BWF ವಿಶ್ವ ಚಾಂಪಿಯನ್ಶಿಪ್ | ಕನ್ನಡಿಗ ಆಯುಷ್‌ಶೆಟ್ಟಿಗೆ ಐತಿಹಾಸಿಕ ಗೆಲುವು

Picture of Savistara

Savistara

Bureau Report

ಮೊದಲ ಸುತ್ತಿನಲ್ಲಿ ಹಾಲಿ ಚಾಂಪಿಯನ್ ಶಿ ಯುಗೆ ಆಘಾತಕಾರಿ ಸೋಲು

ಹೊಸದಿಲ್ಲಿ, ಆ.17: ಬಿಡಬ್ಲ್ಯುಎಫ್ ವಿಶ್ವ ಚಾಂಪಿಯನ್ಶಿಪ್‌ನ ಪುರುಷರ ಸಿಂಗಲ್ಸ್‌ನ ಮೊದಲ ಸುತ್ತಿನ ಪಂದ್ಯದಲ್ಲಿ ವಿಶ್ವದ ನಂ.1 ಆಟಗಾರ ಹಾಗೂ ಹಾಲಿ ಚಾಂಪಿಯನ್ ಶಿ ಯು ಖಿ ಅವರನ್ನು ಮಣಿಸಿ ಶಾಕ್ ನೀಡಿದ ಭಾರತದ ಯುವ ಆಟಗಾರಆಯುಷ್ ಶೆಟ್ಟಿ ಇತಿಹಾಸ ನಿರ್ಮಿಸಿದ್ದಾರೆ.

ಸೋಮವಾರ ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ವಿಶ್ವ ಚಾಂಪಿಯನ್ಶಿಪ್‌ನಲ್ಲಿ ಚೊಚ್ಚಲ ಪಂದ್ಯವನ್ನಾಡಿದ ಆಯುಷ್ 73 ನಿಮಿಷಗಳ ಕಾಲ ನಡೆದ ಅಂತಿಮ-64ರ ಸುತ್ತಿನ ಹಣಾಹಣಿಯಲ್ಲಿ ಚೀನಾದ ಸ್ಟಾರ್ ಆಟಗಾರ ಶಿ ಯು ವಿರುದ್ಧ 21-14, 13-21, 21-19 ಗೇಮ್‌ಗಳ ಅಂತರದಿಂದ ಜಯಶಾಲಿಯಾದರು.

ಯೂ ಕಿ ವಿರುದ್ಧ ಆಡಿರುವ ನಾಲ್ಕು ಪಂದ್ಯಗಳಲ್ಲಿ ಇದೇ ಮೊದಲ ಬಾರಿ ಆಯುಷ್ ಗೆಲುವಿನ ನಗೆ ಬೀರಿದ್ದಾರೆ.ಮೊದಲ ಗೇಮ್ ಅನ್ನು 21-14 ಅಂತರದಿಂದ ಗೆದ್ದುಕೊಂಡ ಆಯುಷ್ ಉತ್ತಮ ಆರಂಭ ಪಡೆದರು. ಎರಡನೇ ಗೇಮ್ ಅನ್ನು 13-21 ಅಂತರದಿಂದ ಗೆದ್ದುಕೊಂಡ ಅಗ್ರ ಶ್ರೇಯಾಂಕದ ಶಿ ಯು ತಿರುಗೇಟು ನೀಡಿ ಪಂದ್ಯವನ್ನು ನಿರ್ಣಾಯಕ ಹಂತಕ್ಕೆ ಕೊಂಡೊಯ್ದರು.ಮೂರನೇ ಗೇಮ್ ಅನ್ನು 21-19 ಅಂತರದಿಂದ ರೋಚಕವಾಗಿ ಗೆದ್ದುಕೊಂಡಿರುವ ಕರ್ನಾಟಕದ ಕಾರ್ಕಳ ತಾಲೂಕಿನ ಸಾಣೂರಿನ ಯುವಕ ಆಯುಷ್ ಅಂತಿಮ-32ರ ಸುತ್ತಿಗೆ ಲಗ್ಗೆ ಇಟ್ಟಿದ್ದಾರೆ.ವಿಶ್ವದ ನಂ.22ನೇ ಆಟಗಾರ ಆಯುಷ್ ಮುಂದಿನ ಸುತ್ತಿನಲ್ಲಿ ಶ್ರೀಲಂಕಾದ ದುಮಿಂಡು ಅಭಯವಿಕ್ರಮ ಅಥವಾ ಪೆರುವಿನ ಅಡ್ರಿಯಾನೊ ವಿಯಾಲ್‌ ಅವರನ್ನು ಎದುರಿಸಲಿದ್ದಾರೆ.

News Updates

ಕೇಂದ್ರ ಸರ್ಕಾರದಿಂದ ಶಿವಮೊಗ್ಗ ನಗರ ಬೈಪಾಸ್ ಹಾಗೂ ನಗರ ವ್ಯಾಪ್ತಿಯ ಹೆದ್ದಾರಿ ಅಭಿವೃದ್ಧಿಗೆ 466.74 ಕೋಟಿ ರೂ. ಮಂಜೂರು; ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಕೃತಜ್ಞತೆ ಸಲ್ಲಿಸಿದ ಸಂಸದ ಬಿ.ವೈ. ರಾಘವೇಂದ್ರ

[t4b-ticker]
error: Content is protected !!