ಮಂಗಳೂರು: ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ಪಂಪ್ ವೆಲ್ ಗೆ ಸಾಮಾಜಿಕ ಜಾಲತಾಣದಲ್ಲಿ ಜೀವ ಬೆದರಿಕೆ ಹಾಕಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕದ್ರಿ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ.ಸುದ್ದಿವಾಹಿನಿಯೊಂದರ ಫೇಸ್ ಬುಕ್ ಖಾತೆಯಲ್ಲಿದ್ದ ಸುದ್ದಿಯೊಂದಕ್ಕೆ ‘ಸಾಜೋ ಕಾಂಟ್’ ಎನ್ನುವ ನಕಲಿ ಖಾತೆಯೊಂದರ ಮೂಲಕ ‘ನೆಕ್ಸ್ ಟಾರ್ಗೆಟ್ ಶರಣ್ ಪಂಪ್ ವೆಲ್ ಬಿ ರೆಡಿ ಟುಡೈ’ ಎಂದು ಕಮೆಂಟ್ ಹಾಕಲಾಗಿದೆ. ಇದರ ವಿರುದ್ಧ ಶರಣ್ ಪಂಪ್ ವೆಲ್ ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.ರಿಯಾಜ್ ಕಡಂಬು ದೂರು: ಎಫ್ ಐಆರ್ಸಾಮಾಜಿಕ ಜಾಲತಾಣದಲ್ಲಿ ಎಸ್ ಡಿಪಿಐ ಮುಖಂಡ ರಿಯಾಜ್ ಕಡಂಬು ಗೆ ಕೊಲೆ ಬೆದರಿಕೆ ಹಾಕಿದ ಕೆ.ಆರ್.ರಾಕೇಶ್ ಎಂಬಾತನ ವಿರುದ್ಧ ಪಾಂಡೇಶ್ವರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಯು ಟ್ಯೂಬ್ ನಲ್ಲಿ ಸುಹಾಸ್ ಶೆಟ್ಟಿ ಕುರಿತ ಸುದ್ದಿ ಪ್ರಸಾರ ಆಗುತ್ತಿದ್ದ ವೇಳೆ ‘ನೆಕ್ಟ್ ಈಸ್ ರಿಯಾಜ್ ಕಡಂಬು’ ಹಿಟ್ ಲಿಸ್ಟ್’ ಎಂದು ಪೋಸ್ಟ್ ಕಮೆಂಟ್ ಮಾಡಿದ್ದ. ಈ ಬಗ್ಗೆ ರಿಯಾಜ್ ಕಡಂಬು ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.
ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ ವೆಲ್ ಗೆ ಜೀವ ಬೆದರಿಕೆ… ಎಫ್ ಐಆರ್ ದಾಖಲು
Savistara
Bureau Report
[t4b-ticker]













































