ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸಾರ್ವಜನಿಕ ಜೀವನದ 25 ವರ್ಷಗಳ ಸಾರ್ಥಕ ಸೇವೆಯ ಹಿನ್ನೆಲೆಯಲ್ಲಿ, ಭಾರತೀಯ ಜನತಾ ಪಾರ್ಟಿ ಸುಳ್ಯ ನಗರ ಮಹಾಶಕ್ತಿ ಕೇಂದ್ರ ಹಾಗೂ ಹಳೇ ಗೇಟ್ ಶಕ್ತಿಕೇಂದ್ರದ ವತಿಯಿಂದ ಸಾಮೂಹಿಕ ಪ್ರಾರ್ಥನೆ ಸಲ್ಲಿಕೆ ನಡೆಯಿತು.ಸುಳ್ಯದ ಪೈಚಾರ್ ಶ್ರೀ ಮಾರಿಯಮ್ಮ ವೀರಭದ್ರ ಸ್ವಾಮಿ ದೇವಸ್ಥಾನದಲ್ಲಿ ಬೆಳಿಗ್ಗೆ 7:00 ಗಂಟೆಗೆ ಜಗನ್ಮಾತೆಯಲ್ಲಿ ವಿಶೇಷ ಪೂಜೆ ಹಾಗೂ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು. ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಬಿಜೆಪಿ ಪ್ರಮುಖರಾದ ವಿನಯ ಕುಮಾರ್ ಕಂದಡ್ಕ, ನಾರಾಯಣ ಎಸ್. ಎಂ., ಬುದ್ಧ ನಾಯ್ಕ, ರಮೇಶ್ ಇರಂತಮಜಲು, ಸಂಜೀವ, ಬಾಬು ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.
ಸುಳ್ಯದಲ್ಲಿ ಪ್ರಧಾನಿ ಮೋದಿ ಜನಸೇವೆಯ 25 ವರ್ಷಗಳ ಸಂಭ್ರಮ: ಪೈಚಾರ್ ದೇವಾಲಯದಲ್ಲಿ ಬಿಜೆಪಿ ವಿಶೇಷ ಪ್ರಾರ್ಥನೆ!
Savistara
Bureau Report
[t4b-ticker]
















































