ಬಿಟ್‌ಕಾಯಿನ್ ಹಗರಣ : ಕಿಂಗ್‌ಪಿನ್ ಶ್ರೀಕಿ ಮತ್ತೆ ಅರೆಸ್ಟ್ ಕಾಂಗ್ರೆಸ್ ನಾಯಕನಿಗೆ ಸಂಕಷ್ಟ ?

Picture of Savistara

Savistara

Bureau Report

ಮಂಗಳೂರು/ಬೆಂಗಳೂರು : ಬಿಟ್ಕಾಯಿನ್ ಹಗರಣದಕಿಂಗ್‌ಪಿನ್ ಶ್ರೀಕಿಯನ್ನು ಇಡಿ ಅಧಿಕಾರಿಗಳು ಬಂಧಿಸಿದ್ದು, ಇದರೊಂದಿಗೆ ಮೊಹಮ್ಮದ್ ನಲಪಾಡ್‌ಗೆ ಮತ್ತೆ ಸಂಕಷ್ಟ ಎದುರಾಗಿದೆ.ಸರ್ಕಾರದ ಇ-ಪ್ರೊಕ್ಯೂರಮೆಂಟ್ ವೆಬ್‌ಸೈಟ್‌ ಹ್ಯಾಕ್ ಮತ್ತು 4.5 ಕೋಟಿ ರೂ. ಅಕ್ರಮ ವಹಿವಾಟಿನ ಹಳೆಯ ನಂಟಿನ ಬಗ್ಗೆ ಇಡಿ ತನಿಖೆ ಚುರುಕುಗೊಳಿಸಿದೆ.

ಈ ಹಿಂದೆ ಏಪ್ರಿಲ್ 2024ರಲ್ಲಿ ಶಾಸಕ ಹ್ಯಾರಿಸ್‌ ಮತ್ತು ನಲಪಾಡ್ ನಿವಾಸಗಳ ಮೇಲೆ ಇಡಿ 15 ಗಂಟೆಗಳ ಕಾಲ ಸುದೀರ್ಘ ದಾಳಿ ನಡೆಸಿತ್ತು. ಶ್ರೀಕಿ ಹ್ಯಾಕ್ ಮಾಡಿದ ಬಿಟ್‌ಕಾಯಿನ್‌ಗಳನ್ನು ಕ್ರಿಸ್ಟೋ ಮೂಲಕ ಹಣವಾಗಿ ಪರಿವರ್ತಿಸಿ, ಲೇಯರಿಂಗ್ ಪದ್ಧತಿಯಲ್ಲಿ ವರ್ಗಾಯಿಸಿರುವುದು ಅಂದು ಪತ್ತೆಯಾಗಿತ್ತು.

ಶ್ರೀಕಿ, ನಲಪಾಡ್ ಸಹೋದರ ಉಮರ್ ನಲಪಾಡ್‌ನ ಸಹಪಾಠಿಯಾಗಿದ್ದರಿಂದ ಈ ಸ್ನೇಹ ಆರಂಭವಾಗಿತ್ತು. ಶ್ರೀಕಿ ಮುಂಬೈ ಮೂಲದ ವ್ಯಕ್ತಿಯೊಬ್ಬನ ಮೂಲಕ ನಲಪಾಡ್‌ ಖಾತೆಗೆ 10 ಲಕ್ಷ ರೂ. ವರ್ಗಾಯಿಸಿದ ಆರೋಪ ಅಂದೇ ಕೇಳಿಬಂದಿದ್ದು, ಒಟ್ಟಾರೆ 4.5 ಕೋಟಿ ರೂ. ಅಕ್ರಮ ವಹಿವಾಟಿನ ಶಂಕೆ ವ್ಯಕ್ತವಾಗಿತ್ತು.ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಹಗರಣದ ಕಿಂಗ್‌ಪಿನ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಸೇರಿದಂತೆ ಮೂವರನ್ನು ಬಂಧಿಸಿದ್ದು, ಇದರ ಬೆನ್ನಲ್ಲೇ ಶಾಂತಿನಗರ ಶಾಸಕ ಎನ್‌.ಎ. ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್‌ಗೆ ಸಂಕಷ್ಟ ಎದುರಾಗುತ್ತಾ ಎಂಬ ಪ್ರಶ್ನೆಯೆದ್ದಿದೆ.

ಸದ್ಯ ರಾಜ್ಯ ಸರ್ಕಾರದ ಹಣ ಮತ್ತು ಡಿಜಿಟಲ್ ಆಸ್ತಿಗಳ ಲೂಟಿಯಲ್ಲಿ ಯಾರಿಗೆಲ್ಲಾ ಪಾಲು ಸಂದಿದೆ ಎಂಬುದು ಈಗ ಇಡಿ ತನಿಖೆಯಿಂದ ಹೊರಬರಬೇಕಿದೆ.

News Updates

ಎಸ್‌ಐಆ‌ರ್ ವಿಚಾರದಲ್ಲಿ ಬಿಜೆಪಿ ಕಾರ್ಯಕರ್ತರ ಬೆದರಿಸಿದರೆ ಸುಮ್ಮನಿರಲ್ಲ: ಪೊಲೀಸರಿಗೆ ಸಂಸದ ಕ್ಯಾ. ಚೌಟ ಎಚ್ಚರಿಕೆ – ಕಾಂಗ್ರೆಸ್ ತನ್ನ ಆರೋಪಗಳಿಗೆ ಸೂಕ್ತ ಸಾಕ್ಷ್ಯಾಧಾರಗಳನ್ನು ಒದಗಿಸಲಿ ಅಕ್ರಮವಾಗಿ ಮತ ರದ್ದು -ಮಾಡಲಾದ ವ್ಯಕ್ತಿಯನ್ನು ತಂದು ಚುನಾವಣಾಧಿಕಾರಿ ಮುಂದೆ ನಿಲ್ಲಿಸಲಿ: ಸಂಸದ ಸವಾಲು

[t4b-ticker]
error: Content is protected !!