ತಮಿಳುನಾಡಿನಲ್ಲಿ ರಾಜಕೀಯ ಸುನಾಮಿ, ಬದ್ಧವೈರಿಗಳಾದ ಡಿಎಂಕೆ-ಎಐಡಿಎಂಕೆ ನಡುವೆ ಮೈತ್ರಿ?

Picture of Savistara

Savistara

Bureau Report

ಚೆನ್ನೈ (ಮೇ.6): ತಮಿಳುನಾಡಿನ ರಾಜಕೀಯ ಇತಿಹಾಸದಲ್ಲೇ ಹಿಂದೆಂದೂ ಕಾಣದ ಅಚ್ಚರಿಯ ಬೆಳವಣಿಗೆ ನಡೆಯಬಹುದು ಎಂ. ರಾಜ್ಯದಲ್ಲಿ ದಶಕಗಳಿಂದ ಪರಸ್ಪರ ಕಿತ್ತಾಡುತ್ತಿದ್ದ ಬದ್ಧ ಎದುರಾಳಿಗಳಾದ ಡಿಎಂಕೆ (DMK) ಮತ್ತು ಎಐಎಡಿಎಂಕೆ (AIADMK) ಈಗ ಪರಸ್ಪರ ಕೈಜೋಡಿಸುವ ಮುನ್ಸೂಚನೆ ಸಿಕ್ಕಿದೆ.

ನಟ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK) ಸರ್ಕಾರ ರಚನೆಗೆ ಕಸರತ್ತು ನಡೆಸುತ್ತಿರುವ ಹೊತ್ತಲ್ಲೇ, ಡಿಎಂಕೆ ಈಗ ಎಐಎಡಿಎಂಕೆ ಜೊತೆಗೆ ಗುಪ್ತ ಮಾತುಕತೆ ಆರಂಭಿಸಿರುವುದು ಭಾರಿ ಸಂಚಲನ ಮೂಡಿಸಿದೆ.ಮೂಲಗಳ ಪ್ರಕಾರ, ವಿಜಯ್ ಅವರು ಮಿತ್ರಪಕ್ಷಗಳನ್ನು ಒಟ್ಟುಗೂಡಿಸಿ ಅಧಿಕಾರ ಹಿಡಿಯುವುದನ್ನು ತಪ್ಪಿಸಲು ಡಿಎಂಕೆ ನಾಯಕತ್ವವು ಎಐಎಡಿಎಂಕೆ ಜೊತೆಗೆ ‘ಬ್ಯಾಕ್‌ಚಾನೆಲ್’ (Backchannel) ಮಾತುಕತೆಗಳನ್ನು ನಡೆಸುತ್ತಿದೆ. ತಮಿಳುನಾಡಿನ ರಾಜಕೀಯ ಸಮೀಕರಣಗಳನ್ನೇ ಬದಲಿಸಬಲ್ಲ ಈ ಅಪರೂಪದ ಸಂಪರ್ಕದ ಬಗ್ಗೆ ಇಂಡಿಯಾ ಟುಡೇ ಟಿವಿ ವರದಿ ಮಾಡಿದೆ.

ಬದಲಾಗುತ್ತಾ ತಮಿಳುನಾಡು ಸಮೀಕರಣ?

ಎಐಎಡಿಎಂಕೆ ಮೂಲಗಳು ಈ ಮಾತುಕತೆಯನ್ನು ಖಚಿತಪಡಿಸಿವೆ. ಆದರೆ, ಈವರೆಗೆ ಅಧಿಕೃತವಾಗಿ ಯಾವುದೇ ಒಮ್ಮತಕ್ಕೆ ಬಂದ ಬಗ್ಗೆ ಮಾಹಿತಿಯಿಲ್ಲ. ದಶಕಗಳಿಂದ ತಮಿಳುನಾಡು ರಾಜಕಾರಣವನ್ನು ಎರಡು ಧ್ರುವಗಳಂತೆ ಆಳುತ್ತಿದ್ದ ಈ ಎರಡು ದ್ರಾವಿಡ ಪಕ್ಷಗಳು, ಈಗ ಹೊಸ ಶಕ್ತಿ ವಿಜಯ್ ಅಬ್ಬರಕ್ಕೆ ಕಡಿವಾಣ ಹಾಕಲು ಒಂದಾಗುತ್ತವೆಯೇ ಎಂಬುದು ಸದ್ಯದ ಕುತೂಹಲ.

ಒಂದು ವೇಳೆ ಈ ಮೈತ್ರಿ ನಡೆದರೆ, ಅದು ತಮಿಳುನಾಡು ರಾಜಕೀಯದಲ್ಲಿ ಅತ್ಯಂತ ವಿಲಕ್ಷಣ ಮತ್ತು ಅಭೂತಪೂರ್ವ ಬದಲಾವಣೆಗೆ ಸಾಕ್ಷಿಯಾಗಲಿದೆ. ವಿಜಯ್ ಅವರ ಅಧಿಕಾರದ ಕನಸಿಗೆ ಅಡ್ಡಿಯಾಗಲು ದ್ರಾವಿಡ ಪಕ್ಷಗಳು ಒಟ್ಟಾಗಿ ನಿಲ್ಲುವ ಸಾಧ್ಯತೆಗಳನ್ನು ಈ ಬೆಳವಣಿಗೆ ಪುಷ್ಠೀಕರಿಸಿದೆ.

[t4b-ticker]
error: Content is protected !!