ಉತ್ತರಕಾಶಿ ಪ್ರವಾಹ: 8 ಸೈನಿಕರು ಸೇರಿ ಕನಿಷ್ಠ 49 ಮಂದಿ ಇನ್ನೂ ನಾಪತ್ತೆ

Picture of Savistara

Savistara

Bureau Report

ಉತ್ತರಕಾಶಿಯಲ್ಲಿ ಇತ್ತೀಚೆಗೆ ಸಂಭವಿಸಿದ ಭೀಕರ ಪ್ರವಾಹದಲ್ಲಿ ಸಿಲುಕಿರುವ ಜನರನ್ನು ಸ್ಥಳಾಂತರಿಸುವ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.

ಧರಾಲಿ(ಉತ್ತರಾಖಂಡ): ಇಲ್ಲಿನ ಧರಾಲಿ ಗ್ರಾಮದಲ್ಲಿ ಆಗಸ್ಟ್ 5ರಂದು ಸಂಭವಿಸಿದ ಭೀಕರ ಪ್ರವಾಹದಲ್ಲಿ ಎಂಟು ಸೈನಿಕರು ಸೇರಿ ಕನಿಷ್ಠ 49 ಜನರು ಇನ್ನೂ ಕಾಣೆಯಾಗಿದ್ದಾರೆ.ಧರಾಲಿಯಿಂದ ಸುಮಾರು ಮೂರು ಕಿಲೋಮೀಟರ್ ದೂರದ ಹರ್ಸಿಲ್‌ನಲ್ಲಿರುವ ಸೇನಾ ಶಿಬಿರದ ಸೈನಿಕರು ನಾಪತ್ತೆಯಾಗಿದ್ದಾರೆ. ಸಾವಿರಾರು ಟನ್‌ಗಳಷ್ಟು ಶಿಲಾಖಂಡರಾಶಿಗಳು ಪರ್ವತದ ಇಳಿಜಾರುಗಳಲ್ಲಿ ವೇಗವಾಗಿ ಹರಿದು ಬಂದಿತ್ತು. ಅನೇಕರು ಸಾವನ್ನಪ್ಪಿರುನ ಶಂಕೆ ಇದೆ.ಶನಿವಾರ ಈಟಿವಿ ಭಾರತ್ ಪ್ರತಿನಿಧಿ ಸೇನಾ ಶಿಬಿರವನ್ನು ತಲುಪಿದಾಗ, ಉರುಳಿಬಿದ್ದ ಸೇನಾ ವಾಹನಗಳು, ಅವಶೇಷಗಳ ದಿಬ್ಬಗಳು ಮತ್ತು ಶಿಬಿರದ ಒಂದು ತುದಿಯಲ್ಲಿ ದೊಡ್ಡ ಸರೋವರವೊಂದು ರೂಪುಗೊಂಡಿರುವುದು ಕಂಡುಬಂತು. ದೊಡ್ಡ ಬಂಡೆಗಳು ಮುಖ್ಯ ಮಾರ್ಗಕ್ಕೆ ಅಡ್ಡಿಯಾಗಿದ್ದರಿಂದ ಸೈನಿಕರು ಹಗ್ಗಗಳ ಸಹಾಯದಿಂದ ಶಿಬಿರಕ್ಕೆ ಸರಕುಗಳನ್ನು ಸಾಗಿಸುತ್ತಿದ್ದರು.

ಇಲ್ಲಿಯವರೆಗೆ ನಾಲ್ಕು ಸಾವು ವರದಿಯಾಗಿದೆ. ಕನಿಷ್ಠ 49 ಜನರು ಕಾಣೆಯಾಗಿದ್ದಾರೆ ಎಂದು ಉತ್ತರಕಾಶಿ ಜಿಲ್ಲಾಡಳಿತ ಹೇಳಿದೆ. ಕೆಲವು ವರದಿಗಳು ಕಾಣೆಯಾದವರ ಸಂಖ್ಯೆ 100 ರಷ್ಟಿರಬಹುದು ಎಂದು ಹೇಳಿವೆ. ಆದರೂ ಅಧಿಕಾರಿಗಳು ಭಾನುವಾರ ಬೆಳಿಗ್ಗಿನವರೆಗೆ ಯಾವುದೇ ಅಧಿಕೃತ ಅಂಕಿಅಂಶವನ್ನು ಬಿಡುಗಡೆ ಮಾಡಿಲ್ಲ.ಘಟನಾ ಸ್ಥಳದಲ್ಲಿ ಸಿಲುಕಿರುವವರನ್ನು ಸ್ಥಳಾಂತರಿಸುವುದು ಹಾಗೂ ಕಾಣೆಯಾದವರನ್ನು ಹುಡುಕುವ ನಿಟ್ಟಿನಲ್ಲಿ ನಡೆಯುತ್ತಿರುವ ಆರನೇ ದಿನದ ರಕ್ಷಣಾ ಕಾರ್ಯಾಚರಣೆ ಪ್ರತಿಕೂಲ ಹವಾಮಾನದಿಂದಾಗಿ ಭಾನುವಾರ ಬೆಳಗ್ಗೆ 10 ಗಂಟೆವರೆಗೆ ವಿಳಂಬವಾಯಿತು.

“ಇಲ್ಲಿಯವರೆಗೆ 357 ಜನರರನ್ನು ರಕ್ಷಿಸಲಾಗಿದೆ. ಇವರಲ್ಲಿ 119 ಜನರನ್ನು ಡೆಹ್ರಾಡೂನ್‌ಗೆ ವಿಮಾನದ ಮೂಲಕ ಕಳುಹಿಸಲಾಗಿದೆ. ಭಾರತೀಯ ಸೇನಾ ತುಕಡಿಗಳು, ಯುದ್ಧ ಇಂಜಿನಿಯರ್‌ಗಳು, ವೈದ್ಯಕೀಯ ಘಟಕಗಳು ಮತ್ತು ವಿಶೇಷ ಹುಡುಕಾಟ ಮತ್ತು ರಕ್ಷಣಾ (SAR) ಶ್ವಾನ ದಳಗಳನ್ನು ಒಳಗೊಂಡ ರಕ್ಷಣಾ ತಂಡಗಳು ಕಾಣೆಯಾದ ಮತ್ತು ಸಿಲುಕಿಕೊಂಡಿರುವವರನ್ನು ಹುಡುಕುವಲ್ಲಿ ನಿರತವಾಗಿವೆ. ಎನ್‌ಡಿಆರ್‌ಎಫ್ 105 ಸಿಬ್ಬಂದಿಯನ್ನು ನಿಯೋಜಿಸಿದ್ದು, ಎಸ್‌ಡಿಆರ್‌ಎಫ್ ಮತ್ತು ಐಟಿಬಿಪಿ ತಂಡಗಳ ಜೊತೆಗೆ ಕೆಲಸ ಮಾಡುತ್ತಿದೆ. ಹರ್ಸಿಲ್ ಮತ್ತು ಧರಾಲಿಯಲ್ಲಿ ವೈದ್ಯಕೀಯ ಅಧಿಕಾರಿಗಳನ್ನು ನಿಯೋಜಿಸಲಾಗಿದೆ” ಎಂದು ಭಾರತೀಯ ಸೇನೆ ತಿಳಿಸಿದೆ.

ಸೇನಾ ವೈದ್ಯರು, ನರ್ಸಿಂಗ್ ಸಹಾಯಕರು ಸ್ಥಳದಲ್ಲೇ ಚಿಕಿತ್ಸೆ ನೀಡುತ್ತಿದ್ದಾರೆ. 13 ಸೇನಾ ಸಿಬ್ಬಂದಿಯನ್ನು ರಕ್ಷಿಸಲಾಗಿದೆ. 14 ರಜಪೂತ್ ರೈಫಲ್ಸ್‌ನ ಎಂಟು ಸೈನಿಕರು ಇನ್ನೂ ಪತ್ತೆಯಾಗಿಲ್ಲ. ಸುಮಾರು 100 ಜನರು ಇನ್ನೂ ಕಾಣೆಯಾಗಿದ್ದಾರೆ ಹಾಗೂ ಇಬ್ಬರು ನಾಗರಿಕರ ಸಾವು-ನೋವುಗಳು ದೃಢಪಟ್ಟಿವೆ ಎಂದು ಸ್ಥಳೀಯ ಆಡಳಿತ ಹೇಳಿದೆ.ಸಾರಿಗೆಗೆ ಪ್ರಮುಖ ಕೊಂಡಿಯಾಗಿದ್ದ ಲಿಮ್ಚಿಗಡ್ ಸೇತುವೆ ಮೇಘಸ್ಫೋಟದಲ್ಲಿ ಕೊಚ್ಚಿಹೋಗಿದ್ದು, ಸಂಪರ್ಕವನ್ನು ಪುನಃಸ್ಥಾಪಿಸಲು ಪ್ರಯತ್ನಗಳು ನಡೆಯುತ್ತಿವೆ.

ಪೊಲೀಸ್ ತಂಡಗಳು, ಎಸ್‌ಡಿಆರ್‌ಎಫ್, ಇಂಜಿನಿಯರ್‌ಗಳು ಮತ್ತು ಇತರ ರಕ್ಷಣಾ ಘಟಕಗಳು, ಲಿಮ್ಚಿಗಡ್‌ನಲ್ಲಿ 90 ಅಡಿ ಬೈಲಿ ಸೇತುವೆಯನ್ನು ನಿರ್ಮಿಸಲು ಭಾರತೀಯ ಸೇನೆಯ ಇಂಜಿನಿಯರ್, ವೈದ್ಯಕೀಯ ಮತ್ತು ಸಂವಹನ ತಂಡಗಳೊಂದಿಗೆ ಹಗಲಿರುಳು ಶ್ರಮಿಸುತ್ತಿವೆ.ಗಡಿ ರಸ್ತೆ ಸಂಸ್ಥೆ (ಬಿಆರ್‌ಒ) ಮತ್ತು ಸೇನಾ ಇಂಜಿನಿಯರ್‌ಗಳು ಸೇತುವೆಯ ನಿರ್ಮಾಣ ಕಾರ್ಯವನ್ನು ನಿರ್ವಹಿಸುತ್ತಿದ್ದು, ಗಂಗೋತ್ರಿ ಮತ್ತು ಉತ್ತರಕಾಶಿ ನಡುವಿನ ತೀವ್ರ ಹಾನಿಗೊಳಗಾದ ಪ್ರದೇಶಗಳಲ್ಲಿ ತೆರವು ಕಾರ್ಯವನ್ನು ಕೈಗೊಳ್ಳಲಾಗುತ್ತಿದೆ.

ಗಂಗೋತ್ರಿ ಶಾಸಕ ಸುರೇಶ್ ಚೌಹಾಣ್ ಮಾತನಾಡಿ, “ರಕ್ಷಣಾ ಕಾರ್ಯ ಪ್ರಗತಿಯಲ್ಲಿದೆ, ಈಗಾಗಲೇ ಅನೇಕ ಜನರನ್ನು ರಕ್ಷಿಸಲಾಗಿದೆ. ನಮ್ಮ ಸೇನೆ, ಐಟಿಬಿಪಿ, ಎಸ್‌ಡಿಆರ್‌ಎಫ್ ಮತ್ತು ಇತರ ರಕ್ಷಣಾ ಅಧಿಕಾರಿಗಳು ಶೋಧ ಮತ್ತು ಪರಿಹಾರ ಕಾರ್ಯಾಚರಣೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ” ಎಂದು ಹೇಳಿದ್ದಾರೆ.

[t4b-ticker]
error: Content is protected !!