ಕದನ ವಿರಾಮ ಘೋಷಣೆ: ಸಾಮಾಜಿಕ ತಾಣಗಳಲ್ಲಿ ಪರ-ವಿರೋಧ ಜೋರು

Picture of Savistara

Savistara

Bureau Report

ಮೋದಿ ಮಾಡಿದ್ದು ತಪ್ಪು ಎಂದ ಕೆಲವರು, ಟ್ರಂಪ್ ಯಾರು ವಿರಾಮ ಘೋಷಿಸಲಿಕ್ಕೆ?: ಹಲವರ ಪ್ರಶ್ನೆ, 12ರ ಭಾರತ-ಪಾಕ್ ಮಾತುಕತೆವರೆಗೆ ಕಾಯೋಣ: ಕೆಲವರ ಅಂಬೋಣ

ಬೆಂಗಳೂರು: ಭಾರತ-ಪಾಕಿಸ್ತಾನಗಳೆರಡೂ ಕದನವಿರಾಮಕ್ಕೆ ಒಪ್ಪಿಗೆ ಸೂಚಿಸಿರುವಂತೆಯೇ ಸಾಮಾಜಿಕ ತಾಣಗಳಲ್ಲಿ ಪರ-ವಿರೋಧ ಮಾತುಕತೆಗಳೂ ತೀವ್ರವಾಗಿವೆ. ಕೆಲವರು ತಮ್ಮದೇ ರೀತಿಯ ಭಿನ್ನ ಅಭಿಪ್ರಾಯಗಳನ್ನೂ ವ್ಯಕ್ತಪಡಿಸಿದ್ದಾರೆ. ಕೆಲವು ಅಭಿಪ್ರಾಯ, ಚರ್ಚೆಗಳನ್ನು ಈ ಕೆಳಗೆ ನೀಡಲಾಗಿದೆ.ಕದನ ವಿರಾಮ ಘೋಷಣೆ ಮೋದಿ ಮಾಡಿದ ತಪ್ಪು ಎಂದು ಒಬ್ಬರು ಹೇಳಿದ್ದಾರೆ. ಇನ್ನೊಬ್ಬರು ಮೇ 12ಕ್ಕೆ ಪಾಕ್ ಜೊತೆಗೆ ಮಾತುಕತೆ ಇದೆ. ಅಲ್ಲಿ ಭಾರತ ಕಠಿಣ ಷರತ್ತು ಹಾಕಲಿದೆ. ಇಬ್ಬರ ನಡುವೆ ಒಪ್ಪಂದವಾಗದೇ ಹೋದರೆ ಕದನವಿರಾಮ ಅಸ್ತಿತ್ವ ಕಳೆದುಕೊಳ್ಳುತ್ತದೆ. ಅಲ್ಲಿಯವರೆಗೆ ಕಾಯುವುದು ಒಳಿತು ಎಂದಿದ್ದಾರೆ.ಕದನ ವಿರಾಮ ಘೋಷಣೆ ಮಾಡಲಿಕ್ಕೆ ಅಮೆರಿಕದ ಟ್ರಂಪ್‌ ಯಾರು? ಈ ನಡೆ ನಮಗೆ ಇಷ್ಟವೇ ಆಗಲಿಲ್ಲ. ನಿಮ್ಮಿಂದ ನಮಗೆ ಬಹಳ ನಿರೀಕ್ಷೆಯಿದ್ದವು ಎಂದು ಇನ್ನೊಬ್ಬರು ಹೇಳಿದ್ದಾರೆ. ಕಾಂಗ್ರೆಸ್ ತನ್ನ ಎಕ್ಸ್ ಖಾತೆಯಲ್ಲಿ, ಇಂದಿರಾ ಗಾಂಧಿಯ ಚಿತ್ರ ಹಾಕಿ ಧೈರ್ಯ, ಸ್ಪಷ್ಟತೆ, ಶಕ್ತಿ ಎಂದು ಹೇಳಿದೆ. ಬಾಂಗ್ಲಾದಲ್ಲಿ ಪಾಕಿಸ್ಥಾನಸೇನಾಡಳಿತ ನಡೆಸುತ್ತಿದ್ದಾಗ, ಇಂದಿರಾ ಗಾಂಧಿ ಆದೇಶದಂತೆ ಬಾಂಗ್ಲಾಕ್ಕೆ ನುಗ್ಗಿದ್ದ ಭಾರತೀಯ ಸೇನೆ ಬಾಂಗ್ಲಾವನ್ನು ಸ್ವತಂತ್ರಗೊಳಿಸಿ ದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಇನ್ನೊಂದು ಖಾತೆಯಲ್ಲಿ, ಪಾಕಿಸ್ತಾನದಿಂದ ಏನಾದರೂ ಪಡೆದು, ಕನಿಷ್ಠ ಪಕ್ಷ ಮಾತಿನ ಲ್ಲಾದರೂ ಇಂತಹ ಕುಕೃತ್ಯವನ್ನು ಮತ್ತೆ ಮುಂದುವರಿಸುವುದಿಲ್ಲ ಎಂದು ಹೇಳಿಸಿಯಾದರೂ ಕದನವಿರಾಮ ಘೋಷಿಸಿದ್ದರೆ ಅದಕ್ಕೊಂದು ಅರ್ಥವಿರುತ್ತಿತ್ತು ಎನ್ನಲಾಗಿದೆ. ಇದೊಂದು ಪರಸ್ಪರ ಒಪ್ಪಿಗೆಯಿಂದ ಘೋಷಿಸಲ್ಪಟ್ಟಿರುವ ಕದನವಿರಾಮವೇ? ಅಥವಾ ಪಾಕಿಸ್ಥಾನಸೇನೆ ಶರಣಾಗಿ ಅದನ್ನು ಕದನವಿರಾಮವೆಂದು ಬಿಂಬಿಸಿಕೊಂಡಿದ್ದೇ? ಎಂದು ಮತ್ತೂಂದು ಖಾತೆಯಲ್ಲಿ ಹೇಳಲಾಗಿದೆ.ಇನ್ನೊಂದು ಖಾತೆಯಲ್ಲಿ, ಯುದ್ಧದ ಪರವಾಗಿರುವ ಸಂ ಗಳು ಇದು ಮೋದಿಯ ದೊಡ್ಡ ಹೆಜ್ಜೆ ಎನ್ನುತ್ತಾರೆ. ಯುದ್ಧದ ಪರವಾಗಿರುವ ಕಾಂಗ್ರೆಸ್ಸಿಗರು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಆಡಳಿತವನ್ನು ನೆನಪಿಸಿಕೊಳ್ಳುತ್ತಿದ್ದಾರೆ. ಯುದ್ಧ ವಿರೋಧಿಯಾಗಿರುವ ಭಾರತೀಯರು ಮಾತ್ರ ಈ ಎಲ್ಲ ಬೆಳವಣಿಗೆಗಳನ್ನೂ ನಾಟಕ ಎನ್ನುತ್ತಿದ್ದಾರೆ ಎನ್ನಲಾಗಿದೆ.

[t4b-ticker]
error: Content is protected !!