ಕೊಲ್ಲೂರು ದೇವಳದ ಹೆಸರಿನಲ್ಲಿ ನಕಲಿ ವೆಬ್ಸೈಟ್! ಕೊಠಡಿ ಕಾಯ್ದಿರಿಸುವ ಹೆಸರಿನಲ್ಲಿ ಭಕ್ತರಿಗೆ ವಂಚನೆ!

Picture of Savistara

Savistara

Bureau Report

ಕೊಲ್ಲೂರು: ಕೊಲ್ಲೂರು ಶ್ರೀಮೂಕಾಂಬಿಕಾ ದೇವಸ್ಥಾನದ ಹೆಸರಿನಲ್ಲಿ ನಕಲಿ ವೆಬ್ಸೈಟ್ ರಚಿಸಿ ದೇವಳದ ಕೊಠಡಿಗಳನ್ನು ಕಾಯ್ದಿರಿಸುವ ಹೆಸರಿನಲ್ಲಿ ವಂಚಿಸುತ್ತಿರುವ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಕೊಲ್ಲೂರು ಶ್ರೀಮೂಕಾಂಬಿಕಾ ದೇವಸ್ಥಾನದ ಅಧಿಕೃತ ವೆಬ್ಸೈಟ್ http://karnatakatemplesaccommodation.com ಬದಲಿಗೆ ಅಪರಿಚಿತರು ಅಕ್ರಮ ಲಾಭದ ಉದ್ದೇಶದಿಂದ karnatakatempleaccommodation ಎಂಬ ಹೆಸರಿನ ಅನಧಿಕೃತ ನಕಲಿ ವೆಬ್ಸೈಟ್ನ್ನು ರಚಿಸಿದ್ದು, ಈ ನಕಲಿ ವೆಬ್ಸೈಟ್ ಮೂಲಕ ಹಲವಾರು ಜನರಿಗೆ ಲಲಿತಾಂಬಿಕಾ ಅತಿಥಿ ಗೃಹದ ಕೊಠಡಿಯನ್ನು ಕಾಯ್ದಿರಿಸಿದ್ದಾರೆ. ಅವರಿಂದ ವಾಟ್ಸಾಪ್ ತಂತ್ರಾಂಶದಲ್ಲಿ ಪೋನ್ ಪೇಯ ಕ್ಯೂಆರ್ ಕೋಡ್ನ್ನು ನೀಡಿ ಹಣವನ್ನು ಪಡೆದು ನಕಲಿ ರಶೀದಿ ನೀಡಿ ವಂಚಿಸಿ ಹಣ ದೋಚುತ್ತಿರುವುದು ಕಂಡುಬಂದಿದೆ.ದೇವಳದ ಭಕ್ತರಿಗೆ ದೇವಳದ ಕೊಠಡಿಗಳನ್ನು ಕಾಯ್ದಿರಿಸುವ ಬಗ್ಗೆ ವಂಚಿಸುತ್ತಿರುವ ಈ ನಕಲಿ ವೆಬ್ಸೈಟ್ ಜಾಲವನ್ನು ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೇವಸ್ಥಾನದ ಕಾರ್ಯನಿರ್ವಾಹಣಾಧಿಕಾರಿ ಪ್ರಶಾಂತ್ ಕುಮಾರ್ ಶೆಟ್ಟಿ ನೀಡಿದ ದೂರಿನಂತೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

News Updates

ಅಂತಿಮ ಹಂತ ತಲುಪಿದ ಕೋಟೆಗಂಗೂರು ರೈಲ್ವೆ ಕೋಚಿಂಗ್ ಡಿಪೋ ಕಾಮಗಾರಿ; ಸಂಸದ ಬಿ.ವೈ.ರಾಘವೇಂದ್ರ ಅವರ ನಿರಂತರ ಪರಿಶ್ರಮದ ಪ್ರತಿಫಲ | ಯೋಜನೆಗೆ ಇಲ್ಲಿವರೆಗೆ 58.82 ಕೋಟಿ ರೂ. ವೆಚ್ಚ; ನಿಲ್ದಾಣ ಹಾಗೂ ಸೇವಾ ಕಟ್ಟಡಗಳ ನಿರ್ಮಾಣ ಕಾಮಗಾರಿ ಪೂರ್ಣ; ಪ್ರಸಕ್ತ ಸಾಲಿಗೆ 9.5 ಕೋಟಿ ರೂ. ಅನುದಾನ ಬಿಡುಗಡೆ

News Updates

ಅಂತಿಮ ಹಂತ ತಲುಪಿದ ಕೋಟೆಗಂಗೂರು ರೈಲ್ವೆ ಕೋಚಿಂಗ್ ಡಿಪೋ ಕಾಮಗಾರಿ; ಸಂಸದ ಬಿ.ವೈ.ರಾಘವೇಂದ್ರ ಅವರ ನಿರಂತರ ಪರಿಶ್ರಮದ ಪ್ರತಿಫಲ | ಯೋಜನೆಗೆ ಇಲ್ಲಿವರೆಗೆ 58.82 ಕೋಟಿ ರೂ. ವೆಚ್ಚ; ನಿಲ್ದಾಣ ಹಾಗೂ ಸೇವಾ ಕಟ್ಟಡಗಳ ನಿರ್ಮಾಣ ಕಾಮಗಾರಿ ಪೂರ್ಣ; ಪ್ರಸಕ್ತ ಸಾಲಿಗೆ 9.5 ಕೋಟಿ ರೂ. ಅನುದಾನ ಬಿಡುಗಡೆ

News Updates

ಮೋದಿ ಸರ್ಕಾರದ ಮಾತೃ ಆರೋಗ್ಯ ರಕ್ಷಣೆಯ ಉಪಕ್ರಮಗಳಿಗೆ ದೊರೆಯುತ್ತಿರುವ ಉತ್ತಮ ಫಲಿತಾಂಶ: ಕರ್ನಾಟಕದಲ್ಲಿ PMSMA ಅಡಿ ಪತ್ತೆಯಾದ 12 ಲಕ್ಷಕ್ಕೂ ಹೆಚ್ಚು ಅಪಾಯಕಾರಿ ಗರ್ಭಧಾರಣೆಗಳಿಗೆ ಅಗತ್ಯ ವೈದ್ಯಕೀಯ ನೆರವು; ಸಂಸದ ಬಿ.ವೈ. ರಾಘವೇಂದ್ರ ಅವರಿಗೆ ಮಾಹಿತಿ ನೀಡಿದ ಕೇಂದ್ರ ಸರ್ಕಾರ

[t4b-ticker]
error: Content is protected !!