ವಿಮಲ್‌ ಇಲೈಚಿ ಜಾಹೀರಾತು: ಶಾರುಖ್, ಅಜಯ್, ಟೈಗರ್ ಶ್ರಾಫ್‌ಗೆ ಎಫ್‌ಡಿಎ ನೋಟಿಸ್‌

Picture of Savistara

Savistara

Bureau Report

ಮುಂಬೈ: ‘ವಿಮಲ್ ಇಲೈಚಿ’ ಜಾಹೀರಾತಿನಲ್ಲಿ ಕಾಣಿಸಿಕೊಂಡಿರುವ ಬಾಲಿವುಡ್ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಹಾಗೂ ಟೈಗರ್ ಶ್ರಾಫ್ ಅವರಿಗೆ ಮಹಾರಾಷ್ಟ್ರದ ಆಹಾರ ಮತ್ತು ಔಷಧ ಪ್ರಾಧಿಕಾರ(ಎಫ್‌ಡಿಎ) ಶೋಕಾಸ್ ನೋಟಿಸ್‌ ನೀಡಿದೆ.

‘ನಿಷೇಧಿತ ಪಾನ್ ಮಸಾಲ ಮತ್ತು ತಂಬಾಕು ಸಂಬಂಧಿತ ಉತ್ಪನ್ನಗಳ ಕುರಿತು ಈ ಜಾಹೀರಾತು ಮೂಲಕ ‘ಪರೋಕ್ಷ’ ಅಥವಾ ‘ಪರ್ಯಾಯ’ ರೂಪದಲ್ಲಿ ಪ್ರಚಾರ ಮಾಡಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ’ ಎಂದು ಎಫ್‌ಡಿಎನ ಗ್ರೇಟರ್ ಮುಂಬೈ ವಿಭಾಗವು ನೀಡಿರುವ ನೋಟಿಸ್‌ನಲ್ಲಿ ಹೇಳಲಾಗಿದೆ.ಇದೇ 11ರಂದು ನೋಟಿಸ್‌ ನೀಡಿರುವ ಎಫ್‌ಡಿಎ, 15 ದಿನಗಳ ಒಳಗಾಗಿ ಪ್ರತಿಕ್ರಿಯೆ ನೀಡುವಂತೆ ಸೂಚಿಸಿದೆ.’ಈ ನೋಟಿಸ್‌ ಕೊನೆಯ ಎಚ್ಚರಿಕೆಯಾಗಿದೆ. ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ-2026ರ ಅವಕಾಶಗಳು ಹಾಗೂ ನಿಯಮಗಳಿಗೆ ವಿರುದ್ಧವಾಗಿ ರೂಪಿಸಲಾಗಿರುವ ಈ ಜಾಹೀರಾತು, ಜನರ ದಾರಿ ತಪ್ಪಿಸುವಂತಿದೆ. ನಿಗದಿತ ಗಡುವಿನ ಒಳಗೆ ಪ್ರತಿಕ್ರಿಯೆ ನೀಡದಿದ್ದಲ್ಲಿ ಕ್ರಮ ಕೈಗೊಳ್ಳಲಾಗುವುದು’ ಎಂದೂ ನೋಟಿಸ್‌ನಲ್ಲಿ ವಿವರಿಸಲಾಗಿದೆ.

ವಿಮಲ್ ಪಾನ್‌ ಮಸಾಲ/ಇಲೈಚಿಗೆ ಸಂಬಂಧಿಸಿದ ಜಾಹೀರಾತಿನಲ್ಲಿ ಪಾಲ್ಗೊಳ್ಳುವುದು ಹಾಗೂ ಆ ಮೂಲಕ ಈ ಉತ್ಪನ್ನಗಳನ್ನು ದೃಢೀಕರಿಸುವುದನ್ನು ಕೂಡಲೇ ನಿಲ್ಲಿಸಬೇಕು. ಸಾಮಾಜಿಕ ಜಾಲತಾಣಗಳಲ್ಲಿ ತಾವು ಹೊಂದಿರುವ ಖಾತೆಗಳು, ವೆಬ್‌ಸೈಟ್‌ಗಳು ಹಾಗೂ ತಮ್ಮ ನಿಯಂತ್ರಣದಲ್ಲಿರುವ ಡಿಜಿಟಲ್ ವೇದಿಕೆಗಳಿಂದ ಈ ಉತ್ಪನ್ನ ಕುರಿತ ಮಾಹಿತಿ ತೆಗೆದುಹಾಕಬೇಕು ಎಂದೂ ಎಫ್‌ಡಿಎ ಸೂಚಿಸಿದೆ.

[t4b-ticker]
error: Content is protected !!