ಉತ್ತರ ಕರ್ನಾಟಕ (North Karnataka) ಭಾಗದಲ್ಲಿ ದೇವಮಾನವ (godman) ಅಂತಾನೆ ಹೆಸರು ಮಾಡಿದ್ದ ಮಲ್ಲಿಕಾರ್ಜುನ್ ಮುತ್ಯಾ (Mallikarjun Muthya) ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ. ಅಪ್ರಾಪ್ತ ಬಾಲಕಿಯೊಬ್ಬಳ ಮೇಲೆ ದೌರ್ಜನ್ಯ ನಡೆಸಿದ ಆರೋಪ ಮಲ್ಲಿಕಾರ್ಜುನ್ ಮುತ್ಯಾ ಮೇಲೆ ಕೇಳಿ ಬಂದಿದೆ.
ಈ ಬಗ್ಗೆ ರಾಜ್ಯ ಮಕ್ಕಳ ಹಕ್ಕುಗಳ ಆಯೋಗ (State Child Rights Commission) ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡು, ಈ ಬಗ್ಗೆ ತನಿಖೆಗೆ ಯಾದಗಿರಿ ಎಸ್ಪಿಗೆ (Yadgiri SP) ಸೂಚನೆ ನೀಡಿದೆ. ಇದರ ಬೆನ್ನಲ್ಲೇ ಪೊಲೀಸರು ಮುತ್ಯಾನ ವಿರುದ್ಧ ಪೋಕ್ಸೋ ಕೇಸ್ (POCSO case) ದಾಖಲಿಸಿಕೊಂಡಿದ್ದಾರೆ. ಇದರ ಬೆನ್ನಲ್ಲೇ ಮುತ್ಯಾ ನಾಪತ್ತೆಯಾಗಿದ್ದಾನೆ. ಇನ್ನು ಪೋಕ್ಸೋ ಕಾಯಿದೆ ಬಗ್ಗೆಯೂ ಇದೀಗ ಚರ್ಚೆ ನಡೆದಿದೆ.ಮಕ್ಕಳ ರಕ್ಷಣೆಗಾಗಿ ಪೊಕ್ಸೋ ಕಾಯ್ದೆಈ ಆಧುನಿಕ ಯುಗದಲ್ಲಿ ಯಾರೊಬ್ಬರೂ ಸುರಕ್ಷಿತರಲ್ಲ (Safe) ಎನ್ನುವುದು ನಿತ್ಯಸತ್ಯ. ಮನೆಯಿಂದ ಹೊರಹೋದವ ಮತ್ತೆ ವಾಪಸ್ ಬರುತ್ತಾನೆ ಎನ್ನುವ ಭರವಸೆ ಇಲ್ಲ. ಇತ್ತ ಮನೆಯಲ್ಲೇ ಇದ್ದವರೂ ಸುರಕ್ಷಿತವಾಗಿರುತ್ತಾರೆ ಅಂತ ನಂಬುವುದಕ್ಕೂ ಆಗುವುದಿಲ್ಲ. ಇನ್ನು ಮಕ್ಕಳ ಸ್ಥಿತಿಯಂತೂ ಹೇಳಿಕೊಳ್ಳುವುದೇ ಬೇಡ. ಮಕ್ಕಳು ಹೊರಗಿನ ಅಪರಿಚಿತ ವ್ಯಕ್ತಿಗಳಿಂದಷ್ಟೇ ಅಲ್ಲ, ಮನೆಯೊಳಗೇ ಇರುವ ಪರಿಚಿತ ವ್ಯಕ್ತಿಗಳಿಂದಲೂ ವಿವಿಧ ರೀತಿಯ ದೌರ್ಜನ್ಯಕ್ಕೆ, ಮಾನಸಿಕ, ದೈಹಿಕ ಕಿರುಕುಳಕ್ಕೆ ಒಳಗಾಗುತ್ತಾರೆ. ಹೀಗೆ ಮಕ್ಕಳ ಮೇಲೆ ನಡೆಯುವ ಲೈಂಗಿಕ ಹಾಗೂ ಇತರೇ ಪ್ರಕಾರದ ದೌರ್ಜನ್ಯಗಳನ್ನು ತಡೆಯುವ ನಿಟ್ಟಿನಲ್ಲಿ 2012ರಲ್ಲಿ ಜಾರಿಗೆ ಬಂದಿದ್ದೇ ಪೋಕ್ಸೋ ಕಾಯ್ದೆ.
ಪೋಕ್ಸೋ ಕಾಯ್ದೆ ಎಂದರೇನು?
ಲೈಂಗಿಕ ಹಾಗೂ ಎಲ್ಲಾ ರೀತಿಯ ಅಪರಾಧ, ದೌರ್ಜನ್ಯಗಳಿಂದ ಮಕ್ಕಳನ್ನು ರಕ್ಷಿಸುವ ಉದ್ದೇಶದಿಂದ 2012ರಲ್ಲಿ ಜಾರಿಗೆ ಬಂದಿದ್ದೆ ಪೋಕ್ಸೋ ಕಾಯ್ದೆ. POCSO ಅಂದರೆ The Protection of Children from Sexual Offences ಅಂದರೆ ಲೈಂಗಿಕ ಅಪರಾಧಗಳಿಂದ ಮಕ್ಕಳನ್ನು ರಕ್ಷಿಸುವ ಕಾಯ್ದೆ.
2012ರಲ್ಲಿ ಜಾರಿದೆ ಬಂದ ಕಾನೂನು
ದೇಶದಲ್ಲಿ ಮಕ್ಕಳ ರಕ್ಷಣೆ ಬಗ್ಗೆ ಭಾರತೀಯ ಸಂವಿಧಾನದ 21ನೇ ಪರಿಚ್ಛೇದದಲ್ಲಿ ಉಲ್ಲೇಖಿಸಲಾಗಿದೆ. ಮಕ್ಕಳ ಮೇಲಿನ ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿದಂತೆ ಭಾರತದ ಸಂಸತ್ತು ‘ಲೈಂಗಿಕ ಅಪರಾಧಗಳ ವಿರುದ್ಧ ಮಕ್ಕಳ ರಕ್ಷಣೆ ಮಸೂದೆ 2011’ ಅನ್ನು ಮೇ 22, 2012ರಂದು ಒಂದು ಕಾಯಿದೆಯಾಗಿ ಅಂಗೀಕರಿಸಿತು. ಕಾನೂನಿಗೆ ಅನುಸಾರವಾಗಿ ಸರ್ಕಾರವು ರೂಪಿಸಿದ ನಿಯಮಗಳನ್ನು 2012 ರ ನವೆಂಬರ್‌ನಲ್ಲಿ ತಿಳಿಸಲಾಗಿದೆ. ಮಕ್ಕಳ ಹಕ್ಕುಗಳ ಸಮಾವೇಶದಲ್ಲಿ 1989ರಲ್ಲಿಯೇ ವಿಶ್ವಸಂಸ್ಥೆಯು ಇದನ್ನು ಅಂಗೀಕರಿಸಿದೆ. ಆದರೆ 2012ರಿಂದ ಈ ಕಾಯ್ದೆ ಭಾರತದಲ್ಲಿ ಜಾರಿಗೆ ಬಂತು.
ಮಕ್ಕಳ ರಕ್ಷಣೆಗೆ ಜಾರಿಗೆ ತರಲಾದ ಪೋಕ್ಸೋ
ಪೋಕ್ಸೋ ಕಾಯ್ದೆ 2012ನ್ನು ಲೈಂಗಿಕ ಹಲ್ಲೆ, ಲೈಂಗಿಕ ಕಿರುಕುಳ ಮತ್ತು ಅಶ್ಲೀಲ ವರ್ತನೆಗಳಂತಹ ಅಪರಾಧಗಳಿಂದ ಮಕ್ಕಳನ್ನು ರಕ್ಷಿಸುವುದಕ್ಕಾಗಿ, ಮಕ್ಕಳ ಹಿತಾಸಕ್ತಿ ಮತ್ತು ಒಳಿತಿನ ರಕ್ಷಣೆಗಾಗಿ ಜಾರಿಗೆ ತರಲಾಗಿತ್ತು. ಈ ಕಾಯ್ದೆಯು 18 ವರ್ಷಕ್ಕಿಂತ ಕೆಳಗಿನ ವಯಸ್ಸಿನ ಯಾವುದೇ ವ್ಯಕ್ತಿಯನ್ನು ‘ಮಗು’ ಎಂದು ವ್ಯಾಖ್ಯಾನಿಸುತ್ತದೆ. ಆ ಮಗುವಿನ ದೈಹಿಕ ಆರೋಗ್ಯ, ಭಾವನಾತ್ಮಕ, ಭೌದ್ಧಿಕ ಮತ್ತು ಸಾಮಾಜಿಕ ಅಭಿವೃದ್ಧಿಯನ್ನು ಪ್ರತೀ ಹಂತದಲ್ಲಿಯೂ ಆದ್ಯತೆ ನೀಡಿ ಖಾತ್ರಿಪಡಿಸುತ್ತದೆ.
ಪೋಕ್ಸೋ ಕಾಯ್ದೆಯಡಿ ಯಾವುದು ಅಪರಾಧ?
ಪೋಕ್ಸೋ ಕಾಯ್ದೆಯಡಿ ಮಕ್ಕಳ ರಕ್ಷಣೆಗಾಗಿ ಹಲವು ಸೆಕ್ಷನ್‌ಗಳನ್ನು ಸೇರಿಸಲಾಗಿದೆ. ಸೆಕ್ಷನ್ -4, ಸೆಕ್ಷನ್ -5, ಸೆಕ್ಷನ್ -6, ಸೆಕ್ಷನ್ -9, ಸೆಕ್ಷನ್ -15 ಮತ್ತು ಸೆಕ್ಷನ್ -15 ತಿದ್ದುಪಡಿ ಮತ್ತು ಸೆಕ್ಷನ್ -42ರ ತಿದ್ದುಪಡಿಗಳನ್ನು ಸೇರಿಸಲಾಗಿದೆ. ಮಕ್ಕಳ ಲೈಂಗಿಕ ದುರುಪಯೋಗವನ್ನು ಸೂಕ್ತ ರೀತಿಯಲ್ಲಿ ಪರಿಹರಿಸುವುದಕ್ಕಾಗಿ ಮಾಡಲಾಗಿದೆ.
ಈ ಕಾಯ್ದೆಯಲ್ಲಿ ಹಲವು ತಿದ್ದುಪಡಿ
ಮಕ್ಕಳನ್ನು ಲೈಂಗಿಕ ದುರುಪಯೋಗದಿಂದ ರಕ್ಷಿಸಲು, ಅತ್ಯಾಚಾರದಂತಹ ಲೈಂಗಿಕ ಹಲ್ಲೆಗಳನ್ನು ತಡೆಯಲು ಮರಣ ದಂಡನೆಯೂ ಸೇರಿದಂತೆ ಕಠಿಣ ಶಿಕ್ಷೆಗೆ ಅವಕಾಶ ಒದಗಿಸುವ ಪ್ರಸ್ತಾವನೆಗಳನ್ನು ಮಾಡಲಾಗಿದೆ. ಪ್ರಾಕೃತಿಕ ವಿಕೋಪಗಳು ಮತ್ತು ವಿಪತ್ತುಗಳ ಸಂಧರ್ಭಗಳಲ್ಲಿ ಲೈಂಗಿಕ ಅಪರಾಧಗಳಿಂದ ಮಕ್ಕಳನ್ನು ರಕ್ಷಿಸಲು ಸೆಕ್ಷನ್ -9 ರಲ್ಲಿ ತಿದ್ದುಪಡಿಗಳನ್ನು ತರಲಾಗಿದೆ.
ಇದರ ಅಡಿ ಯಾವುದು ಅಪರಾಧ?
ಅತ್ಯಾಚಾರದಂತಹ ಲೈಂಗಿಕ ಹಲ್ಲೆಅಪರಾಧ ಕೃತ್ಯಗಳಿಗಾಗಿ ಅವಧಿಪೂರ್ವವಾಗಿ ಲೈಂಗಿಕ ಪಕ್ವತೆಯನ್ನು ಸಾಧಿಸಲು ಮಕ್ಕಳಿಗೆ ಯಾವುದೇ ರಾಸಾಯನಿಕ ಅಥವಾ ಹಾರ್ಮೋನ್ ಗಳನ್ನು ಯಾವುದೇ ರೀತಿಯಲ್ಲಾದರೂ ನೀಡುವುದನ್ನೂ ಇದು ನಿರ್ಬಂಧಿಸಿದೆ.
ಮಕ್ಕಳನ್ನು ಅಶ್ಲೀಲತೆಗೆ ಒಳಪಡಿಸುವುದು ಅಪರಾಧವಾಗಿದೆ.
ಮಕ್ಕಳ ಅಶ್ಲೀಲತೆಗೆ ಬ್ರೇಕ್ಮಗುವೊಂದು ಅಶ್ಲೀಲ ಭಂಗಿಯಲ್ಲಿರುವ ವಸ್ತುವನ್ನು/ ಚಿತ್ರವನ್ನು ವರದಿ ಮಾಡುವುದಕ್ಕೆ ಅಥವಾ ಅದನ್ನು ನಾಶ ಮಾಡದೇ ಇರುವುದಕ್ಕೆ, ತೆಗೆದುಹಾಕದೇ ಇರುವುದಕ್ಕೆ ದಂಡವನ್ನು ವಿಧಿಸುವ ಪ್ರಸ್ತಾವ ಇದರಲ್ಲಿದೆ. ಇಂತಹ ಚಿತ್ರಗಳನ್ನು ವರ್ಗಾವಣೆ ಮಾಡುವುದಕ್ಕಾಗಿ, ಪ್ರಚುರಪಡಿಸುತ್ತಿರುವುದಕ್ಕಾಗಿ, ಯಾವುದೇ ರೀತಿಯಲ್ಲಿ ಅದನ್ನು ನಿರ್ವಹಿಸುತ್ತಿದ್ದಲ್ಲಿ ಅಂತಹ ವ್ಯಕ್ತಿಗೆ ಜೈಲು ವಾಸ ಅಥವಾ ದಂಡ ಅಥವಾ ಎರಡನ್ನೂ ವಿಧಿಸಬಹುದಾಗಿದೆ. ಮಕ್ಕಳು ಒಳಗೊಂಡ ಯಾವುದೇ ಅಶ್ಲೀಲ ವಸ್ತುಗಳನ್ನು ವಾಣಿಜ್ಯ ಉದ್ದೇಶಗಳಿಗಾಗಿ ಹೊಂದಿರುವುದು ಕೂಡ ಅಪರಾಧವಾಗಿದೆ.
ಪೋಕ್ಸೋ ಕಾಯ್ದೆ ಅಡಿ ದೂರು ದಾಖಲು ಹೇಗೆ?
POCSO ಕಾಯಿದೆಯ ಅಡಿಯಲ್ಲಿ ಯಾವುದೇ ಅಪರಾಧವನ್ನು ತನಿಖೆ ಮಾಡುವಾಗ ಮಗುವಿನ ಹೇಳಿಕೆಯನ್ನು ಅವನ/ಅವಳ ವಾಸಸ್ಥಳದಲ್ಲಿ ಮತ್ತು ಸಾಮಾನ್ಯವಾಗಿ ಮಹಿಳಾ ಪೊಲೀಸ್ ಅಧಿಕಾರಿಯಿಂದ ದಾಖಲಿಸಬೇಕು. ಮಗುವಿನ ಹೇಳಿಕೆ ದಾಖಲಿಸಬೇಕಾದ ಅಧಿಕಾರಿ ಸಮವಸ್ತ್ರ ಧರಿಸಬಾರದು. ಪರೀಕ್ಷೆಯ ಸಮಯದಲ್ಲಿ ಮಗು ಆರೋಪಿಗಳ ಸಂಪರ್ಕಕ್ಕೆ ಬರದಂತೆ ಅಧಿಕಾರಿ ಖಚಿತಪಡಿಸಿಕೊಳ್ಳಬೇಕು.
ಮಗುವಿನ ಗುರುತು ಗೌಪ್ಯವಾಗಿರಬೇಕು
ರಾತ್ರಿ ವೇಳೆ ಮಗುವನ್ನು ಪೊಲೀಸ್ ಠಾಣೆಯಲ್ಲಿ ಬಂಧಿಸುವಂತಿಲ್ಲ. ಮಗುವಿನ ಗುರುತು ಬಹಿರಂಗವಾಗದಂತೆ ಅಧಿಕಾರಿ ಖಚಿತಪಡಿಸಿಕೊಳ್ಳಬೇಕು. ಮಗುವಿನ ಹೇಳಿಕೆಯನ್ನು ಮಗುವಿಗೆ ನಂಬಿಕೆ ಇರುವ ವ್ಯಕ್ತಿಯ ಉಪಸ್ಥಿತಿಯಲ್ಲಿ ದಾಖಲಿಸಬೇಕು, ಉದಾಹರಣೆಗೆ, ಅವರ ಪೋಷಕರು. ಮಗುವಿನ ಹೇಳಿಕೆಯನ್ನು ಆಡಿಯೋ-ವಿಡಿಯೋ ಎಲೆಕ್ಟ್ರಾನಿಕ್ ವಿಧಾನಗಳ ಮೂಲಕ ದಾಖಲಿಸಬೇಕು. ಇದಕ್ಕೆ ಅಗತ್ಯವಿರುವಲ್ಲೆಲ್ಲಾ ಅನುವಾದಕರು ಅಥವಾ ವ್ಯಾಖ್ಯಾನಕಾರರ ಸಹಾಯವನ್ನು ತೆಗೆದುಕೊ
ಮಗುವನ್ನು ಹೇಗೆ ನಡೆಸಿಕೊಳ್ಳಬೇಕು?
ವಿಚಾರಣೆಯ ಸಮಯದಲ್ಲಿ ಆಗಾಗ್ಗೆ ವಿರಾಮಗಳನ್ನು ಅನುಮತಿಸಬೇಕು. ವಿಚಾರಣಾ ನ್ಯಾಯಾಲಯದಲ್ಲಿ ಪದೇ ಪದೇ ಸಾಕ್ಷಿ ಹೇಳಲು ಮಗುವನ್ನು ಕರೆಯದಂತೆ ವಿಶೇಷ ನ್ಯಾಯಾಲಯ ಖಚಿತಪಡಿಸಿಕೊಳ್ಳಬೇಕು. ವಿಚಾರಣೆಯ ಸಮಯದಲ್ಲಿ ಮಗುವಿನ ಆಕ್ರಮಣಕಾರಿ ಪ್ರಶ್ನೆಯನ್ನು ಅನುಮತಿಸಲಾಗುವುದಿಲ್ಲ.
ಪೋಕ್ಸೋ ಪ್ರಕರಣವನ್ನು ಯಾರು ಸಲ್ಲಿಸಬಹುದು?
ಪೋಷಕರು, ವೈದ್ಯರು, ಶಾಲಾ ಸಿಬ್ಬಂದಿ ಮತ್ತು / ಅಥವಾ ಸ್ವತಃ ಮಗು / ಸ್ವತಃ ಯಾರಾದರೂ ಸೇರಿದಂತೆ ದೂರು ಸಲ್ಲಿಸಬಹುದು.ಪೋಕ್ಸೋಪ್ರಕರಣದಾಖಲಿಸುವವಿಧಾನಏನು?ಈ ಕಾಯ್ದೆಯಡಿ ಯಾವ ಅಪರಾಧ ಎಸಗಲಾಗಿದೆ ಅಥವಾ ಅಪರಾಧ ಎಸಗಲಿದ್ದಾರೆ ಎಂಬ ಆತಂಕದಲ್ಲಿರುವ ಯಾವುದೇ ವ್ಯಕ್ತಿ ತಕ್ಷಣದ ಮತ್ತು ಸೂಕ್ತ ಕ್ರಮಕ್ಕಾಗಿ ಈ ಮಾಹಿತಿಯನ್ನು ವಿಶೇಷ ಬಾಲಾಪರಾಧಿ ಪೊಲೀಸ್ ಘಟಕ ಅಥವಾ ಸ್ಥಳೀಯ ಪೊಲೀಸರಿಗೆ ಒದಗಿಸಬೇಕು.
ಪೋಕ್ಸೋ ಕಾಯ್ದೆ ಅಡಿ ಶಿಕ್ಷೆ ಹೇಗಿರುತ್ತದೆ?
16 ರಿಂದ 18 ವರ್ಷ ವಯಸ್ಸಿನ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದರೆ ಕನಿಷ್ಠ 10 ವರ್ಷಗಳ ಸೆರೆವಾಸವು ಜೀವಾವಧಿ ಶಿಕ್ಷೆ ಮತ್ತು ದಂಡಕ್ಕೆ ವಿಸ್ತರಿಸಬಹುದು. 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದರೆ ಕನಿಷ್ಠ 20 ವರ್ಷಗಳ ಸೆರೆವಾಸ, ಜೀವನದ ಉಳಿದ ಅವಧಿಗೆ ಜೈಲು ಶಿಕ್ಷೆ ಮತ್ತು ದಂಡಕ್ಕೆ ವಿಸ್ತರಿಸಬಹುದು.
ಪೋಕ್ಸೋ ಕಾಯ್ದೆಯಡಿ ದಾಖಲಾದ ಎಫ್‌ಐಆರ್ ರದ್ದಾಗುವುದಿಲ್ಲ
ಐಪಿಸಿಯ ಸೆಕ್ಷನ್ 354 ಮತ್ತು ಪೋಕ್ಸೊ ಕಾಯಿದೆಯ ಸೆಕ್ಷನ್ 8 ಹೊರತುಪಡಿಸಿ, ಉಳಿದೆಲ್ಲ ಸೆಕ್ಷನ್‌ಗಳು ಜಾಮೀನು ಪಡೆಯುತ್ತವೆ. ಅದರ ಹೊರತಾಗಿ ಪೋಕ್ಸೊ ಕಾಯ್ದೆಯಡಿ ಶಿಕ್ಷಾರ್ಹ ಅಪರಾಧಗಳಿಗೆ ದಾಖಲಿಸಲಾದ ಎಫ್‌ಐಆರ್ ಅನ್ನು ರಾಜಿ ಆಧಾರದ ಮೇಲೆ ರದ್ದುಗೊಳಿಸಲು ಆಗುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ. ಆದರೆ ತಡವಾಗುವ ಮೊದಲು ಎಫ್‌ಐಆರ್ ರದ್ದುಗೊಳಿಸುವ ಅರ್ಜಿಯನ್ನು ಸಲ್ಲಿಸಬಹುದು. ಹೈಕೋರ್ಟ್‌ನ ರದ್ದುಗೊಳಿಸುವ ಅಧಿಕಾರವು ನ್ಯಾಯಾಲಯದ ವಿವೇಚನಾ ಅಧಿಕಾರವಾಗಿದೆ. ದಂಡ ವಿಧಿಸುವ ಮತ್ತು ಎಫ್‌ಐಆರ್ ರದ್ದುಗೊಳಿಸುವ ಅಧಿಕಾರ ಹೈಕೋರ್ಟ್‌ಗೆ ಇದೆ.













































