ಅನಂತೇಶ್ವರ ಫ್ರೆಂಡ್ಸ್ ಅನಂತೋಡಿ ಬೆಳಾಲು ಇದರ ಆಶ್ರಯದಲ್ಲಿ ನಡೆಯುವ ದೀಪಾವಳಿ ಹಬ್ಬದ ಪ್ರಯುಕ್ತ ಕೆಸರುಗದ್ದೆ ಕ್ರೀಡಾಕೂಟದ ಪೂರ್ವಭಾವಿ ಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆಯು ಆ. 03 ನಡೆಯಿತು. 15ನೇ ವರ್ಷದ ಕೆಸರುಗದ್ದೆ ಕ್ರೀಡಾಕೂಟದ ಅಧ್ಯಕ್ಷರಾಗಿ ಶ್ರೀ ಸಂತೋಷ್ ನಾಯ್ಕ ಕುದ್ದಂಟೆ,ಕಾರ್ಯದರ್ಶಿಯಾಗಿ ಶ್ರೀ ಹರ್ಷಿತ್ ಗೌಡ ಎರ್ಧೋಟ್ಟು,ಉಪಾಧ್ಯಕ್ಷರಾಗಿ ಶ್ರೀ ರೂಪೇಶ್ ಪೂಜಾರಿ ಪೋಸೊಟ್ಟು, ಕೋಶಾಧಿಕಾರಿಯಾಗಿ ಶ್ರೀ ಸುಮಂತ್ ನಾಯ್ಕ ಕೊಡಂಗೆ, ಜತೆ ಕಾರ್ಯದರ್ಶಿಯಾಗಿ ಶ್ರೀ ಕಿರಣ್ ಮೇಗಿನಮನೆ ಹಾಗೂ ಕಾರ್ಯಕಾರಣಿ ಸಮಿತಿಯ ಸದಸ್ಯರಾಗಿ ಶ್ರೀ ದಿನೇಶ್ ಗೌಡ ಮರುವದಡಿ, ಶ್ರೀ ಸುಮಿತ್ ಆಚಾರ್ಯ ಅನಂತೋಡಿ,ಶ್ರೀ ಹರೀಶ್ ಮುಂಡೆತ್ಯಾರು,ಶ್ರೀ ಸತೀಶ್ ಗೌಡ ಎಳ್ಳುಗದ್ದೆ , ಶ್ರೀ ಕಿರಣ್ ಸುವರ್ಣ ಇರಂತ್ಯಾರು ಮತ್ತು ಸದಸ್ಯರನ್ನು ಆಯ್ಕೆಮಾಡಲಾಯಿತು. ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಶ್ರೀ ಶ್ರೀನಿವಾಸ್ ಗೌಡ ಶ್ರೀಸೌಧ ಬೆಳಾಲು ಹಾಗೂ ಅನಂತೇಶ್ವರ ಫ್ರೆಂಡ್ಸ್ ಇದರ ಗೌರವಸಲಹೆಗಾರರು ಉಪಸ್ಥಿತರಿದ್ದರು.
ಬೆಳಾಲು : ಅನಂತೋಡಿ ಅನಂತೇಶ್ವರ ಫ್ರೆಂಡ್ಸ್ ಇದರ ನೂತನ ಪದಾಧಿಕಾರಿಗಳ ಆಯ್ಕೆ| ಅಧ್ಯಕ್ಷರಾಗಿ ಶ್ರೀ ಸಂತೋಷ್ ನಾಯ್ಕ ಕುದ್ದಂಟೆ,ಕಾರ್ಯದರ್ಶಿಯಾಗಿ ಶ್ರೀ ಹರ್ಷಿತ್ ಗೌಡ ಎರ್ಧೋಟ್ಟು
Savistara
Bureau Report
[t4b-ticker]














































