3ನೇ ಮಗು ಹೊಂದುವ ಸರ್ಕಾರಿ ಮಹಿಳಾ ಉದ್ಯೋಗಿಗಳಿಗೆ ಒಂದು ವರ್ಷ ಮಾತೃತ್ವ ರಜೆ

Picture of Savistara

Savistara

Bureau Report

ಚೆನ್ನೈ: ಮೂರನೇ ಮಗು ಹೊಂದುವ ಸರ್ಕಾರಿ ಮಹಿಳಾ ಉದ್ಯೋಗಿಗಳಿಗೆ ವೇತನ ಸಹಿತ ಒಂದು ವರ್ಷ ಮಾತೃತ್ವ ರಜೆ ನೀಡುವ ತಮಿಳುನಾಡು ಸರ್ಕಾರದ ನಿರ್ಧಾರ ಈಗ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

ಸರ್ಕಾರದ ಈ ನಿರ್ಧಾರಕ್ಕೆ ಜನಸಂಖ್ಯಾತಜ್ಞರು, ಕೆಲ ರಾಜಕಾರಣಿಗಳು ಕಳವಳ ವ್ಯಕ್ತಪಡಿಸಿದ್ದಾರೆ.’ವೇತನ ಸಹಿತ ಒಂದು ವರ್ಷ ಮಾತೃತ್ವ ರಜೆ ನೀಡುವಂತಹ ನಿರ್ಧಾರಗಳ ಮೂಲಕ ಮೂರನೇ ಮಗು ಹೊಂದುವುದಕ್ಕೆ ಸರ್ಕಾರ ಪ್ರೋತ್ಸಾಹ ನೀಡುತ್ತಿದೆ. ಇಂತಹ ನಡೆಯು ಜನಸಂಖ್ಯಾ ಸ್ಪೋಟದೊಂದಿಗೆ ತಳುಕು ಹಾಕಿಕೊಂಡಿರುವ ಸಾಮಾಜಿಕ-ಆರ್ಥಿಕ ಸಮಸ್ಯೆಗಳನ್ನು ಕಡೆಗಣಿಸುತ್ತದೆ’ ಎಂದು ಪಾಪ್ಯುಲೇಷನ್ ಫೌಂಡೇಷನ್ ಆಫ್ ಇಂಡಿಯಾ(ಪಿಎಫ್‌ಐ) ಕಾರ್ಯಕಾರಿ ನಿರ್ದೇಶಕಿ ಪೂನಂ ಮುತ್ತೇಜಾ ಹೇಳಿದ್ದಾರೆ.’ಒಟ್ಟು ಫಲವಂತಿಕೆ ದರದಲ್ಲಿ ಕುಸಿತವಾಗಿರುವುದು, ವಯೋವೃದ್ಧರ ಸಂಖ್ಯೆ ಹೆಚ್ಚುತ್ತಿರುವ ಕುರಿತ ತಮಿಳುನಾಡು ಸರ್ಕಾರದ ಕಳವಳ ನ್ಯಾಯಸಮ್ಮತ. ಆದರೆ, ಮೂರನೇ ಮಗು ಹೊಂದುವುದಕ್ಕೆ ಉತ್ತೇಜಿಸುವ ಇಂಥ ನಡೆ ಸರಿಯಾದ ನಿರ್ಧಾರವಲ್ಲ’ ಎಂದಿದ್ದಾರೆ.

ಮಾನವ ಸಂಪನ್ಮೂಲ ನಿರ್ವಹಣೆ ಸಚಿವ ಡಿ.ಶರತ್ ಕುಮಾರ್ ಅವರು ವಿಧಾನಸಭೆಯಲ್ಲಿ ಮಂಗಳವಾರ ಈ ಕುರಿತು ಘೋಷಿಸಿದ್ದಾರೆ.

News Updates

ಕೇಂದ್ರ ಸರ್ಕಾರದಿಂದ ಶಿವಮೊಗ್ಗ ನಗರ ಬೈಪಾಸ್ ಹಾಗೂ ನಗರ ವ್ಯಾಪ್ತಿಯ ಹೆದ್ದಾರಿ ಅಭಿವೃದ್ಧಿಗೆ 466.74 ಕೋಟಿ ರೂ. ಮಂಜೂರು; ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಕೃತಜ್ಞತೆ ಸಲ್ಲಿಸಿದ ಸಂಸದ ಬಿ.ವೈ. ರಾಘವೇಂದ್ರ

[t4b-ticker]
error: Content is protected !!