ಸದಾಶಿವ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಳ ಆರ್ಥಿಕ ಪಾರದರ್ಶಕತೆ ವಿಚಾರ | ವ್ಯವಸ್ಥಾಪನ ಸಮಿತಿ ಮತ್ತೊಬ್ಬ ಸದಸ್ಯೆ ರಾಜೀನಾಮೆ

Picture of Savistara

Savistara

Bureau Report

ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಳದ ಆರ್ಥಿಕ ಪಾರದರ್ಶಕತೆಗೆ ಧಕ್ಕೆ ಭಕ್ತರ ಭಾವನೆಗೆ ಬೆಲೆ ನೀಡಿ ಮತ್ತೊಬ್ಬ ಸಮಿತಿ ಸದಸ್ಯೆ ರಾಜೀನಾಮೆ! ಗೊಂದಲದ ಗೂಡಾದ ಸೀಮೆ ದೇವಾಲಯದ ಆಡಳಿತ ಮಂಡಳಿಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಾಲಯದ ಆಡಳಿತ ವ್ಯವಸ್ಥೆ ಮತ್ತು ಆರ್ಥಿಕ ಪಾರದರ್ಶಕತೆಯ ಕೊರತೆಯಿಂದ ಬೇಸತ್ತ ಸೀಮೆ ಭಕ್ತಾದಿಗಳು ಇತ್ತೀಚೆಗೆ ದೇವಾಲಯದ ಸಭಾಭವನದಲ್ಲಿ ಬೃಹತ್ ಸಭೆಯನ್ನು ನಡೆಸಿದ್ದರು. ಈ ಸಭೆಯಲ್ಲಿ ಭಕ್ತರು ಕೇಳಿದ ನೇರ ಹಾಗೂ ನ್ಯಾಯಯುತ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡಲಾಗದೆ ಸಮಿತಿಯ ಅಧ್ಯಕ್ಷರು ತೀವ್ರ ಮುಜುಗರಕ್ಕೀಡಾಗಿದ್ದರು.ಆಡಳಿತ ಮಂಡಳಿಯ ಈ ಏಕಪಕ್ಷೀಯ ನಿರ್ಧಾರಗಳು ಮತ್ತು ಪಾರದರ್ಶಕತೆಯಿಲ್ಲದ ನಡವಳಿಕೆಯಿಂದಾಗಿ ಸೀಮೆ ಭಕ್ತರ ಪವಿತ್ರ ಭಾವನೆಗಳಿಗೆ ತೀವ್ರ ಆಘಾತವಾಗಿದೆ ಎಂಬುದನ್ನು ಮನಗಂಡ ಸಮಿತಿಯ ಸದಸ್ಯೆಯಾದ ಶ್ರೀಮತಿ ಪವಿತ್ರ ಮಲ್ಲೆಟ್ಟಿ (ಕುದ್ವ) ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.ಈ ಕುರಿತು ಮಾಧ್ಯಮಗಳು ಅವರನ್ನು ಸಂಪರ್ಕಿಸಿದಾಗ, ದೇವಾಲಯದ ಮೇಲಿರುವ ನಿಷ್ಠೆಯನ್ನುವ್ಯಕ್ತಪಡಿಸಿದ ಅವರು “ದೇವಾಲಯ ಎನ್ನುವುದು ಸಮಸ್ತ ಹಿಂದೂ ಸಮಾಜದ ಪವಿತ್ರ ಅಸ್ತಿ,ಹಾಗೂಭಕ್ತಿಯ ಕೇಂದ್ರ.ಇಂತಹ ಶ್ರದ್ಧಾಕೇಂದ್ರದ ಪಾವಿತ್ರ್ಯತೆಗೆ ಧಕ್ಕೆ ಬಂದಾಗ ಹುದ್ದೆಯಲ್ಲಿದ್ದು ಮೌನವಾಗಿರುವುದು ಸರಿಯಲ್ಲ ವೆಂದು ಹಾಗೂ ಸಾವಿರ ಸೀಮೆಯ ಭಕ್ತರ ನಿರೀಕ್ಷೆ ಮತ್ತು ಪಾರದರ್ಶಕತೆ ಧಕ್ಕೆಯಾದ ಹಿನ್ನಲೆಯಲ್ಲಿ ನಾನು ದೇವಸ್ಥಾನದ ವ್ಯವಸ್ಥಾಪನಸಮಿತಿ ಸದಸ್ಯತ್ವಕ್ಕೆ ರಾಜೀನಾಮೆ ನೀಡಿರುತ್ತೇನೆಂದು ತಿಳಿಸಿದ್ದಾರೆ “ದೇವಾಲಯಗಳು ಕೇವಲ ಕಲ್ಲು-ಮಣ್ಣಿನ ಕಟ್ಟಡಗಳಲ್ಲ, ಅವು ಸಾವಿರಾರು ಭಕ್ತರ ನಂಬಿಕೆ, ತ್ಯಾಗ ಮತ್ತು ಭಕ್ತಿಯ ಸಂಕೇತ. ಆಡಳಿತ ಮಂಡಳಿಯ ಧೋರಣೆಯಿಂದಾಗಿ ಇಂದು ಸೀಮೆ ದೇವಾಲಯದ ಆಡಳಿತ ವ್ಯವಸ್ಥೆ ಸಂಪೂರ್ಣ ಗೊಂದಲದ ಗೂಡಾಗಿರುವುದು ನಿಜಕ್ಕೂ ವಿಷಾದಕರ,ಪವಿತ್ರ ಕ್ಷೇತ್ರವೊಂದರ ಆರ್ಥಿಕ ಪಾರದರ್ಶಕತೆ ಮತ್ತು ಭಕ್ತರ ನಂಬಿಕೆಯನ್ನು ಉಳಿಸುವ ಕಾರ್ಯವಾಗಬೇಕಿದೆ ಇನ್ನಾದರೂ ಆಡಳಿತ ಮಂಡಳಿಯು ಜಾಗೃತಗೊಂಡು, ಭಕ್ತರ ಭಾವನೆಗಳಿಗೆ ಗೌರವ ನೀಡಿ, ಧಾರ್ಮಿಕ ಕ್ಷೇತ್ರದ ಪಾವಿತ್ರ್ಯತೆಯನ್ನು ಎತ್ತಿಹಿಡಿಯುವ ನಿಟ್ಟಿನಲ್ಲಿ ಪಾರದರ್ಶಕ ಆಡಳಿತಕ್ಕೆ ಮುಂದಾಗಿ ಭಕ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕಾರ್ಯವಾಗಲೆಂದು ಭಕ್ತರುಅಭಿಪ್ರಾಯಪಟ್ಟಿದ್ದಾರೆ ಇಲ್ಲವಾದಲ್ಲಿ, ಭಕ್ತರ ಜನಾಕ್ರೋಶ ಮುಂಬರುವ ದಿನಗಳಲ್ಲಿ ಮತ್ತಷ್ಟು ತೀವ್ರಗೊಳ್ಳುವುದರಲ್ಲಿ ಸಂಶಯವಿಲ್ಲ.

[t4b-ticker]
error: Content is protected !!