Temple Offering: ತಿಮ್ಮಪ್ಪನಿಗೆ ಭಕ್ತನಿಂದ ಬರೋಬ್ಬರಿ 160 ಕೋಟಿ ಮೌಲ್ಯದ 121 ಕೆಜಿ ಚಿನ್ನಾಭರಣ ಕಾಣಿಕೆ: ದೇಗುಲದ ಇತಿಹಾಸದಲ್ಲೇ ಇದು ಅತಿದೊಡ್ಡ ದಾನ!

Picture of Savistara

Savistara

Bureau Report

​ತಿರುಮಲ: ತಿರುಮಲದ ಶ್ರೀ ವೆಂಕಟೇಶ್ವರ ಸ್ವಾಮಿಗೆ ಭಕ್ತರೊಬ್ಬರು ನವೆಂಬರ್ 26ರಂದು ಸುಮಾರು 150 ರಿಂದ 160 ಕೋಟಿ ರೂಪಾಯಿ ಮೌಲ್ಯದ 121 ಕೆಜಿ ಚಿನ್ನಾಭರಣಗಳನ್ನು ಕಾಣಿಕೆಯಾಗಿ ಅರ್ಪಿಸಲಿದ್ದಾರೆ.

Advertisement

ತಿರುಮಲ ದೇಗುಲದ ಇತಿಹಾಸದಲ್ಲೇ ವೈಯಕ್ತಿಕ ಭಕ್ತರೊಬ್ಬರು ನೀಡುತ್ತಿರುವ ಅತಿದೊಡ್ಡ ಕಾಣಿಕೆ ಇದಾಗಲಿದೆ.​ಒಟ್ಟು 121 ಕೆಜಿ ತೂಕದ ಈ ಚಿನ್ನವನ್ನು 9 ಸೆಟ್‌ಗಳಲ್ಲಿ 45 ವಿವಿಧ ಆಭರಣಗಳ ರೂಪದಲ್ಲಿ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ.

Advertisement

Advertisement

ದಾನಿಯು ಈಗಾಗಲೇ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಎಲ್ಲಾ ವಿಧಿವಿಧಾನಗಳನ್ನು ಪೂರ್ಣಗೊಳಿಸಿದ್ದು, ನವೆಂಬರ್ 26ರಂದು ದೇವಸ್ಥಾನದಲ್ಲಿ ಅಧಿಕೃತವಾಗಿ ಈ ಆಭರಣಗಳನ್ನು ಹಸ್ತಾಂತರಿಸಲಿದ್ದಾರೆ ಎಂದು ದೇಗುಲದ ಅಧಿಕಾರಿಗಳು ತಿಳಿಸಿದ್ದಾರೆ.​

Advertisement

Advertisement

ಈ ಹಿಂದೆ 2025ರ ಆಗಸ್ಟ್‌ನಲ್ಲಿ ಉದ್ಯಮಿಯೊಬ್ಬರು ತಮ್ಮ ಕಂಪನಿಯ ಷೇರು ಮಾರಾಟದ ಯಶಸ್ಸಿನ ಹಿನ್ನೆಲೆಯಲ್ಲಿ ತಿಮ್ಮಪ್ಪನಿಗೆ 121 ಕೆಜಿ ಚಿನ್ನ ನೀಡುವುದಾಗಿ ಹರಕೆ ಹೊತ್ತಿದ್ದರು. ಇದೀಗ ಆ ಆಭರಣಗಳ ತಯಾರಿಕೆ ಪೂರ್ಣಗೊಂಡಿದ್ದು, ಅಧಿಕೃತವಾಗಿ ಸ್ವಾಮಿಗೆ ಸಮರ್ಪಣೆಯಾಗುತ್ತಿದೆ.

Advertisement
[t4b-ticker]
error: Content is protected !!