ಮುರಿನಕಟ್ಟೆ ತೆರವು ವಿವಾದ: ಭಟ್ಕಳದಲ್ಲಿ 3 ದಿನ ನಿಷೇಧಾಜ್ಞೆ

Picture of Savistara

Savistara

Bureau Report

ಕಾರವಾರ: ಭಟ್ಕಳ ನಗರದ ಜಾಗಟೆಬೈಲ್ ಸಮೀಪ ಮುರಿನಕಟ್ಟೆತೆರವು ನಡೆಸಿದ್ದನ್ನು ಖಂಡಿಸಿ ಬಿಜೆಪಿ, ಹಿಂದೂ ಜಾಗರಣ ವೇದಿಕೆ ಸೇರಿ ಹಲವು ಸಂಘಟನೆಗಳು ಪ್ರತಿಭಟನೆ ನಡೆಸಲು ಸಜ್ಜುಗೊಂಡಿವೆ. ಮುನ್ನೆಚ್ಚರಿಕೆ ಕ್ರಮವಾಗಿ ಮೇ 27ರ ವರೆಗೆ ಭಟ್ಕಳ ನಗರ, ಅದಕ್ಕೆ ಹೊಂದಿಕೊಂಡಿರುವ ಜಾಲಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ರಾಷ್ಟ್ರೀಯ ಹೆದ್ದಾರಿ ಅಂಚಿನಲ್ಲಿ ಹಿಂದೆ ಇದ್ದ ಮುರಿನಕಟ್ಟೆಯನ್ನು ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಭಾನುವಾರ ಪುನರ್‌ ನಿರ್ಮಿಸಿದ್ದರು. ಇದನ್ನು ರಾತ್ರಿ ವೇಳೆಗೆ ಮುಸ್ಲಿಂ ಯುವಕರ ಗುಂಪು ತೆರವುಗೊಳಿಸಿತ್ತು. ಅವರನ್ನು ತಡೆಯಲು ಯತ್ನಿಸಿದ ಪೊಲೀಸರನ್ನು ತಳ್ಳಿಕೊಂಡು ಗುಂಪು ಕಟ್ಟೆಯತ್ತ ನುಗ್ಗಿತ್ತು. ಈ ವೇಳೆ ಲಘು ಲಾಠಿ ಪ್ರಹಾರ ಕೂಡ ನಡೆಸಲಾಗಿದೆ.ಮುಸ್ಲಿಂ ಸಮುದಾಯದ ಹಲವರು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾರೆ. ಆದರೂ ಪೊಲೀಸರು ಯಾವುದೇ ಕ್ರಮ ಜರುಗಿಸಿಲ್ಲ ಎಂದು ಆರೋಪಿಸಿ ಬಿಜೆಪಿ ಮುಖಂಡರು, ಹಿಂದೂ ಜಾಗರಣ ವೇದಿಕೆ, ಇತರ ಸಂಘಟನೆಗಳ ಕಾರ್ಯಕರ್ತರು ಭಟ್ಕಳ ಶಹರ ಪೊಲೀಸ್ ಠಾಣೆ ಆವರಣದಲ್ಲಿ ತಡರಾತ್ರಿವರೆಗೂ ಪ್ರತಿಭಟನೆ ನಡೆಸಿದರು.

‘ಮುರಿನಕಟ್ಟೆ ಏಕಾಏಕಿ ನಿರ್ಮಾಣಗೊಂಡಿದ್ದಲ್ಲ. ಹಿಂದಿನಿಂದಲೂ ಇದ್ದ ಕಟ್ಟೆಯನ್ನು ಪುನಃ ನಿರ್ಮಿಸಲಾಗಿದೆ. ಆದರೆ, ಅದನ್ನು ತೆರವುಗೊಳಿಸಿದ ಕ್ರಮ ಅಕ್ಷಮ್ಯ. ಇದರ ವಿರುದ್ದ ತೀವೃ ಸ್ವರೂಪದ ಪ್ರತಿಭಟನೆ ನಡೆಸುತ್ತೇವೆ’ ಎಂದು ಬಿಜೆಪಿ ಮುಖಂಡ ಗೋವಿಂದ ನಾಯ್ಕ ಎಚ್ಚರಿಸಿದ್ದಾರೆ.

ಸದ್ಯ ಭಟ್ಕಳ ಪಟ್ಟಣದಾದ್ಯಂತ ಭಿಗಿ ಪೊಲೀಸ್ ಬಂದೋಬಸ್ತ್ ಹಾಕಲಾಗಿದೆ. 5ಕ್ಕಿಂತ ಹೆಚ್ಚು ಜನರು ಗುಂಪುಗೂಡದಂತೆ ಆದೇಶಿಸಲಾಗಿದೆ.

News Updates

ಎಸ್‌ಐಆ‌ರ್ ವಿಚಾರದಲ್ಲಿ ಬಿಜೆಪಿ ಕಾರ್ಯಕರ್ತರ ಬೆದರಿಸಿದರೆ ಸುಮ್ಮನಿರಲ್ಲ: ಪೊಲೀಸರಿಗೆ ಸಂಸದ ಕ್ಯಾ. ಚೌಟ ಎಚ್ಚರಿಕೆ – ಕಾಂಗ್ರೆಸ್ ತನ್ನ ಆರೋಪಗಳಿಗೆ ಸೂಕ್ತ ಸಾಕ್ಷ್ಯಾಧಾರಗಳನ್ನು ಒದಗಿಸಲಿ ಅಕ್ರಮವಾಗಿ ಮತ ರದ್ದು -ಮಾಡಲಾದ ವ್ಯಕ್ತಿಯನ್ನು ತಂದು ಚುನಾವಣಾಧಿಕಾರಿ ಮುಂದೆ ನಿಲ್ಲಿಸಲಿ: ಸಂಸದ ಸವಾಲು

[t4b-ticker]
error: Content is protected !!