ಅಸ್ಸಾಂ ಕಾಂಗ್ರೆಸ್‌ ಅಧ್ಯಕ್ಷ ಗೌರವ್ ಗೊಗೊಯ್‌ಗೆ ಸೋಲು

Picture of Savistara

Savistara

Bureau Report

ಗುವಾಹಟಿ: ಚಹಾ ತೋಟಗಳ ನಾಡು ಎಂದೇ ಕರೆಸಿಕೊಳ್ಳುವ ಅಸ್ಸಾಂನಲ್ಲಿ ಬಿಜೆಪಿ ಮೂರನೇ ಬಾರಿಗೆ ಅಧಿಕಾರಕ್ಕೆ ಏರುವತ್ತ ಸಾಗಿದೆ.ಸದ್ಯದ ಟ್ರೆಂಡ್ ಪ್ರಕಾರ, ಬಿಜೆಪಿ 101 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು, ಮ್ಯಾಜಿಕ್ ನಂಬರ್ 64 ದಾಟಿದೆ. ಕಾಂಗ್ರೆಸ್ 23 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದೆ.ಈ ಮೂಲಕ 10 ವರ್ಷಗಳ ಜಯದ ಬರ ನೀಗಿಸುವ ತವಕದಲ್ಲಿದ್ದ ಕಾಂಗ್ರೆಸ್‌ಗೆ ನಿರಾಸೆಯಾಗಿದೆ.ಅಸ್ಸಾಂನ 126 ವಿಧಾನಸಭಾ ಕ್ಷೇತ್ರಗಳಿಗೆ ಏಪ್ರಿಲ್ 9 ರಂದು ಒಂದೇ ಹಂತದಲ್ಲಿ ಮತದಾನ ನಡೆದಿದ್ದು, 722 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಈ ಬಾರಿ 2.50 ಕೋಟಿಗೂ ಅಧಿಕ ಮತದಾರರು ಹಕ್ಕು ಚಲಾಯಿಸಿದ್ದು, ಶೇ 85.96ರಷ್ಟು ದಾಖಲೆ ಮತದಾನವಾಗಿದೆ.ಬಿಜೆಪಿ ನಾಯಕ ಹಾಗೂ ಹಾಲಿ ಸಿಎಂ ಹಿಮಂತ ಬಿಸ್ವಾ ಶರ್ಮಾ ಜಲುಕ್ಟರಿ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದು, 3ನೇ ಬಾರಿಗೆ ಮುಖ್ಯಮಂತ್ರಿ ಆಗುವ ಇರಾದೆಯಲ್ಲಿದ್ದಾರೆ.ಇತ್ತ, ಜೋರ್ಹತ್ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ. ಮೊದಲ ಬಾರಿ ಸಿಎಂ ಆಗುವ ಹಂಬಲದಲ್ಲಿದ್ದ ಕಾಂಗ್ರೆಸ್ ರಾಜ್ಯಾಧ್ಯಕ್ಷ ಗೌರವ್ ಗೋಗಯ್ ಸೋಲು ಕಂಡಿದ್ದಾರೆ.

ಚುನಾವಣೋತ್ತರ ಸಮೀಕ್ಷೆಗಳು ಈ ಬಾರಿಯೂ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಹೇಳಿತ್ತು.ಚುನಾವಣೆಗೂ ಮುನ್ನ ಕಾಂಗ್ರೆಸ್‌ನ ಹಿರಿಯ ನಾಯಕ ಪ್ರದ್ಯುತ್‌ ಬೊರ್ಡೊಲೊಯ್ ಮತ್ತು ಭೂಪೇನ್ ಬೋರಾಹ್ ಬಿಜೆಪಿಗೆ ಸೇರಿದ್ದರು. ದಿಸ್ಪುರ್ ಕ್ಷೇತ್ರದಿಂದ ಪ್ರದ್ಯುತ್ ಹಾಗೂ ಬಿದ್ದುರಿಯಾ ಕ್ಷೇತ್ರದಿಂದ ಭೂಪೇನ್ ಸ್ಪರ್ಧಿಸಿದ್ದಾರೆ.ಸದ್ಯದ ಟ್ರೆಂಡ್ ಹೇಗಿದೆ?ಮತ ಎಣಿಕೆಯಲ್ಲಿ ಚುನಾವಣಾ ಆಯೋಗದ ಪ್ರಕಾರ, ಅಸ್ಸಾಂನಲ್ಲಿ ಆಡಳಿತಾರೂಢ ಎನ್‌ಡಿಎ 101 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಕಾಂಗ್ರೆಸ್ 23 ಕ್ಷೇತ್ರಗಳಲ್ಲಿ ಮುಂದಿದೆ.

ಜೋರ್ಹತ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅಸ್ಸಾಂ ಕಾಂಗ್ರೆಸ್‌ ಅಧ್ಯಕ್ಷ ಗೌರವ್ ಗೊಗೊಯ್ ಬಿಜೆಪಿಯ ಹಿತೇಂದ್ರ ನಾಥ್ ಗೋಸ್ವಾಮಿ ವಿರುದ್ಧ 23,182 ಮತಗಳಿಂದ ಸೋಲಿ ಕಂಡಿದ್ದಾರೆ.

ವಿಧಾನಸಭಾ ಚುನಾವಣೆಯಲ್ಲಿ ಮೊದಲ ಬಾರಿ ಸ್ಪರ್ಧಿಸಿದ್ದ ಗೊಗೊಯ್ ಸೋಲು ಕಂಡಿದ್ದಾರೆ. ಐದು ಬಾರಿ ಶಾಸಕರಾಗಿರುವ, ಮೂರು ಬಾರಿ ಎಜಿಪಿ ನಾಯಕರಾಗಿ ಮತ್ತು ಎರಡು ಬಾರಿ ಬಿಜೆಪಿ ಶಾಸಕರಾಗಿ ಕ್ಷೇತ್ರವನ್ನು ಪ್ರತಿನಿಧಿಸಿರುವ ಗೋಸ್ವಾಮಿ ಸತತ ಮೂರನೇ ಅವಧಿಯಲ್ಲಿ ಗೆಲುವಿನ ನಗೆ ಬೀರಿದ್ದಾರೆ.

ಇದರ ಜತೆಗೆ ಶಿಕ್ಷಣ ಸಚಿವ ರನೋಜ್ ಪೆಗು ಧೇಮಾಜಿ ಕ್ಷೇತ್ರದಲ್ಲಿ 32,229 ಮತಗಳಿಂದ ಕಾಂಗ್ರೆಸ್ ಪ್ರತಿಸ್ಪರ್ಧಿ ಸೈಲೆನ್ ಸೋನೋವಾಲ್‌ ವಿರುದ್ಧ ಜಯ ಸಾಧಿಸಿದ್ದಾರೆ.ಅಸ್ಸಾಂ ಸಚಿವ ಬಿಪಿಎಫ್‌ನ ಚರಣ್ ಬೊರೊ ಅವರು 55,000 ಕ್ಕೂ ಹೆಚ್ಚು ಮತಗಳ ಅಂತರದಿಂದ ಜೆಎಂಎಂನ ಪ್ರತಿಸ್ಪರ್ಧಿಯನ್ನು ಸೋಲಿಸಿ ಮಜ್ಜತ್‌ ಸ್ಥಾನವನ್ನು ಉಳಿಸಿಕೊಂಡಿದ್ದಾರೆ

News Updates

ಎಸ್‌ಐಆ‌ರ್ ವಿಚಾರದಲ್ಲಿ ಬಿಜೆಪಿ ಕಾರ್ಯಕರ್ತರ ಬೆದರಿಸಿದರೆ ಸುಮ್ಮನಿರಲ್ಲ: ಪೊಲೀಸರಿಗೆ ಸಂಸದ ಕ್ಯಾ. ಚೌಟ ಎಚ್ಚರಿಕೆ – ಕಾಂಗ್ರೆಸ್ ತನ್ನ ಆರೋಪಗಳಿಗೆ ಸೂಕ್ತ ಸಾಕ್ಷ್ಯಾಧಾರಗಳನ್ನು ಒದಗಿಸಲಿ ಅಕ್ರಮವಾಗಿ ಮತ ರದ್ದು -ಮಾಡಲಾದ ವ್ಯಕ್ತಿಯನ್ನು ತಂದು ಚುನಾವಣಾಧಿಕಾರಿ ಮುಂದೆ ನಿಲ್ಲಿಸಲಿ: ಸಂಸದ ಸವಾಲು

[t4b-ticker]
error: Content is protected !!