ಪ್ರಧಾನಿ ಮೋದಿ ಜನಸೇವೆಗೆ 25 ವರ್ಷ, ಇಂದು ಸೇವಾ ಸಂಕಲ್ಪ ಅಭಿಯಾನ | ಇಂದು ಮನೆ ಮನೆಗಳಲ್ಲಿ ಆಶೀರ್ವಾದ ದೀಪ ಬೆಳಗಲು ಬಿಜೆಪಿ ಕರೆ

Picture of Savistara

Savistara

Bureau Report

​ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ 25 ವರ್ಷಗಳ ಸುದೀರ್ಘ ಜನಸೇವೆಯ ಕೃತಜ್ಞತೆಯ ಸಂಕೇತವಾಗಿ ಬಿಜೆಪಿ ವತಿಯಿಂದ ‘ಸೇವಾ ಸಂಕಲ್ಪ ಅಭಿಯಾನ’ವನ್ನು ಹಮ್ಮಿಕೊಳ್ಳಲಾಗಿದೆ. ಈ ಅಭಿಯಾನದ ಅಂಗವಾಗಿ ಸೆಪ್ಟೆಂಬರ್ 17 ರಂದು ದೇಶಾದ್ಯಂತ ಪ್ರತಿ ಮನೆಯಲ್ಲಿ ‘ಆಶೀರ್ವಾದದ ದೀಪ’ ಬೆಳಗುವ ವಿಶೇಷ ಕಾರ್ಯಕ್ರಮಕ್ಕೆ ಕರೆ ನೀಡಲಾಗಿದೆ.​

ಮೋದಿ ಅವರ ಆಡಳಿತಾವಧಿಯಲ್ಲಿ ದೇಶವು ಕಂಡ ಅಭಿವೃದ್ಧಿ, ರೈತ ಕಲ್ಯಾಣ, ಶಿಕ್ಷಣ, ಆರೋಗ್ಯ, ಡಿಜಿಟಲ್ ಇಂಡಿಯಾ, ರೈಲ್ವೆ ಹಾಗೂ ಬಾಹ್ಯಾಕಾಶ ಕ್ಷೇತ್ರದ ಮಹತ್ತರ ಸಾಧನೆಗಳನ್ನು ಸ್ಮರಿಸಿ, ಪ್ರತಿಯೊಬ್ಬ ನಾಗರಿಕರೂ ತಮ್ಮ ಮನೆಗಳಲ್ಲಿ ದೀಪ ಬೆಳಗಿಸುವ ಮೂಲಕ ವಿಶ್ವನಾಯಕನಿಗೆ ಶುಭ ಕೋರಬೇಕೆಂದು ಬಿಜೆಪಿ ರಾಷ್ಟ್ರೀಯ ನಾಯಕರು ಮನವಿ ಮಾಡಿದ್ದಾರೆ.

[t4b-ticker]
error: Content is protected !!