ಮಂಗಳೂರು: ಸಚಿವ ಸಂಪುಟಸಭೆ ಹಿನ್ನೆಲೆ : ಸಂಚಾರವ್ಯತ್ಯಯ

Picture of Savistara

Savistara

Bureau Report

ಸೆ.17ರಂದು ಸಿಎಂ ಡಿಸಿಎಂ,ಸಚಿವರು ಮಂಗಳೂರುಗೆ ಆಗಮನ ಸಂಚಾರ ವ್ಯತ್ಯಯ – ಪರ್ಯಾಯ ಮಾರ್ಗ ಪ್ರಕಟಿಸಿದ ಪೊಲೀಸರು

ಮಂಗಳೂರು: ಸೆ.18ರಂದು ಬೆಳಿಗ್ಗೆ ಪಡೀಲ್‌ನ ಜಿಲ್ಲಾಧಿಕಾರಿಕಚೇರಿ (ಪ್ರಜಾಸೌಧ)ದಲ್ಲಿ ರಾಜ್ಯ ಸರ್ಕಾರದ ಸಚಿವ ಸಂಪುಟ ಸಭೆ ನಡೆಯಲಿದ್ದು, ಸೆ.17ರ ಸಂಜೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಸಂಪುಟ ದರ್ಜೆ ಸಚಿವರು ನಗರಕ್ಕೆ ಆಗಮಿಸಲಿದ್ದಾರೆ.

ಸೆ.18ರ ಮಧ್ಯಾಹ್ನ ಮೇರಿಹಿಲ್ ಹೆಲಿಪ್ಯಾಡ್ ಮೂಲಕ ಉಡುಪಿಗೆ ತೆರಳಿ ವಾಪಸ್ ಮಂಗಳೂರಿಗೆ ಬಂದು ತಂಗಲಿದ್ದಾರೆ. ಈ ಹಿನ್ನೆಲೆಯಲ್ಲಿ ನಗರದಲ್ಲಿ ವಾಹನ ದಟ್ಟಣೆ ಸಾಧ್ಯತೆ ಇದ್ದು, ಭದ್ರತೆ ಮತ್ತು ಸಂಚಾರ ಸುವ್ಯವಸ್ಥೆಗಾಗಿ ಮಂಗಳೂರು ನಗರ ಪೊಲೀಸರು ಸಂಚಾರ ಸಲಹೆ ಮತ್ತು ಬದಲಿ ಮಾರ್ಗ ಪ್ರಕಟಿಸಿದ್ದಾರೆ.

ಗಣ್ಯರ ಸಂಚಾರದ ರಸ್ತೆಗಳು: ಸೆ.17 ಸಂಜೆ ಮತ್ತು ಸೆ.19ಬೆಳಿಗ್ಗೆ:ಬಜೆ ವಿಮಾನ ನಿಲ್ದಾಣ – ಕಾವೂರು – ಬೋಂದೆಲ್ -ಮೇರಿಹಿಲ್ – ಕೆಪಿಟಿ – ಕದ್ರಿ ಕಂಬಳ – ಬಂಟ್ಸ್ ಹಾಸ್ಟೆಲ್ ಡಾ.ಬಿ.ಆ‌ರ್.ಅಂಬೇಡ್ಕರ್ ಜಂಕ್ಷನ್ – ಹಂಪನಕಟ್ಟೆ – ಕ್ಲಾಕ್ ಟವರ್ – ಹ್ಯಾಮಿಲ್ಟನ್ ಜಂಕ್ಷನ್.ಸೆ.18 ಬೆಳಿಗ್ಗೆ:ಹ್ಯಾಮಿಲ್ಟನ್ ಜಂಕ್ಷನ್ – ಕ್ಲಾಕ್ ಟವರ್ – ಹಂಪನಕಟ್ಟೆ ಅಂಬೇಡ್ಕ‌ರ್ ಜಂಕ್ಷನ್ – ಕೆಪಿಟಿ – ನಂತೂರು ವೃತ್ತ – ಪಂಪ್‌ವೆಲ್ ನಾಗುರಿ – ಬಜಾಲ್ ಕ್ರಾಸ್ (ಪ್ರಜಾಸೌಧ) – ಪಡೀಲ್ ಜಂಕ್ಷನ್.ಈ ಮಾರ್ಗಗಳಲ್ಲಿ ರಸ್ತೆ ಬದಿ ವಾಹನ ನಿಲುಗಡೆ ಮಾಡಬೇಡಿ. ಆಂಬ್ಯುಲೆನ್ಸ್ ತುರ್ತು ಸೇವಾ ವಾಹನಗಳಿಗೆ ಅಡಚಣೆ ಇರುವುದಿಲ್ಲ.ಬದಲಿ ಮಾರ್ಗಗಳು:ಬದ್ರಿಯಾ – ಹ್ಯಾಮಿಲ್ಟನ್: ತಾಜ್ ವಿವಾಂತ್ ಮುಂಭಾಗದ ಬದಲು ಬದ್ರಿಯಾ – ನೀಲೇಶ್ವರ ರಸ್ತೆ – ರೋಸಾರಿಯೋ ರಸ್ತೆ ಮೂಲಕ.ಹ್ಯಾಮಿಲ್ಟನ್ – ಬದ್ರಿಯಾ: ಹ್ಯಾಮಿಲ್ಟನ್ – ನೆಲ್ಲಿಕಾಯಿ ರಸ್ತೆ ಮೂಲಕ. ಪಂಪ್‌ವೆಲ್ – ಪಡೀಲ್ (ನಾಗುರಿ ಮೂಲಕ): ನಂತೂರು – ಕೈಕಂಬ – ಮರೋಳಿ ಅಥವಾ ತೊಕ್ಕೊಟ್ಟು ದೇರಳಕಟ್ಟೆ – ಮುಡಿಪು – ಬೊಳ್ಯಾರ್ – ಮೆಲ್ಕಾರ್ ಮೂಲಕ. ಬಜಾಲ್ ಕ್ರಾಸ್ (ಪ್ರಜಾಸೌಧ) – ಬಜಾಲ್ / ಕಂಕನಾಡಿ6 ನಿಲ್ದಾಣ: NH-6 ರಲ್ಲಿ ಜಪ್ಪಿನಮೊಗರು ದ್ವಾರ – ಬಜಾಲ್ ಮೂಲಕ. ತೊಕ್ಕೊಟ್ಟು – ಪಂಪ್‌ವೆಲ್: ಮಹಾಕಾಳಿಪಡ್ಡು

[t4b-ticker]
error: Content is protected !!