ಕೊಳೆರೋಗದಿಂದ ಅಡಿಕೆ ಬೆಳೆನಾಶ | ಪರಿಹಾರನೀಡುವಂತೆ ಮುಖ್ಯಮಂತ್ರಿಯವರಿಗೆ ಕ್ಯಾಂಪ್ಕೊ ಮನವಿ

Picture of Savistara

Savistara

Bureau Report

ಈಗಾಗಲೇ ಎರಡು ಬಾರಿ ಔಷಧಿ ಸಿಂಪಡಿಸಿದರೂ ಎಡೆಬಿಡದೇ ಸುರಿಯುತ್ತಿರುವ ಮಳೆಯ ಪರಿಣಾಮ ಕೊಳೆರೋಗದಿಂದ ಈಗಾಗಲೇ ಅರ್ಧ ಬೆಳೆನಾಶವಾಗಿ ಹೋಗಿದೆ. ಹತಾಶೆಯಿಂದ ರೈತರು ಪರಿಹಾರಕ್ಕಾಗಿ ಸರಕಾರದ ಕಡೆ ಆಶಾಭಾವನೆಯಿಂದ ನೋಡುತ್ತಿದ್ದಾರೆ.ಹೀಗಾಗಿ ಸರ್ಕಾರ ತಕ್ಷಣವೇ ಗಮನಹರಿಸಬೇಕು.

ನಿರಂತರ ಸುರಿಯುತ್ತಿರುವ ಮಳೆಯುಂದಾಗಿ ಮುಂಬರುವ ಅಡಿಕೆ ಬೆಳೆ ಭಾಗಶಃ ನಾಶವಾಗಿದ್ದು, ಇದೇ ರೀತಿ ಮಳೆ ಸುರಿದಲ್ಲಿ ಹೆಚ್ಚಿನ ಬೆಳೆ ನಾಶವಾಗಲಿದೆ. ಅಡಿಕೆ ಬೆಳೆನಾಶದ ಬಗ್ಗೆ ಸಮೀಕ್ಷೆ ನಡೆಸಿ, ನಷ್ಟಕ್ಕೊಳಗಾದ ರೈತರಿಗೆ ಪರಿಹಾರ ನೀಡುವಂತೆ ಕ್ಯಾಂಪ್ರೊ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಲಿ ಅವರು ಮುಖ್ಯಮಂತ್ರಿ ಅವರಿಗೆ ಮನವಿ ಮಾಡಿದ್ದಾರೆ.

ದಕ್ಷಿಣಕನ್ನಡ, ಉಡುಪಿ, ಉತ್ತರಕನ್ನಡ, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ವಾಡಿಕೆಗಿಂತಲೂ ಜಾಸ್ತಿ ಮುಂಗಾರು ಮಳೆ ಸುರಿಯುತ್ತಿದೆ. ಈಗಾಗಲೇ ಎರಡು ಬಾರಿ ಔಷಧಿ ಸಿಂಪಡಿಸಿದರೂ ಎಡೆಬಿಡದೇ ಸುರಿಯುತ್ತಿರುವ ಮಳೆಯ ಪರಿಣಾಮ ಕೊಳೆರೋಗದಿಂದ ಈಗಾಗಲೇ ಅರ್ಧ ಬೆಳೆನಾಶವಾಗಿ ಹೋಗಿದೆ. ಅಳಿದುಳಿದ ಬೆಳೆರಕ್ಷಣೆಗೆ ರೈತರು ಹೆಣಗಾಡುತ್ತಿದ್ದರೂ ಪರಿಣಾಮ ಶೂನ್ಯ. ಹತಾಶೆಯಿಂದ ರೈತರು ಪರಿಹಾರಕ್ಕಾಗಿ ಸರಕಾರದ ಕಡೆ ಆಶಾಭಾವನೆಯಿಂದ ನೋಡುತ್ತಿದ್ದಾರೆ. ಹೀಗಾಗಿ ಸರ್ಕಾರ ತಕ್ಷಣವೇ ಗಮನಹರಿಸಬೇಕು. ಬೆಳೆನಷ್ಟದ ಬಗ್ಗೆ ಸಂಬಂಧಪಟ್ಟ ఇలాఖా ಅಧಿಕಾರಿಗಳಿಂದ ಸಮೀಕ್ಷೆ ನಡೆಸಬೇಕು. ಬೆಳೆನಾಶದಿಂದ ಉಂಟಾದ ಆರ್ಥಿಕ ನಷ್ಟಕ್ಕೆ ಪರಿಹಾರ ನೀಡುವಂತೆ ಕ್ಯಾಂಪ್ರೊ ಅಧ್ಯಕ್ಷರು ಸಮಸ್ತ ಬೆಳೆಗಾರರ ಪರವಾಗಿ ಸರಕಾರಕ್ಕೆ ಮನವಿ ಸಲ್ಲಿಸಿದ್ದಾರೆ.

News Updates

BREAKING NEWS ಸುಳ್ಯ :ಪಂಜ ಕಾಂಗ್ರೆಸ್ ಪಕ್ಷದ ಹುದ್ದೆಗೆ ರಾಜಿನಾಮೆ ನೀಡಿದ ದಿನೇಶ್ ಪುಂಡಿಮನೆ, ಕುಸುಮಾಧರ ಕೆರೆಯಡ್ಕ,ಲೋಕನಾಥ್ ಕುದ್ವ |ನಮ್ಮ ಮಾತನ್ನು ಪಕ್ಷದ ನಾಯಕರು ಉಳಿಸಿಕೊಂಡಿಲ್ಲ, ದೇವಸ್ಥಾನ ವ್ಯವಸ್ಥೆ ಸರಿದಾರಿಗೆ ತರುವ ಕೆಲಸವಾಗಲಿ: ದಿನೇಶ್ ಪುಂಡಿಮನೆ

News Updates

ಬೆಳ್ತಂಗಡಿ : ಮೊಗ್ರು ಜೈ ಶ್ರೀರಾಮ ಸೇವಾ ಟ್ರಸ್ಟ್ ಅಲೆಕ್ಕಿ -ಮುಗೇರಡ್ಕ ಮೊಗ್ರು, ಶ್ರೀ ರಾಮ ಶಿಶುಮಂದಿರದ 5 ನೇ ವರ್ಷದ ಶ್ರೀ ಕೃಷ್ಣೋತ್ಸವ. |ಕಾಶಿ ಶೆಟ್ಟಿ ನವಶಕ್ತಿ ಗುರುವಾಯನಕೆರೆ ಇವರ ಸ್ಮರಣಾರ್ಥ ಕಾಶಿ ಶೆಟ್ಟಿ ವಿದ್ಯಾ ಮಂದಿರ, ಹಾಗೂ ಶಾಸಕ ಹರೀಶ್ ಪೂಂಜಾರವರ ನೆರವಿನ ಅಡುಗೆ ಕೋಣೆ ಉದ್ಘಾಟನಾ ಕಾರ್ಯಕ್ರಮ |ಮಕ್ಕಳ ಶ್ರೀಕೃಷ್ಣ ಮತ್ತು ರಾಧೆಯರ ಸ್ಪರ್ಧೆ, ಮೊಸರು ಕುಡಿಕೆ, ಆಟೋಟ ಸ್ಪರ್ಧೆ

[t4b-ticker]
error: Content is protected !!