂ ಮುಖ್ಯಮಂತ್ರಿಯಾಗಿ ನಾಳೆ ವಿಡಿ ಸತೀಶನ್ ಪ್ರಮಾಣ ವಚನ | ನೂತನ 20 ಮಂದಿ ಸಚಿವರಲ್ಲಿ 13 ಮಂದಿ ಅಲ್ಪಸಂಖ್ಯಾತರು

Picture of Savistara

Savistara

Bureau Report

ಕೇರಳಎಂ ರಾಜ್ಯದ ಮುಖ್ಯಮಂತ್ರಿಯಾಗಿ ಕಾಂಗ್ರೆಸ್ ಪಕ್ಷದ ವಿ ಡಿ ಸತೀಶನ್ ಪ್ರಾಮಾಣ ವಚನ ಸ್ವೀಕರಿಸಲಿದ್ದು ಅವರ ಜೊತೆ 20 ಮಂದಿ ಸಂಪುಟ ಸೇರ್ಪಡೆಗೊಳ್ಳಲಿದ್ದಾರೆ ನೂತನ ಸಚಿವರಲ್ಲಿ ಕಾಂಗ್ರೆಸ್ ಪಕ್ಷದಿಂದ 11 ಮಂದಿ ಮುಸ್ಲಿಂ ಲೀಗ್ 5 ಮತ್ತು ಇತರೆ ಮಿತ್ರ ಪಕ್ಷಗಳಿಗೆ ನಾಲ್ಕು ಸ್ಥಾನ ನೀಡಲಾಗಿದೆ. ನೂತನ ಯುಡಿಎಫ್ ಸರ್ಕಾರದಲ್ಲಿ ಮುಖ್ಯಮಂತ್ರಿ ಸೇರಿ 21 ಸಚಿವರಲ್ಲಿ 13 ಮಂದಿ ಸಚಿವರು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಸಚಿವರ ವಿವರ ರಮೇಶ್ ಚೆನ್ನಿತ್ತಲ, ಪಿ.ಕೆ. ಕುಂಞಾಲಿಕುಟ್ಟಿ, ಸನ್ನಿ ಜೋಸೆಫ್‌, ಕೆ. ಮುರಳೀಧರನ್, ಮೋನ್ಸ್ ಜೋಸೆಫ್, ಶಿಬು ಬೇಬಿ ಜಾನ್, ಅನೂಪ್ ಜೇಕಬ್, ಸಿ.ಪಿ. ಜಾನ್, ಎ.ಪಿ. ಅನಿಲ್ ಕುಮಾರ್, ಎನ್. ಶಂಸುದ್ದೀನ್, ಪಿ.ಸಿ. ವಿಷ್ಣುನಾಥ್, ರೋಜಿ ಎಂ. ಜಾನ್, ಬಿಂದು ಕೃಷ್ಣ ಎಂ.ಲಿಜು, ಟಿ. ಸಿದ್ದೀಖ್, ಕೆ.ಎಂ. ಶಾಜಿ, ಪಿ.ಕೆ. ಬಷೀರ್, ವಿ.ಇ. ಅಬ್ದುಲ್ ಗಫೂರ್, ಕೆ.ಎ. ತುಳಸಿ, ಒ.ಜೆ. ಜನೀಶ್ ಸಚಿವರಾಗಲಿದ್ದಾರೆ.

ಹಿರಿಯ ಶಾಸಕ ತಿರುವಂಜೂರು ರಾಧಾಕೃಷ್ಣನ್ ಅವರನ್ನು ವಿಧಾನಸಭೆ ಸಭಾಪತಿ ಮತ್ತು ಶಾನಿಮೋಲ್ ಉಸ್ಮಾನ್ ಅವರನ್ನು ನೇಮಿಸಲಾಗಿದೆ. ಕಾಂಗ್ರೆಸ್ ಪಕ್ಷ ಮುಸ್ಲಿಂ ಲೀಗ್ ಪ್ರಮುಖರ ಮರ್ಜಿಗೆ ಒಳಗಾಗಿದ್ದು ಅವರನ್ನು ಸಂತುಷ್ಟಗೊಳಿಸಲು ಅಲ್ಪಸಂಖ್ಯಾತ ರಿಗೆ ಮನ್ನಣೆ ನೀಡಲಾಗಿದೆ ಯೆಂದು ಬಿಜೆಪಿ ಆರೋಪಿಸಿದೆ

News Updates

ಎಸ್‌ಐಆ‌ರ್ ವಿಚಾರದಲ್ಲಿ ಬಿಜೆಪಿ ಕಾರ್ಯಕರ್ತರ ಬೆದರಿಸಿದರೆ ಸುಮ್ಮನಿರಲ್ಲ: ಪೊಲೀಸರಿಗೆ ಸಂಸದ ಕ್ಯಾ. ಚೌಟ ಎಚ್ಚರಿಕೆ – ಕಾಂಗ್ರೆಸ್ ತನ್ನ ಆರೋಪಗಳಿಗೆ ಸೂಕ್ತ ಸಾಕ್ಷ್ಯಾಧಾರಗಳನ್ನು ಒದಗಿಸಲಿ ಅಕ್ರಮವಾಗಿ ಮತ ರದ್ದು -ಮಾಡಲಾದ ವ್ಯಕ್ತಿಯನ್ನು ತಂದು ಚುನಾವಣಾಧಿಕಾರಿ ಮುಂದೆ ನಿಲ್ಲಿಸಲಿ: ಸಂಸದ ಸವಾಲು

[t4b-ticker]
error: Content is protected !!