ಸುಳ್ಯ ಜ್ಯೋತಿ ವೃತ್ತ ಬಳಿ ರಸ್ತೆ ಹೊಂಡ ಗುಂಡಿ,ವಾಹನ ಸವಾರರ ಪರದಾಟ | ತಕ್ಷಣ ಸರಿಪಡಿಸಲು ಹೆದ್ದಾರಿ ಇಲಾಖೆಗೆ ಸಾರ್ವಜನಿಕರ ಮನವಿ

Picture of Savistara

Savistara

Bureau Report

ಸುಳ್ಯ : ರಾಷ್ಟ್ರೀಯ ಹೆದ್ದಾರಿ 275 ಮಾಣಿ -ಸಂಪಾಜೆ ಯ ಸುಳ್ಯದ ಜ್ಯೋತಿ ವೃತ್ತ ಬಳಿ ಮತ್ತೆ ಹೊಂಡ ಬಿದ್ದಿದ್ದು ವಾಹನ ಸವಾರರು ಚಲಾವಣೆ ಸಂದರ್ಭದಲ್ಲಿ ಪರದಾಡುವ ಸ್ಥಿತಿ ಉಂಟಾಗಿದ್ದು,ಪಕ್ಕದ ಸರ್ಕಾರಿ ಶಾಲೆ,ಶಾರದ ಸಂಸ್ಥೆ ಮತ್ತು ಸೈಂಟ್ ಜೋಸೆಫ್ ಶಾಲೆಯ ಮಕ್ಕಳು ಈ ರಸ್ತೆ ದಾಟಿ ಮುಂದೆ ಸಾಗಬೇಕಾಗುತ್ತದೆ ಅದಲ್ಲದೆ ದಿನಪ್ರಂತಿ ಸಾವಿರಾರು ವಾಹನಗಳು ಈ ರಸ್ತೆಯಲ್ಲಿ ಸಂಚಾರಿಸುತ್ತಿರುವುದರಿಂದ ಸಾರ್ವಜನಿಕರಿಗೂ ರಸ್ತೆ ದಾಟಲು ಸಮಸ್ಯೆಯಾಗುತ್ತಿದೆ ಈ ಹಿಂದೆ ಕುಡಿಯುವ ನೀರು ಪೂರೈಕೆ ಪೈಪ್ ಅಳವಡಿಕೆ ಸಂದರ್ಭದಲ್ಲಿ ರಸ್ತೆಯನ್ನು ಅಗೆಯಲಾಗಿತ್ತು ಇದೀಗ ಮತ್ತೆ ಹೊಂಡ ಬಿದ್ದು ಸಮಸ್ಯೆ ಸೃಷ್ಟಿಯಾಗಿದೆ ತಕ್ಷಣ ಈ ಬಗ್ಗೆ ಹೊಂಡ ದುರಸ್ಥಿ ಪಡಿಸಿ ಮುಂದೆ ಅವಘಡ ಸಂಭವಿಸುವ ಮೊದಲು ಪರಿಹರಿಸುವಂತೆ ಹೆದ್ದಾರಿ ಮತ್ತು ಲೋಕೋಪಯೋಗಿ ಇಲಾಖೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

[t4b-ticker]
error: Content is protected !!