ಅಮೆರಿಕನ್ ಡಾಲರ್ ಬೆಲೆಯು ಒಂದು ತಿಂಗಳಿಗೂ ಮೀರಿದ ಉತ್ತಮ ಸ್ಥಿತಿಗೆ ತಲುಪಿದೆ. ಪ್ರಬಲವಾಗಿರುವ ಅಮೆರಿಕನ್ ಡಾಲರ್ ಕಾರಣದಿಂದ ಲೋಹಗಳ ಬೇಡಿಕೆ ಕಡಿಮೆಯಾಗಿದೆ.
ಫೆಬ್ರವರಿ 23 ಸೋಮವಾರದಿಂದ ಚಿನ್ನದ ಬೆಲೆ ತುಸು ಏರು ಹಾದಿಯಲ್ಲಿತ್ತು. ಕಳೆದ ಶನಿವಾರ ಗ್ರಾಂಗೆ 300 ರೂ. ಮೀರಿ ಏರಿದ ನಂತರ ರವಿವಾರವೂ ಗ್ರಾಂಗೆ 437 ರೂ. ಏರಿಕೆಯಾಗಿ 17 ಸಾವಿರದ ಗಡಿ ದಾಟಿತ್ತು. ಸೋಮವಾರ ದಿಢೀರ್ ಕುಸಿತ ಕಂಡ ಚಿನ್ನದ ಬೆಲೆ ಮತ್ತೆ ಗ್ರಾಂಗೆ 16,980 ರೂ.ಗೆ ಬಂದು ನಿಂತಿತ್ತು ನಂತರ ಸಂಜೆ ವೇಳೆ ತುಸು ಚೇತರಿಸಿಕೊಂಡ ಬೆಲೆ ಮಂಗಳವಾರ ಮತ್ತೆ ತುಸು ಕುಸಿದಿದೆ. ಇದೀಗ ಬುಧವಾರ ಚಿನ್ನ-ಬೆಳ್ಳಿಯ ಬೆಲೆ ತೀವ್ರವಾಗಿ ಕುಸಿದಿದೆ.
ಚಿನ್ನ-ಬೆಳ್ಳಿ ಬೆಲೆ ಕುಸಿತಕ್ಕೆ ಕಾರಣವೇನು?
ಜನವರಿಯ ಗರಿಷ್ಠ ಬೆಲೆಗೆ ಹೋಲಿಸಿದರೆ, ಚಿನ್ನದ ಬೆಲೆ ಶೇ 3ರಷ್ಟು ಮತ್ತು ಬೆಳ್ಳಿ ಬೆಲೆ ಶೇ 11ರಷ್ಟು ಕುಸಿದಿದೆ. ಕಳೆದ 2-3 ದಿನಗಳಿಂದ ಚಿನ್ನದ ಬೆಲೆ ಶೇ 1.4ರಷ್ಟು ಮತ್ತು ಬೆಳ್ಳಿ ಬೆಲೆ ಶೇ 6.5ರಷ್ಟು ಕುಸಿದಿದೆ. ಹಾಗಿದ್ದರೆ ಅಮೂಲ್ಯ ಲೋಹಗಳ ಬೆಲೆ ಕುಸಿಯುತ್ತಲೇ ಹೋಗಲಿದೆಯೇ ಎನ್ನುವ ಪ್ರಶ್ನೆ ಮಾಡುತ್ತಿದೆ.ಅಮೆರಿಕ ಮತ್ತು ಇಸ್ರೇಲ್ ಜೊತೆಗೂಡಿ ಇರಾನ್ ಮೇಲೆ ದಾಳಿ ಮಾಡಿರುವುದು, ಜಾಗತಿಕ ಭೌಗೋಳಿಕ ರಾಜಕೀಯದ ಉದ್ವಿಗ್ನತೆ ಮತ್ತು ಮಧ್ಯಪ್ರಾಚ್ಯದಲ್ಲಿ ಸಂಘರ್ಷದ ವಾತಾವರಣದ ನಡುವೆಯೂ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಕುಸಿದಿವೆ. ಅಮೆರಿಕನ್ ಡಾಲರ್ ಬೆಲೆಯೇರಿಕೆ ಮತ್ತು ಹಣದುಬ್ಬರ ಏರುವ ಕಳವಳದಲ್ಲಿ ಮಾರುಕಟ್ಟೆಯ ಗಮನವು ಅಮೆರಿಕದ ಕೇಂದ್ರೀಯ ಬ್ಯಾಂಕ್ ಫೆಡರಲ್ ರಿಸರ್ವ್ ಕೈಗೊಂಡ ನೀತಿ ನಿರೂಪಣೆಗೆ ಸಂಬಂಧಿಸಿದ ನಿರ್ಧಾರಗಳ ಕಡೆಗೆ ಹೋಗಿದೆ. ಹಾರ್ಮುಜ್ ಜಲಸಂಧಿಯಲ್ಲಿ ಹಡಗುಗಳಿಗೆ ತೊಂದರೆಯಾಗಿರುವುದೂ ಅನಿಶ್ಚಿತತೆಗೆ ಕೊಡುಗೆ ನೀಡಿದೆ. ಹೀಗಾಗಿ ವ್ಯಾಪಾರಿಗಳು ಆರ್ಥಿಕ ದತ್ತಾಂಶ, ತೈಲ ಬೆಲೆಗಳು ಮತ್ತು ಕೇಂದ್ರೀಯ ಬ್ಯಾಂಕ್ಗಳ ಸೂಚನೆಗಳನ್ನು ಗಮನಿಸಿ ಹೂಡಿಕೆ ಮಾಡುತ್ತಿದ್ದಾರೆ.
ಅಮೆರಿಕನ್ ಡಾಲರ್ ಬೆಲೆಯು ಒಂದು ತಿಂಗಳಿಗೂ ಮೀರಿದ ಉತ್ತಮ ಸ್ಥಿತಿಗೆ ತಲುಪಿದೆ. ಹೀಗಾಗಿ ವಿದೇಶಿ ಖರೀದಿದಾರರಿಗೆ ಚಿನ್ನ-ಬೆಳ್ಳಿ ದುಬಾರಿಯಾಗಿಸಿದೆ. ಪ್ರಬಲವಾಗಿರುವ ಅಮೆರಿಕನ್ ಡಾಲರ್ ಕಾರಣದಿಂದ ಲೋಹಗಳ ಬೇಡಿಕೆ ಕಡಿಮೆಯಾಗಿದೆ. ಹೂಡಿಕೆದಾರರು ಫೆಡರಲ್ ರಿಸರ್ವ್ ದೀರ್ಘ ಸಮಯದವರೆಗೆ ಬಡ್ಡಿದರವನ್ನು ಸ್ಥಿರವಾಗಿಡಲಿದೆ ಎಂದು ನಿರೀಕ್ಷಿಸುತ್ತಿದ್ದಾರೆ. ಹಣದುಬ್ಬರ ಕಳವಳ ಮತ್ತು ಬಡ್ಡಿದರ ಏರಿಕೆ ನಿರೀಕ್ಷೆಯ ನಡುವೆ ಹೆಚ್ಚು ಲಾಭ ಕೊಡದ ಆಸ್ತಿಯ ಮೇಲಿನ ಆಸಕ್ತಿ ಕಡಿಮೆಯಾಗಿದೆ.
ಇಂದಿನ ಚಿನ್ನದ ದರ ಹೇಗಿದೆ?
ಮಾರ್ಚ್ 04ರಂದು ಬುಧವಾರ ಬೆಂಗಳೂರಿನ ಮಾರುಕಟ್ಟೆಗಳಲ್ಲಿ 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ ಮಂಗಳವಾರ ಸಂಜೆಯ ಬೆಲೆಗೆ ಹೋಲಿಸಿದರೆ ಬರೋಬ್ಬರಿ ಪ್ರತಿ ಗ್ರಾಂಗೆ 311 ರೂ. ಕುಸಿತ ಕಂಡು ಹತ್ತು ಗ್ರಾಂ ಬೆಲೆ 1,64,510 ರೂ. ಗೆ ಬಂದು ನಿಂತಿದೆ. ಆಭರಣ ಚಿನ್ನವಾದ 22 ಕ್ಯಾರೆಟ್ ಬೆಲೆಯು ಗ್ರಾಂಗೆ 285 ರೂ. ಇಳಿದು ಹತ್ತು ಗ್ರಾಂಗೆ 1,50,800 ರೂ. ಗೆ ತಲುಪಿದೆ. 18 ಕ್ಯಾರೆಟ್ ಚಿನ್ನವು ಪ್ರತಿ ಗ್ರಾಂಗೆ 234 ರೂ. ಇಳಿಕೆಯಾಗಿ ಹತ್ತು ಗ್ರಾಂಗೆ 1,23,380 ರೂ. ಗೆ ತಲುಪಿದೆ.
ಮಂಗಳೂರಿನಲ್ಲಿ ಚಿನ್ನದ ದರವೆಷ್ಟಿದೆ?
ಮಾರ್ಚ್ 04ರಂದು ಬುಧವಾರ ಬೆಳಗಿನ 11 ಗಂಟೆಯ ವಹಿವಾಟಿನಲ್ಲಿ ಮಂಗಳೂರಿನಲ್ಲಿ ಚಿನ್ನದ ಬೆಲೆ ಮತ್ತೆ ಭಾರೀ ಕುಸಿತ ಕಂಡಿದೆ. ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ದರ 16,451 (-311) ರೂ. ನಷ್ಟಿದೆ. ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ ದರ 15,080 (-285) ರೂ. ಮತ್ತು ಒಂದು ಗ್ರಾಂ 18 ಕ್ಯಾರೆಟ್ ಚಿನ್ನದ ದರ 12,338 (-234) ರೂ. ಬೆಲೆಗೆ ತಲುಪಿದೆ.
ಮತ್ತೆ ಕುಸಿದ ಬೆಳ್ಳಿ ದರ
ಫೆಬ್ರವರಿ ಆರಂಭದಿಂದಲೇ ಸತತ ಕುಸಿತ ಕಂಡಿದ್ದ ಬೆಳ್ಳಿ ಫೆಬ್ರವರಿ ಮಧ್ಯಭಾಗದಲ್ಲಿ ಏರು ಹಾದಿಯಲ್ಲಿತ್ತು. ಕಳೆದ ವಾರದಲ್ಲಿ ಬುಧವಾರ, ಗುರುವಾರ ಮತ್ತು ಶುಕ್ರವಾರ ಸ್ಥಿರವಾಗಿದ್ದ ಬೆಳ್ಳಿಯ ಬೆಲೆ, ಶನಿವಾರ ಗ್ರಾಂಗೆ ರೂ 10 ಏರಿಕೆಯಾಗಿ ಒಂದು ಕೆಜಿ ಬೆಳ್ಳಿ ಬೆಲೆ 2,95,000 ರೂ. ಗೆ ಬಂದು ನಿಂತಿತ್ತು. ಮಾರ್ಚ್ 1ರಂದು ರವಿವಾರವೂ ಇದೇ ಬೆಲೆಯಲ್ಲಿ ಸ್ಥಿರವಾಗಿ ನಿಂತಿತ್ತು. ಆದರೆ ಈ ವಾರದ ಆರಂಭದಲ್ಲಿ ಸೋಮವಾರ ಬರೋಬ್ಬರಿ ಗ್ರಾಂಗೆ 35 ರೂ. ಏರಿಕೆಯಾಗಿ ಒಂದು ಕೆಜಿ ಬೆಳ್ಳಿ ಬೆಲೆಯು 3,30,000 ರೂ. ಗೆ ತಲುಪಿತ್ತು.ಮಂಗಳವಾರ ಮಾರ್ಚ್ 02ರಂದು ಬೆಳ್ಳಿಯ ಬೆಲೆಯಲ್ಲಿ ಮತ್ತೆ ಕುಸಿತ ಕಂಡುಬಂದಿದೆ. ಗ್ರಾಂಗೆ 20 ರೂ. ಕುಸಿತ ಕಂಡು ಒಂದು ಕೆಜಿ ಬೆಳ್ಳಿ ಬೆಲೆಯು 2,95,000 ರೂ. ಗೆ ಬಂದು ನಿಂತಿತ್ತು. ಇದೀಗ ಬುಧವಾರ ಮತ್ತೆ ಪ್ರತಿ ಗ್ರಾಂಗೆ 10 ರೂ. ಕುಸಿದ ಬೆಳ್ಳಿಯ ಬೆಲೆ ಪ್ರತಿ ಕೆಜಿಗೆ 2,85,000 ರೂ. ಗೆ ಬಂದು ನಿಂತಿದೆ.
ವಿವಿಧ ನಗರಗಳಲ್ಲಿ 1 ಗ್ರಾಮ್ ಚಿನ್ನದ ದರ (ಬೆಳಗಿನ ವಹಿವಾಟು) ಹೇಗಿದೆ
ದೆಲ್ಲಿ : 24 ಕ್ಯಾರೆಟ್ ಚಿನ್ನದ ದರ 16,466 (-311) ರೂ., 22 ಕ್ಯಾರೆಟ್ ಚಿನ್ನದ ದರ 15,095 (-285) ರೂ .
ಮುಂಬೈ: 24 ಕ್ಯಾರೆಟ್ ಚಿನ್ನದ ದರ 16,451 (-311) ರೂ., 22 ಕ್ಯಾರೆಟ್ ಚಿನ್ನದ ದರ 15,080 (-285) ರೂ.
ಅಹಮದಾಬಾದ್: 24 ಕ್ಯಾರೆಟ್ ಚಿನ್ನದ ದರ 16,456 (-311) ರೂ., 22 ಕ್ಯಾರೆಟ್ ಚಿನ್ನದ ದರ 15,085 (-285) ರೂ.
ಚೆನ್ನೈ: 24 ಕ್ಯಾರೆಟ್ ಚಿನ್ನದ ದರ 16,582 (-289) ರೂ., 22 ಕ್ಯಾರೆಟ್ ಚಿನ್ನದ ದರ 15,200 (-265) ರೂ.
ಕೋಲ್ಕತ್ತಾ: 24 ಕ್ಯಾರೆಟ್ ಚಿನ್ನದ ದರ 16,451 (-311) ರೂ., 22 ಕ್ಯಾರೆಟ್ ಚಿನ್ನದ ದರ 15,080 (-285) ರೂ.
ಹೈದರಾಬಾದ್: 24 ಕ್ಯಾರೆಟ್ ಚಿನ್ನದ ದರ 16,451 (-311) ರೂ., 22 ಕ್ಯಾರೆಟ್ ಚಿನ್ನದ ದರ 15,080 (-285)ರೂ.
ಜೈಪುರ: 24 ಕ್ಯಾರೆಟ್ ಚಿನ್ನದ ದರ 16,466 (-311)ರೂ., 22 ಕ್ಯಾರೆಟ್ ಚಿನ್ನದ ದರ 15,095 (-285)ರೂ.
ಚಂಡೀಗಢ: 24 ಕ್ಯಾರೆಟ್ ಚಿನ್ನದ ದರ 16,466 (-311) ರೂ., 22 ಕ್ಯಾರೆಟ್ ಚಿನ್ನದ ದರ 15,095 (-285) ರೂ.
ಲಕ್ನೋ : 24 ಕ್ಯಾರೆಟ್ ಚಿನ್ನದ ದರ 16,466 (-311)ರೂ., 22 ಕ್ಯಾರೆಟ್ ಚಿನ್ನದ ದರ 15,095 (-285) ರೂ.













































