ಸವಿಸ್ತಾರ ನ್ಯೂಸ್ ಇಂಫ್ಯಾಕ್ಟ್ | ಹೆದ್ದಾರಿ ಇಲಾಖೆ ಅಧಿಕಾರಿಗಳಿಗೆ ಸಂಸದ ಕ್ಯಾ ಚೌಟರ ಸೂಚನೆ ಹಿನ್ನಲೆ | ಜ್ಯೋತಿ ಸರ್ಕಲ್ ಬಳಿ ರಸ್ತೆ ಹೊಂಡಕ್ಕೆ ಕೊನೆಗೂ ಮುಕ್ತಿ

Picture of Savistara

Savistara

Bureau Report

ಸುಳ್ಯ : ರಾಷ್ಟ್ರೀಯ ಹೆದ್ದಾರಿ 275 ಮಾಣಿ -ಸಂಪಾಜೆ ಯ ಸುಳ್ಯದ ಜ್ಯೋತಿ ವೃತ್ತ ಬಳಿ ರಸ್ತೆಯಲ್ಲಿ ಹೊಂಡ ಬಿದ್ದು ವಾಹನ ಸವಾರರು ಪರದಾಡುವ ಸ್ಥಿತಿ ಉಂಟಾಗಿತ್ತು ಅಲ್ಲದೆ ಮೂರು ರಸ್ತೆ ಸೇರುವ ಕಾರಣ ಅಪಘಾತಗಳು ಉಂಟಾಗುತ್ತಿತ್ತು ಸರ್ಕಾರಿ ಶಾಲೆ,ಶಾರದ ಸಂಸ್ಥೆ ಮತ್ತು ಸೈಂಟ್ ಜೋಸೆಫ್ ಶಾಲೆಯ ಮಕ್ಕಳು ಈ ರಸ್ತೆ ದಾಟುವ ಸಂದರ್ಭದಲ್ಲಿ ಹೊಂಡ ಬಿದ್ದು ಕೆಸರಿನಿಂದ ತೊಂದರೆ ಒಳಗಾಗುತ್ತಿದ್ದರು ಈ ಬಗ್ಗೆ ಸವಿಸ್ತಾರ ನ್ಯೂಸ್ ವರದಿ ಪ್ರಕಟ ಮಾಡಿತ್ತು ತಕ್ಷಣ ಸಂಸದ ಕ್ಯಾ ಬ್ರಿಜೇಶ್ ಚೌಟ ಹೆದ್ದಾರಿ ಇಲಾಖೆಗೆ ಸೂಚಿಸಿ ಹೊಂಡ ಮುಚ್ಚಿ ರಸ್ತೆ ದುರಸ್ಥಿಗೊಳಿಸುವಂತೆ ತಿಳಿಸಿದ್ದರು ಇದೀಗ ಹೊಂಡ ಮುಚ್ಚಿ ರಸ್ತೆ ಸಂಚಾರ ಸುವ್ಯಸ್ಥಿತಗೊಳಿಸಿದ್ದು ಸಾರ್ವಜನಿಕರು,ವಾಹನ ಸವಾರರು ಸಂಸದರ ಕಾರ್ಯವನ್ನು ಶ್ಲಾಘಿಸಿದ್ದಾರೆ.

[t4b-ticker]
error: Content is protected !!