UPI ಡಿಜಿಟಲ್ ಪಾವತಿಗೆ ಕೇಂದ್ರದ ನೂತನ ನಿಯಮ: ಶೇ 0.4% ಎಂಡಿಆರ್ ಶುಲ್ಕ ಯಾರಿಗೆ ಅನ್ವಯ?

Picture of Savistara

Savistara

Bureau Report

​ದೇಶದಲ್ಲಿ ಡಿಜಿಟಲ್ ಪಾವತಿ ವ್ಯವಸ್ಥೆಯ ಸುಸ್ಥಿರತೆಯನ್ನು ಕಾಪಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ನೂತನ ಪಾವತಿ ನೀತಿಯನ್ನು ಪ್ರಕಟಿಸಿದ್ದು, ವ್ಯಾಪಾರಿಗಳು ಮಾಡುವ ದೊಡ್ಡ ಮೊತ್ತದ ವಹಿವಾಟುಗಳಿಗೆ ಶೇಕಡಾ 0.4 ರಷ್ಟು ಅತ್ಯಲ್ಪ ವ್ಯಾಪಾರಿ ರಿಯಾಯಿತಿ ದರ (MDR) ನಿಗದಿಪಡಿಸಿದೆ. ಆದರೆ, ಜನಸಾಮಾನ್ಯರ ದೈನಂದಿನ ಡಿಜಿಟಲ್ ವಹಿವಾಟುಗಳಿಗೆ ಯಾವುದೇ ಹೆಚ್ಚುವರಿ ಆರ್ಥಿಕ ಹೊರೆ ಬೀಳದಂತೆ ಸಂಪೂರ್ಣ ವಿನಾಯಿತಿ ನೀಡಲಾಗಿದೆ.​

ನೂತನ ನಿಯಮಾವಳಿಗಳ ಪ್ರಕಾರ, ವ್ಯಕ್ತಿಯಿಂದ ವ್ಯಕ್ತಿಗೆ (P2P – Person to Person) ನಡೆಯುವ ಹಣ ವರ್ಗಾವಣೆಗೆ ಯಾವುದೇ ಎಂಡಿಆರ್ ಶುಲ್ಕವಿರುವುದಿಲ್ಲ. ಕುಟುಂಬದ ಸದಸ್ಯರು ಅಥವಾ ಸ್ನೇಹಿತರಿಗೆ ಎಷ್ಟು ಮೊತ್ತವನ್ನು ಯುಪಿಐ ಮೂಲಕ ಕಳುಹಿಸಿದರೂ ಸಂಪೂರ್ಣ ಉಚಿತವಾಗಿರುತ್ತದೆ. ಗ್ರಾಹಕರು ವ್ಯಾಪಾರಿಗಳಿಗೆ ಪಾವತಿಸುವ (P2M) ₹2,000 ಕ್ಕಿಂತ ಹೆಚ್ಚಿನ ಮೊತ್ತದ ಪಾವತಿಗಳ ಮೇಲೆ ಮಾತ್ರ ಶೇಕಡಾ 0.4 ರಷ್ಟು ಎಂಡಿಆರ್ ಶುಲ್ಕ ಅನ್ವಯವಾಗಲಿದ್ದು, ಸಣ್ಣ ಮೊತ್ತದ ದಿನನಿತ್ಯದ ಖರೀದಿಗಳು ಉಚಿತವಾಗಿರಲಿವೆ.​₹75,000 ಗಿಂತ ಹೆಚ್ಚಿನ ವಹಿವಾಟಿಗೆ ಶುಲ್ಕದ ಮಿತಿ:​ದೊಡ್ಡ ಮಟ್ಟದ ವಾಣಿಜ್ಯ ವಹಿವಾಟುಗಳಲ್ಲಿ ಶುಲ್ಕದ ಹೊರೆ ಅತಿಯಾಗದಂತೆ ಸರ್ಕಾರ ಮಿತಿಯನ್ನು (Capping) ನಿಗದಿಪಡಿಸಿದೆ. ₹75,000 ಹಾಗೂ ಅದಕ್ಕಿಂತ ಹೆಚ್ಚಿನ ಮೊತ್ತದ ವ್ಯಾಪಾರಿ ಪಾವತಿಗಳಿಗೆ ವಿಧಿಸಲಾಗುವ ಎಂಡಿಆರ್ ಶುಲ್ಕಕ್ಕೆ ಗರಿಷ್ಠ ₹300 ಮಿತಿಯನ್ನು ನಿಗದಿಪಡಿಸಲಾಗಿದ್ದು, ಲಕ್ಷಾಂತರ ರೂಪಾಯಿ ಪಾವತಿಸಿದರೂ ಶುಲ್ಕವು ₹300 ಮೀರುವುದಿಲ್ಲ ಎಂದು ಕೇಂದ್ರ ಸ್ಪಷ್ಟಪಡಿಸಿದೆ.

[t4b-ticker]
error: Content is protected !!