ಸುಳ್ಯದ ಚೆನ್ನಕೇಶವ ದೇವಸ್ಥಾನ ಮುಂಭಾಗ ದಫ್ ಆಯೋಜನೆ ವಿಚಾರ

Picture of Savistara

Savistara

Bureau Report

ಸುಳ್ಯ:ಸುಳ್ಯ ಹಬ್ಬ ಹಿನ್ನಲೆಯಲ್ಲಿ ಚೆನ್ನಕೇಶವ ದೇವಸ್ಥಾನದ ಮುಂಭಾಗದಲ್ಲಿ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯಿಂದ ಡಿಸೆಂಬರ್ 25 ರಂದು ದಫ್ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವಿಚಾರವಾಗಿ ಹಿಂದೂ ಸಂಘಟನೆ ಪ್ರಮುಖರು ಮತ್ತು ಭಕ್ತರಿಂದ ಬಾರಿ ಆಕ್ರೋಶ ವ್ಯಕ್ತವಾಗಿತ್ತು ದೇವಸ್ಥಾನ ಮೊಕ್ತೆಸರ ಮತ್ತು ಸಮಿತಿಯವರಿಗೆ ಪ್ರಮುಖರು ಈ ಕಾರ್ಯಕ್ರಮ ಆಯೋಜಿಸದಂತೆ ಮನವಿ ಮಾಡಿದ್ದರು ಅದರಂತೆ ಸುಳ್ಯ ಹಬ್ಬ ಸಮಿತಿಯವರು ತುರ್ತು ಸಭೆ ನಡೆಸಿ ವಿವಾದಕ್ಕೆ ಕಾರಣವಾಗಿದ್ದ ಕಾರ್ಯಕ್ರಮ ರದ್ದುಗೊಳಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆಯೆಂದು ಮಾಹಿತಿ ಲಭ್ಯವಾಗಿದೆ.

[t4b-ticker]
error: Content is protected !!