ಮಣಿಪಾಲ: ನಕಲಿ ಕ್ಯೂಆರ್ ಕೋಡ್ ಬಳಸಿ 12 ಲಕ್ಷ ರೂ. ವಂಚನೆ; ಆರು ಸಿಬ್ಬಂದಿ ಸೆರೆ

Picture of Savistara

Savistara

Bureau Report

ಉಡುಪಿ: ಮಣಿಪಾಲದ ಎಂಐಟಿ ಕ್ಯಾಂಪಸ್‌ನಲ್ಲಿ ಓಡಾಡುವ ಬ್ಯಾಟರಿ ಚಾಲಿತ ವಾಹನಗಳ ಪ್ರಯಾಣಿಕರಿಂದ ನಕಲಿ ಕ್ಯೂಆರ್ ಕೋಡ್ ಮೂಲಕ ಹಣ ಸಂಗ್ರಹಿಸಿ, ಕಂಪನಿಗೆ ಬರೋಬ್ಬರಿ 12 ಲಕ್ಷ ರೂಪಾಯಿ ವಂಚಿಸಿದ ಆರು ಮಂದಿಯನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ.ಎಂಐಟಿ ಕ್ಯಾಂಪಸ್‌ನೊಳಗೆ ವಿದ್ಯಾರ್ಥಿಗಳು ಮತ್ತು ಪೋಷಕರ ಓಡಾಟದ ಅನುಕೂಲಕ್ಕಾಗಿ ‘ಇಂಡಿಯಾಂಟಾ ಇ-ಮೊಬಿಲಿಟಿ’ (Indeanta E-Mobility) ಎಂಬ ಕಂಪನಿಯು ಬ್ಯಾಟರಿ ವಾಹನಗಳ ಸೇವೆಯನ್ನು ಒದಗಿಸುತ್ತಿದೆ. ಇದೇ ಕಂಪನಿಯಲ್ಲಿವಾಹನಗಳ ಸೇವೆಯನ್ನು ಒದಗಿಸುತ್ತಿದೆ. ಇದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಆರೋಪಿಗಳು, ಕಳೆದ ಏಪ್ರಿಲ್ 10ರಿಂದಲೇ ಈ ಅಕ್ರಮಕ್ಕೆ ಇಳಿದಿದ್ದರು.

ಪ್ರಯಾಣಿಕರಿಂದ ಸಂಗ್ರಹಿಸಬೇಕಿದ್ದ ಶುಲ್ಕವನ್ನು ಕಂಪನಿಯ ಅಧಿಕೃತ ಖಾತೆಗೆ ಜಮೆ ಮಾಡುವ ಬದಲು, ತಾವೇ ಸೃಷ್ಟಿಸಿದ ನಕಲಿ ಮರ್ಚೆಂಟ್ ಕ್ಯೂಆರ್ ಕೋಡ್ ಅನ್ನು ಪ್ರಯಾಣಿಕರಿಗೆ ಸ್ಕ್ಯಾನ್ ಮಾಡಲು ನೀಡುತ್ತಿದ್ದರು.ಈ ನಕಲಿ ಕ್ಯೂಆರ್ ಕೋಡ್ ಮೂಲಕ ಸಂಗ್ರಹವಾದ ಸುಮಾರು 12 ಲಕ್ಷ ರೂಪಾಯಿ ಹಣವು, ಆರೋಪಿಗಳಲ್ಲೊಬ್ಬನಾದ ಮುತ್ತಣ್ಣ ಅಡಿನವರ್‌ನ ಪತ್ನಿ ಐಶ್ವರ್ಯ ಎಂಬುವವರ ಬ್ಯಾಂಕ್ ಖಾತೆಗೆ ನೇರವಾಗಿ ಜಮೆಯಾಗುತ್ತಿತ್ತು. ನಂತರ ಆ ಹಣವನ್ನು ಆರೋಪಿಗಳು ತಮ್ಮೊಳಗೆ ಹಂಚಿಕೊಳ್ಳುತ್ತಿದ್ದರು. ಲೆಕ್ಕಪರಿಶೋಧನೆ ವೇಳೆ ಈ ಬಹುದೊಡ್ಡ ವಂಚನೆ ಬೆಳಕಿಗೆ ಬಂದಿದ್ದು, ಕೂಡಲೇ ಕಂಪನಿಯ ಮಾನವ ಸಂಪನ್ಮೂಲ ವ್ಯವಸ್ಥಾಪಕರು ಮಣಿಪಾಲ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆಗಿಳಿದ ಮಣಿಪಾಲ ಠಾಣೆಯ ಪಿಎಸ್‌ಐ ಶಂಭುಲಿಂಗಯ್ಯ ಎಂ. ನೇತೃತ್ವದ ತಂಡ, ಅಕ್ಟೋಬರ್ 2ರಂದು ಎಲ್ಲಾ ಆರು ಮಂದಿಯನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದೆ.

ಬಂಧಿತರನ್ನು ಸಿದ್ಧಮೂರ್ತಿ ಜಿ. (29), ಶಿವರಾಜ್ ನಾಯ್ಕು (30), ಸುದೀಪ್ (30), ಜಿತೇಶ್ ಕಾಂಚನ್ (29), ಮುತ್ತಣ್ಣ ಅಡಿನವರ್ (32) ಹಾಗೂ ಎಂ.ಬಿ. ಅವಿನಾಶ್ (24) ಎಂದು ಗುರುತಿಸಲಾಗಿದೆ.ಈ ಸಂಬಂಧ ಮಣಿಪಾಲ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಕಾಯ್ದೆಯ ವಿವಿಧ ಸೆಕ್ಷನ್‌ಗಳಡಿ (316, 318 ಹಾಗೂ 3(5)) ಪ್ರಕರಣ ದಾಖಲಾಗಿದೆ. ಸದ್ಯ ಬಂಧಿತರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ವಂಚನೆಯ ಜಾಲದಲ್ಲಿ ಬೇರೆ ಯಾರಾದರೂ ಶಾಮೀಲಾಗಿದ್ದಾರೆಯೇ ಎಂಬುದನ್ನು ಪತ್ತೆಹಚ್ಚಲು ಹೆಚ್ಚಿನ ವಿಚಾರಣೆಗಾಗಿ ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

News Updates

ಕೇಂದ್ರ ಸರ್ಕಾರದಿಂದ ಶಿವಮೊಗ್ಗ ನಗರ ಬೈಪಾಸ್ ಹಾಗೂ ನಗರ ವ್ಯಾಪ್ತಿಯ ಹೆದ್ದಾರಿ ಅಭಿವೃದ್ಧಿಗೆ 466.74 ಕೋಟಿ ರೂ. ಮಂಜೂರು; ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಕೃತಜ್ಞತೆ ಸಲ್ಲಿಸಿದ ಸಂಸದ ಬಿ.ವೈ. ರಾಘವೇಂದ್ರ

[t4b-ticker]
error: Content is protected !!